Monday, February 13, 2017

ಅಂತರಾಳದಿ ನೂರು ಆಲೋಚನೆ




ಅಂತರಾಳದಿ ನೂರು ಆಲೋಚನೆ
ಮಾಡಬೇಕು ಒಂದು ಸಮಾಲೋಚನೆ
ಕೊಡಬೇಕು ಅವಕೆ ವಿಮೋಚನೆ
ಮನಕೆ ಬೇಕು ನೆಮ್ಮದಿಯ ಸಿಂಚನೆ

ಸಾಗರದ ನಡುವೇ ಆಕಸ್ಮಿಕ ಜನಿಸಿಸುವ
ತೀರಕೆ ಸೇರುವ ತವಕದಿ ಹರಿಯುವ
ತೆರೆಯಂತೆ ಮನದಲಿ ಹುಟ್ಟುವ
ಸಾವಿರ ಯೋಚನೆಯ  ತೆರೆಯ ಸರಮಾಲೆ

ಸಡಗರದಿ ಹೊರಟ ತೆರೆಗಳೆಲ್ಲವು
ಸೇರದೆ ಕರಗುವ ತೆರೆಗಳು ಹಲವು
ತೀರವ ಸೇರುವ  ತೆರೆಗಳು ಕೆಲವು
ಕರಗಿದ ತೆರೆಗೆ  ಸೇರಿದವರು ಚಿರಋಣಿ

ಕರಗಿದ ತೆರೆಗಳ ಆಸೆಹೊತ್ತ ಅಲೆಳು
ಬಂದು ಆಪ್ಪಳಿಸಿವೆ ಮರಳಿನ ತೀರಕೆ
ಜನಿಸಿದೆ ಗೊಂದಲದ  ಚಂಡಮಾರುತ
ಅದಕೆ ಸಿಕ್ಕ ನಾವಿಗ ನನ್ನ ಮನ

ಚಂಡಮಾರುತಕೆ ಸಿಕ್ಕ ನಾವಿಗನಂತೆ
ದ್ವಂದ್ವದ ಚಕ್ರವ್ಯೂಹಕೆ ಸಿಕ್ಕ ಅಭಿಮನ್ಯು ನಂತೆ
ವರಸದಿ ಒದ್ದಾಡುವ ಈ ಮನವನು
ಬಂದು ಕಾಪಾಡು ತಾಯಿ ನಿದ್ರಾದೇವಿ

ಮೇಲಿನಿಂದ ಮೌನ ತಪಸ್ವಿಯಂತೆ ಗತ್ತು
ಒಳಗೆ ಯೋಚನೆಗಳ ವಿಸ್ಮಯ ಜಗತ್ತು
ನಿನ್ನ ಮೌನಕ್ಕೆ ಒಂದು ಸಲಾಮು
ವಿಸ್ಮಯದ ಯೋಚನೆ ಕೋಟಿಗೆ ಸಲಾಮು

No comments:

Post a Comment