Tuesday, April 14, 2020

ನಿನ್ನ ವಿಶಾಲವಾದ ನಯನದಿ ಆಸೆಯ ಆಣೆಕಟ್ಟು ಕಟ್ಟಲೆ
ನಿನ್ನ ಕಿರುನಗಯೇ ತುದಿಯಲ್ಲಿ ಕನಸುಗಳ ಅಂತಃಪುರ ಕಟ್ಟಲೆ

Ninnee kirunageya tudiyalli kanasugaLa antapurav kattale..
Ninnee mugunattina honala beLakinali beLadingaLa okuLi aadalae..
Aha ninna saundaryakinta najooku hecchu
Ninna Andakkinta chenda hechu
Elladakinta namma samskritya sobagu hecchu..
Ninna achaarakinta vichaar chenda
Ninna haadiginta adara bhava chenda

ಹೊತ್ತಿಗೂ ಗೊತ್ತಾಗಂತೆ



ಜೀವನ  ನೋವು ನಲುವಿನ ಹಂದರ
ನಡುವೆ ಕನಸುಗಳ ಗೋಪುರ
 ಸೇತುವೆ ಕಟ್ಟುವ ಅತುರ

ನನ್ನ ತೋಳಲ್ಲಿ ತಲೆಯಿಟ್ಟು  ಮಲಗಿ
ಒಮ್ಮೆ ನಿನ್ನೆಯ ನೆನಪಿನ ದೋಣಿಯಲಿ ತೇಲುತ
ಮತ್ತೂಮ್ಮೆ ನಾಳೆಯ ಕನಸಿನ ಇಟ್ಟಿಗೆ ಜೋಡಿಸುತ

ಮರಳಿನ ಗಡಿಯಾರ ಮಲಗಿಸಿ ನಿಲ್ಲಿಸಿದಂತೆ
ಹೊತ್ತಿಗೂ ಗೊತ್ತಾಗಂತೆ ಹೊತ್ತು ಹೋಗುವಾಗ,
ನಾವೇ ಪರಪಂಚ, ನಮ್ಮದೇ ಪರಪಂಚ !!

Friday, January 25, 2019

ಗುರುವಾರದ ಗುರುತು


ಗುರುವಾರದ  ಗುರುತು
ಗುರುರಾಯರ ಆಶೀರ್ವಾದ
ನಮ್ಮ ಪ್ರೀತಿಯ ಸಾಕ್ಷಾತ್ಕಾರ
ನನ್ನ ಕೈಗಿಟ್ಟಳು
ಮುದ್ದು ಬಾಲ ಚಂದಿರ

ಚಂದಿರನಂತೆ ಸುಂದರನಿವನು
ಮೊಲದಂತೆ ಮನೆತುಂಬ ಓಡಾಡುವನು
ಮುಗುಳುನಗೆಯಲ್ಲಿ ಜಗವೇ ಗೆಲ್ಲುವನು
ತೊದಲುನುಡಿಯಲ್ಲಿ ಕಥೆಯೇ ಬರೆಯುವನು
ತನ್ನದೇ ಸಂಗೀತದಲ್ಲಿ ತಲ್ಲೀನಿವನು
ತನ್ನ ನಾಟ್ಯಕ್ಕೆ ತಾನೇ ನಗುವನು

ಅವನ ತು೦ಟಾಟಕೆ ಸೋತು, ಸುಸ್ತಾಗಿ
ಯಾವಾಗ ಮಲಗುವನು ಅಂತ ಕಾಯುವುದು
ಅವನು ಮಲಗಿದಾಗ
ಮತ್ತೆ ಯಾವಾಗ ಏಳುವನು ಅಂತ ಕಾಯುವುದು
ಅವನು ಎದ್ದಾಗ
ಮತ್ತೆ ಹಬ್ಬದ ವಾತಾವರಣ

ಕುಂತಲ್ಲೇ ಕೂಡದವನು
ನಿಂತಲ್ಲೇ ನಿಲ್ಲದವನು
ಕಂಡಲ್ಲೆ ಕಾಣದವನು
ಕ್ಷಣದಲ್ಲೇ ನಗುವನು
ಕ್ಷಣದಲ್ಲೇ ಅಳುವನು
ಮನದಲ್ಲೇ ನೆಲಿಸುವನು





Tuesday, March 28, 2017

ತೊಟ್ಟಿಲಾಧಿಪತಿ ಬಂಗಾರಿಗೆ



ತೊಟ್ಟಿಲಾಧಿಪತಿ  ಬಂಗಾರಿಗೆ
ಸರ್ವಾಧಿಕಾರಿ ಸಿಂಗಾರಿಗೆ
ನಿದ್ರಾಲಂಕಾರಿ ಮುಂಗಾರಿಗೆ
ಓಡಲಾಧಿಕಾರಿ ಮಂದಾರಿಗೆ

ಜೋಳಿಗೆಯಲಿ ಮಲಗಿರುವ ಕುಮಾರಂಗೆ
ಜೋ ಜೋ ಜೋಕಾಲಿ ಜೀಕ ಹಾಕುವೆ
ಅರೆ ನಿದ್ರೇಲಿ ಕುಂಯ ಕುಂಯ ಅಂದಾಗೆ
ಸೊ ಸೊ ಸೋಬಾನ ಪದವ ಹಾಡುವೆ

ಅಳುವೇ ಯಾಕೆ ಕಂದ ಕೋಪಾನ
ಅವ್ವ ಕೊಡತಾಳ ನಿಂಗೆ ಊಟಾನ
ಆಜ್ಜಿ ಹಾಡತಾಳ ನಿಂಗೆ ಜೋಗುಳಾನ
ಅಜ್ಜ ಮಾಡತಾನ ನಿಂಗೆ ಸಾಂತ್ವಾನ

ಅಮ್ಮನ ಮುದ್ದಿನ ಮೂರುತಿ
ಅಪ್ಪನ ತೋಳಲ್ಲಿ ಕೂರುತಿ
ಬೆಳಸುವೆ  ನಮ್ಮನೆ ಕೀರುತಿ
ದೇಶಕ್ಕೆ ನೀನಾಗು ಸತ್ಯದ ಸಾರಥಿ 











Thursday, March 23, 2017

ವೇದಾಂತ, ನಮ್ಮನೆಯ ನಂದಾ ದೀಪ !!


ಸರ್ವದೈವ ಅಶಿರ್ವದಿಸಿದ ಹೂವೇ 
ದೇವಲೋಕದಿಂದ  ಜಾರಿದ ಪಾರಿಜಾತವೇ 
ನಮ್ಮ ಮನೆಯ ನಂದಾ ದೀಪವೇ

ನಿನ್ನ ಅದ್ಜ್ಞೆಯು ಅಳುವೇ 
ನಿನ್ನ ಭಾಷೆಯು ಅಳುವೇ 
ಆದರೂ ಆಗಾಗ ನಗುವೇ 

ಯಾರಿತ್ತರು ಕಚುಗುಳಿಯ ನಿನಗೆ 
ನಗುವಂದೆಸಾಕು ನಮ್ಮ ನೋವಿಗೆ 
ಕಂದನೀನೆ ಕಾರಣ ನಮ್ಮ ನಗುವಿಗೆ  

ನಮ್ಮ ಪ್ರೀತಿಯ ಮಮಕಾರ  
ನಮ್ಮ ಬದುಕಿನ ಸಾಕ್ಷಾತ್ಕಾರ 
ನಮ್ಮ ಕನಸಿನ ಪ್ರತಿಕಾರ 

ಮಡಿಲಲ್ಲಿ ಮಲಗಿರುವ ಕಂದ 
ನೀನು ಚಂದಿರನಿಗಿಂತ ಚೆಂದ 
ನಿನ್ನ ಮಂದಹಾಸ ಹೂವಿಗಿಂತ ಚೆಂದ
 




Monday, March 6, 2017

ಯುವ ಪೀಳಿಗೆ


ಟ್ವಿಟ್ಟರ್ ಫೇಸ್ ಬೂಕ್ ನ ಪೀಳಿಗೆ 
ಸೋಶಿಯಲ್ ಸ್ಟೇಟಸ್ ನ ಬಾಳಿಗೆ 
ಮಾಡರ್ನ ಸಿಟಿ ಲೈಫಿಗೆ 
ಒಂದು ಸಲಾಮು 

ವಾಟ್ಸಾಪ್ ನಡೆಸುವ ಚಾಟಿಗೆ
ಫೆಸ್ ಬೂಕ್ ಮಾಡಿಸುವ ದೋಸ್ತಿಗೆ 
ಗೂಗಲ್ ತೋರಿಸುವ ದಾರಿಗೆ
ಇವರು ಗುಲಾಮು

ಬಲಿಯಾಗಿಹರು ಬಾರಿನ ಚಾಳಿಗೆ
ಸಿಗುವರು ಪಬ್ಬಿನಲ್ಲಿ ಸಂಜೆಗೆ
ಕಳೆಯುವರು ಬಾಳೆಲ್ಲ ಮಂದಗೆ
ಬೇಕಿದೆ ಎಲ್ಲರಿಗು  ಮಲಾಮು

ಹೋಗುಬೇಕು  ಡೆಮೋಕ್ರಸಿಯ ಶಾಲೆಗೆ
ಮಾಡುವರು ಆಗ ದೇಶದ ಏಳಿಗೆ 
ನಾಯಕರು ಇವರೇ ನಾಳೆಗೆ
ಬೇಕಿದೆ ದೇಶಕ್ಕೆ  ಹೊಸ ಕಲಾಮ್








Thursday, February 23, 2017

ಆರು ನೀ ಮನವೇ?


ಆರು ನೀ ಮನವೇ?
ಆವುದು ನಿನ್ನ ಗುಣವೇ?    ।।ಪ।।

ಸಾವಿಲ್ಲದ ಹಸಿ ನೆನಪನು 

ಬೆನ್ನಿಗೇರಿಸಿದ ಬೆತಾಳನಂತೆ ಸುತ್ತಾಡುವ ವಿಕ್ರಮನೆ ?

ನೋವಿಲ್ಲದೆ ಹಗಲಿರುಳು ದುಡಿಯುತ 

ನಾಡಿಗೆ ದೇವರಂತೆ ಅನ್ನವಿಡುವ ರೈತನೇ?

ಪಾವನದಿ ಧ್ರಿಢ ಇಚ್ಛೆಯಲಿ 

ರಾಮನನು ಹನುಮನಂತೆ ಕಾಯುವ ಶಬರಿಯೇ 

ಯವ್ವನದಿ ಚಿಂತೆಗೆ ಚಿತವಿತ್ತು 

ಅಂತರಂಗವನ್ನು ಮೃದಂಗದಂತೆ ತಣಿಸುವ ಯೋಗಿಯೇ 

ತನ್ನ ತಾನೇ ಮೈ ಮರೆತು 

ನೀಲಾಕಾಶದಿ ಸ್ವಇಚ್ಛೆಯಂತೆ ಹಾರಾಡುವ ಪಕ್ಷಿಯೇ?

ಆರು ನೀ ಮನವೇ?

ಆವುದು ನಿನ್ನ ಗುಣವೇ?