Tuesday, June 29, 2010

ಉತ್ತರ ಧ್ರುವದಿಂ ದಕ್ಷಿನ ಧ್ರುವಕು

ಕಳೆದ ಹಲವಾರು ದಿನಗಳಿಂದ karnatic, ಭಾವಗೀತೆ ಕೇಳ್ತಾ ಕೇಳ್ತಾ ಕನ್ನಡ ಹಳೆ ಹಾಡು ಕೇಳೆ ಇರ್ಲಿಲ್ಲ. ಅದಕ್ಕೆ ಸುಮ್ನೆ ಒಂದು ರೌಂಡ್ ನಮ್ಮ ಫೆವರೆಟ್ ಹಾಡು ಕೇಳೋಣ ಅಂತ ಮೊಬೈಲ್ ನಲ್ಲಿ ಪ್ಲೇ ಲಿಸ್ಟ್ ಶುರು ಮಡಿದ ಕೂಡಲೇ

" ಉತ್ತರ ಧ್ರುವದಿಂ
ದಕ್ಷಿನ
ಧ್ರುವಕು
ಚುಂಬಕ ಗಾಳಿಯು ಬಿಸುತಿದೆ"

ಹಾಡು ಶುರುವಾಯ್ತು. ಹಾಡು ಎಷ್ಟು ಮದುರ ಎಷ್ಟು ಸಲ ಕೇಳಿದ್ರು ಇನ್ನು ಹಚ್ಚು ಹಸರಾಗಿದೆ.
ಹಾಡು ಕೇಳ್ತಾ ಕೇಳ್ತಾ , ಹಾಡು ನನಗೆ ಎಷ್ಟು ಸಮಂಜಸವಾಗುತ್ತಲ್ವೆ ಅಂತ ಯೋಚನೆಯ ಹೊಂಡಕ್ಕ ಬಿದ್ದೆ. USA ನಿಂದ sydneyಗೆ ಬಂದ ದಿನಗಳು ನೆನಪಾಗ್ತಾ ಇದ್ದವು. ಹಾಡು ನನಗ ಬರದಾರೇನೋ ಅನಸ್ತಿತ್ತು. Newyork ನಿಂದ sydneyಗೆ ಜೀವನದ ಪಯಣ ಸಾಗಿತ್ತು. ಚುಂಬಕ ಗಾಳಿ ಜೊತೆ ಹೊತೆಗೆ ನಾನು ತೇಲಿ ಉತ್ತರದಿಂದ ದಕ್ಷಿಣಕ್ಕೆಬಂದಿದ್ದೆನಿ ಏನೋ ಅನಸಿತ್ತು.

ಜೀವನವೆಂಬ ರೈಲುಬಂಡಿ ನನ್ನನ್ನು ಊರಿಂದ ಓರಿಗೆ, ದೇಶದಿಂದ ದೇಶಕ್ಕೆ ಕರೆದೊಯ್ದಿತ್ತು. ನನ್ನ ಸ್ಟಾಪ್ ಬಂತು ಅ೦ದಕೊ೦ಡಾಕ್ಷನ ಮತ್ತೆ ಇನ್ನೊಂದು ಸ್ಟಾಪ್ ಗೆ ಕರೆದೊಯ್ಯುತ್ತಿತ್ತು. ಒಂದರಿಂದ ಇನ್ನೊಂದು ಹೋಗುತ್ತಾ ಹೋಗುತ್ತಾ ರೋಣದಿಂದ, ಧಾರವಾಡ ಅಲ್ಲಿಂದ ಹುಬ್ಬಳ್ಳಿ, ಹುಬ್ಲಿಯಿಂದ ಬಂಗಳೂರು, ಬೆಂಗಳೂರಿನಿಂದ Newyork, ಅಲ್ಲಿಂದ Philadelphia, phillyಯಿಂದ sydney. ಅವಾಗ ಇವಾಗ ಮನಸು ಹೇಳ್ತಾ ಇರುತ್ತೆ "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ". ಮನಿ ಮಠ ಎಲ್ಲ ಬಿಟ್ಟು ಪರದೇಸಿ ಹಂಗ ಎಸ್ಟ ದಿನ ಹಿಂಗ ಇರುದಪ ಅನಸುತ್ತೆ. ಅಲೆಮಾರಿ ಜೀವನ ಬೇಸತ್ತು ಹೋಗಿದೆ ಅಂತ ಮೇಲಿಂದ ಅನಸಿದರೂ ಎಲ್ಲೊ ಅಂತರಾಳದಲ್ಲಿ ಹೊಸ ದೇಶ, ಭಾಷೆ, ಸಂಸ್ಕ್ತ್ರಿತಿ, ಸಂಸ್ಕಾರ ನೋಡಲು, ಅನುಭವಿಸಲು ಸಿಗುತ್ತೆ ಅಂತ ಏನೋ ಒಂದು ತೃಪ್ತಿ. ಪ್ರತಿಯೊಂದು ಊರಿಗೆ, ದೇಶಕ್ಕೆ, ಭಾಷೆಗೆ ತನ್ನದೇ ಅದ ಒಂದು ವೈಶಿಷ್ಟ್ಯ.

ಸ್ಕೂಲ್ ನಲ್ಲಿ ಬಾಲ್ಯದ ನೆನಪು, ಕಾಲೇಜ್ನಲ್ಲಿ ಸ್ಕೂಲಿನ ನೆನಪು, ಜಾಬ್ನಲ್ಲಿ ಕಾಲೇಜ್ ನೆನೆಪು. ಹಂಗೆ ಹೊಸ ಪ್ರಾಜೆಕ್ಟ್ ನಲ್ಲಿ ಹಳೆ ಪ್ರಾಜೆಕ್ಟ್ ಮೇಟ್ಸ್, ಹಳೆ ವರ್ಕ್ ಕಲ್ಚರ್, ಹಳೆ ಪ್ರಾಸೆಸ್ ನೆನಪು. ಅದೇ ಅಲ್ಲವೇ ಜೀವನ ಹಳೆಯ ಸವಿ ನೆನಪನ್ನು ಸವಿಯುತ್ತ ಹೊಸದತ್ತ ದಾಪುಗಾಲು ಹಾಕುವದು. ಆದರೆ ಎಸ್ಟೆ ಊರು ಸುತ್ತಲಿ, ದೇಶ ಸುತ್ತಲಿ ನಮ್ಮ ಪರ್ಸನಾಲಿಟಿಗೆ ನಾವು ಹುಟ್ಟಿ ಬೆಳೆದ ಊರಿನ ಟಚ್ ಇದ್ದೆ ಇರುತ್ತೆ. ಒಂದು ಹಾಡು ಎಂತೆಂತ ಏನಪು ಹುಟ್ಟಿ ಹಾಕ್ತವ ಅಂತ ಯೋಚಿಸಿ ನನ್ನಸ್ಟಕ್ಕೆ ನಾನೇ ನಕ್ಕು ಸುಮ್ಮನಾದೆ :)

Wednesday, June 9, 2010

ಬಾಳ ನೌಕೆ

ಪ್ರಪಂಚ ಹಿಂದೆ ಹಾಕಲು ಒಡಿದವರೆಸ್ಟು?
ಹಿಂದೆ ಬೀಳುವ ಭಯದಿಂದ ಒಡಿದವರೆಸ್ಟು?
ಮಾಯದಜಿಂಕೆ ಬೆನ್ನತ್ತಿದಾಗ ಹಿಂದೆ ಯಾರು? ಮುಂದೆ ಯಾರು?


ಜೀವನದ ಜ೦ಜಾಟದಲ್ಲಿ ಬೆಂದವರೆಸ್ಟು?
ಜಗತ್ತಿನ ಜೂಜಾಟದಲ್ಲಿ ಸೋತವರೆಸ್ಟು?
ಬಾಳಿನಲ್ಲಿ ಬೇಸರದಿಂದ ನೊಂದವರೆಸ್ಟು?


ಕಾಲ ಚಕ್ರ ಉರಳ್ತಾನೆ ಇರಬೇಕು
ಗಡಿಯಾರದ ಮುಳ್ಳು ಸುತ್ತತಾನೆ ಇರಬೇಕು
ಜೀವನದ ನೌಕೆ ತೇಲ್ತಾನೆ ಇರಬೇಕು


ಯುಗಾದಿ ಮತ್ತೆ ಬರುತ್ತೆ
ಹಸಿರು ಮತ್ತೆ ಚಿಗಿರುತ್ತೆ
ಹೊಸ ನೀರು, ಹೊಸ ಗಾಳಿ, ಹೊಸ ಬೆಳಕು ಬಂದೆ ಬರುತ್ತೆ

Wednesday, June 2, 2010

ನಮ್ಮದು ಭಾರಿ ಲೆವಲ್ರಿ ...ನಮ್ಮ ಲೆವೆಲ್ ತಕ್ಕ ಕನ್ಯಾ ಸಿಕ್ಕಿಲ್ಲರಿ ..

ಎಲ್ಲಾರಿಗೂ ವಯಸ್ಸು ಅಕ್ಕವ,
ಹಂಗ ನಂಗು ವಯಸ್ಸು ಆಗ್ಯಾವ
ಮನ್ಯಾಗ ಹಿರಯರು ಅಂದಾರ ಲಗ್ನ ಮಾಡ್ಕೊಳಲೊ ಬೆಪ್ಪೆ..

ವಯಸ್ಸಿನ ಹುಡ್ಗ ಇವ,
ಲಗ್ನದ ಹುಳ ತೆಲ್ಯಾಗ ಹೊಕ್ಕವ
ಸುರು ಆತು ಲೆಕ್ಕಾಚಾರ ಎಂತ ಹುಡಗಿನ ನಾ ಒಪ್ಪೇ ?

ರಂಬೆ ಊರ್ವಶಿ ಹುಡಿಕಿ ತರುವ ತವಕ
ಹಾರ ಕುದರಿ ಬೆನ್ನ ಏರಿ ಹಾರಿ ಹೋಗೋ ಹುರುಪು
ಜೋಡಿಯಾಗಿ ದೇಶ ಸುತ್ತಿ ಚೈನಿ ಹೊಡಿಯೋ ಕನಸು ತಪ್ಪೇ?

ನಮಗೇನು ಗೊತ್ತು ಮುಂದಿನ ಹಕ್ಕಿಕತ್ ಏನಂತ
ಗೊತ್ತಾಯ್ತು ಮಾಡರ್ನ್ ಹುಡಿಗ್ಯಾರ ಲೆವಲ್ ಭಾರಿ ಅಂತ
ನೋಡಿ ಅನಸ್ತು ನಾ ಬಾವ್ಯಾಗಿನ ಕಪ್ಪೆ

ಒನ್ನೆದಾಕಿ ನೋಡಾಕ ಚೂರು ಕಪ್ಪು
ಮೂಗ ಮುರಕೊಂತ ಕೇಳ್ತಾಳ
ಆಕಳು ಕಪ್ಪಾದರೆ ಹಾಲು ಕಪ್ಪೇ?

ಮತ್ತೊಂದು ಕನ್ಯಾ ವಯಸ್ಸು ಜಾಸ್ತಿ
ಕನ್ಯಾ ತೋರುಸು ಏಜೆಂಟ್ ಅಂತಾನ
ಹುನಿಸಿಮರ ಮುಪ್ಪಾದರೆ ಹುಳಿ ಮುಪ್ಪೇ?

ಮತ್ತೊಬ್ಯಾಕಿ , ಮಾತೆತ್ತೀದರ ಫಾರೆನ್ ಅ೦ತಾಳ
ಹೆಸರಿಗಿಂತ ಮುಂಚೆ ಪಗಾರ ಕೇಳ್ತಾಳ
ಇಕಿನ ಕಟಕೊ೦ಡ್ರ ಕೈಗೆ ಚಿಪ್ಪೇ

ದೊಡ್ಡವರು ಹೇಳ್ತಾರ ಕನ್ಯಾ ಹುಡುಕೋದು ಸರಳಿಲ್ಲ
‘3 roses’ ಚಾದ೦ಗ ಬಣ್ಣ, ರುಚಿ, ಶಕ್ತಿ ಎಲ್ಲ ಸಿಗಂಗಿಲ್ಲ
ಎಲ್ಲೆರ ಸ್ವಲ್ಪಕಂಪ್ರೋಮೈಸ್ ಆಗಬೇಕು ‘ಅಪ್ಪಿ’

ಹಿಂಗ ಎಲ್ಲಿತನಕ ಕಾಯೋದು
ಎಸ್ಟ ಅಂತ ಕನ್ಯಾ ನೋಡೋದು
ಹಿಂಗ ಅದ್ರ ಮುಂದ ಕೈಯಾಗ್ ಚಿಪ್ಪೆ