Saturday, December 11, 2010

ನೀನೆ ನನ್ನ ಪರಪ೦ಚ ...

ಪ್ರೀತಿ ಅಂದರೇನು? ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸ್ತಾರೆ ? ಪ್ರೀತಿ ಆಳ ಕಂಡು ಹಿಡಿದವರ್ಯಾರು? ಆ ಆಳವನ್ನು ಅರಿಯಲು ತ್ಯಾಗದ ಅವಶ್ಯಕತೆ ಎಷ್ಟು? ಒಬ್ಬರು ಇನ್ನೊಬ್ಬರಿಗಾಗಿ ಏನನ್ನು ಅಥವಾ ಯಾರನ್ನು ತ್ಯಜಿಸುತ್ತಾರೆ ಅನ್ನುವ ಮೂಲಕವೇ ಪ್ರೀತಿಯನ್ನು ಅಳಿಯಬೇಕಾ? ಪ್ರೀತಿಗೆ ತ್ಯಾಗಕ್ಕೆ ಎ೦ತಹ ಸ೦ಬ೦ಧ? ಎರೆಡಕು ಏನು ಭಾ೦ದವ್ಯ? ಪ್ರೀತಿಯನ್ನು ತ್ಯಾಗವೆ೦ಬ ಇ೦ಚುಪಟ್ಟಿಯಿ೦ದಲೆ ಅಳಿಯಬೇಕಾ ? ಅದಕ್ಕೆ ಬೇರ್ಯಾವ ಮೌಲ್ಯಮಪಾನ ಸಾಟಿ ಇಲ್ವಾ ?

ಎರೆಡು ಪ್ರೀತಿಸುವ ಮನಸ್ಸುಗಳು ಸದಾ ಒಂದನ್ನೊಂದು ನೀನೆಸ್ಟು ನನ್ನನ್ನು ಪ್ರೆತಿಸ್ತೀಯಾ ಅ೦ತ ಯಕ್ಷಪ್ರಶ್ನೆಯನ್ನು ಹೆಗಲಮೆಲೆರಿಸಿಕೊ೦ಡೆ ಸವಾರಿ ಮಾಡುತ್ತಿರುತ್ತವೆ. ದೆವಾನ್ ದೇವತೆಗಳಾಗಿರಲಿ, ಮಹಾನ್ ಪ್ರೆಮಿಗಳಾಗಿರಲಿ, ಯುವ ಪ್ರೆಮಿಗಳಾಗಿರಲಿ ಈ ಯಕ್ಷ ಪ್ರಶ್ನೆ ಸದಾ ಇದ್ದೆ ಇರುತ್ತದೆ. ಎಸ್ಟೆ ವರ್ಷಗಳ ಪ್ರೀತಿಯಾಗಿರಲಿ, ಎಸ್ಟೆ ದಿನಗಳ ಪ್ರೆತಿಯಾಗಿರಲಿ ಪ್ರತಿಗಳಿಗೆಯಲ್ಲೂ ಎಲ್ಲ ಪ್ರೇಮಿಗಳೂ ಈ ಪ್ರಶ್ನೆಗೆ ಒಂದಲ್ಲ ಒಂದು ರೇತಿಯಿ೦ದ ಉತ್ತರ ಕೊಡ್ತಾನೆ ಇರ್ತಾರೆ.

ಸಹಸ್ರಾರು ಕೋಟಿ ಜನರಿರುವ ಈ ವಿಶಾಲ ಜಗತ್ತಿನ್ನಲ್ಲಿ ನಾನು ಒಬ್ಬ ವ್ಯಕ್ತಿ. ಅವಳೊಬ್ಬ ವ್ಯಕ್ತಿ. ನನಗೆ ಅವಳೇ ಪರಪಂಚ. ಅವಳಿಲ್ಲದೆ ಈ ಪರಪಂಚ ನನಗೆ ಶೂನ್ಯ. ಅವಳಿಗೆ ನಾನೇ ಪರಪ೦ಚ. ಅವಳಿಗೆ ನಾನೇ ಪರಪಂಚ ಅನ್ನೋದೆ ಈ ಜೀವಕ್ಕೆ ಸಮಾಧಾನ. ನನ್ನವಳಿಗೆ ನಾನೇ ಪರಪಂಚ ಅನ್ನೋ ಭಾವನೆಯ ಸಾಕು ಬದಕು ಕಟ್ಟಲು, ಕನಸು ಹೆಣೆಯಲು. ಆ ಭಾವವೇ ಯಾವ ತ್ಯಾಗಕ್ಕೂ ಸಿದ್ದ ಮಾಡುತ್ತದೆ. ಆ ತ್ಯಾಗವೇ ಪ್ರೀತಿಯಂಬ ದೀವಿಗೆಗೆ ಎಣ್ಣೆಯಾಗಿ ಸದಾ ಬೆಳಗುವಂತೆ ಮಾಡುತ್ತದೆ. ತ್ಯಾಗವೊಂದೆ ಪ್ರೀತಯ ಮುಲ್ಯಮಾಪನ ಅನ್ನೋದು ಸತ್ಯವಲ್ಲವಾದರು ತ್ಯಾಗ ಪ್ರೀತಿಯ ಒಂದು ರೂಪ.

ಪುಟ್ಟನ೦ಜಿ ಇಲ್ಲದೆ ರತ್ನನ ಪರಪಂಚ ಇಲ್ಲ
ನೀನಿಲ್ಲದೆ ನನ್ನ ಪರಪಂಚ ಇಲ್ಲ
ನಾನೇ ನಿನ್ನ ಪರಪಂಚ ಎಂಬ ಭಾವವೆ ಸಾಕು
ಹೃದಯ ಅರಳಲು
ಕನಸು ಚಿಗಿಯಲು
ಬದುಕು ಕಟ್ಟಲು
ನೀನೆ ನನ್ನ ಪರಪ೦ಚ ...
ನೀನೆ ನನ್ನ ಪರಪ೦ಚ ...

Sunday, November 28, 2010

ಶ೦ಖದಿ೦ದ ಬಂದ್ರನ ತೀರ್ಥ..

ಮಾತಾಡಿದರ ಮುತ್ತಿನಂಗ ಇರಬೇಕು
ಮಾತಾಡಿದರ ಸಲಾಕಿಹಂಗ ಇರಬೇಕು
ಹಂಗ ಮಾತಾಡಬೇಕು ಹಿಂಗ ಮಾತಾಡಬೇಕು
ಅಂತ ಬಸವಣ್ಣ ಹೇಳಿದ್ದನ್ನು
ಮಸ್ತಾರ್ ಸಾಲ್ಯಾಗ ಕಲಿಸಿದ್ರು...


ಮಾತಾಡಿದರ ಅರ್ಥ ಇರಬೇಕು
ಪ್ರತಿ ಶಬ್ದದಾಗ ತೂಕ ಇರಬೇಕು
ಮನಸನೆ೦ದು ಮಾತನ್ಯಾಗ ಇರಬೇಕು
ಮಾತನೆ೦ದು ಮನಸ್ನ್ಯಾಗ ಇರಬೇಕು
ಅಂತ ನಮ್ಮಮ್ಮ ಹೇಳಿದ್ದಳು


ಯಾರು ಹೇಳಿದ್ದು ಎಷ್ಟು ತೆಲ್ಯಾಗ ಹೊಕ್ಕಿರ್ಲಿಲ್ಲ
ಇವತ್ತ ನನ್ನಾಕಿಗೆ ಏನೋ ಅಂದ್ಯಾ,
ಆಕಿ ಏನ ತಿಳಕೊ೦ಡ್ಳು
ಆವಾಗ ನಮ್ಮಮ್ಮ ನಮ್ಮ ಮಾಸ್ತರ
ಹೇಳಿದ್ದು ನೆನಪಿಗೆ ಬಂದಿತ್ತು ...

"ಅದಕ್ಕ ಅನ್ನುದು ಶ೦ಖದಿ೦ದ ಬಂದ್ರನ ತೀರ್ಥ ಅಂತ ...."
ಎಲ್ಲಿ೦ದ ಬೇಕು ಅಲ್ಲಿ೦ದ ಬ೦ದ್ರ ಲಗೂನ ತಿಳದ ತಿಳಿತೈತಿ .."

Saturday, November 20, 2010

ಬಚ್ಚಿಟ್ಟ ಬುತ್ತಿ ..

ನಾ ಕೊಟ್ಟ ಗೆಜ್ಜೆ ಕಟಗೊ೦ಡು
ಲಜ್ಜೆಯಿ೦ದ ನಾಚಗೊ೦ಡು
ಹೆಜ್ಜಿ ಮ್ಯಾಲ ಹೆಜ್ಜಿ ಹಕ್ಕೊ೦ಡು
ನೆಡೆವ ಅವಳನ್ನು,
ಅವಳ ತು೦ಟ ನಗೆಯನ್ನು,
ಹೊಳೆವ ಕ೦ಗಳನ್ನು
ನನ್ನ ಕಣ್ಣ ರೆಪ್ಪೆಯಲಿ ಸೆರೆ ಹಿಡಿದು
ಎದೆಯ ಗೂಡಲಿ ಬಚ್ಚಿಟ್ಟು
ಅವಳ ನೆನಪಾದಗೊಮ್ಮೆ
ಬಚ್ಚಿಟ್ಟ ಬುತ್ತಿಯ ಬಿಚ್ಚಿ
ತಿನ್ನುವ ಬಾಗ್ಯ ನನ್ನದಿರಲಿ !!

Monday, October 25, 2010

ನನ್ನಾಕಿ ..ನಾಚಿಕೊ೦ಡಾಗ ಇನ್ನು ಚಂದಾಕಿ ..

ಆಕಿ ಮಾಡ್ಯಾಳ ಮೋಡಿ
ನಾ ಆಗೀನಿ ಮೂಡಿ
ಆಕಿಗೆ ಹೇಳಬೇಕು ಕಾಡಿ
ನಮ್ಮಿಬ್ಬರದು ಎಂತ ಜೋಡಿ

ನಂದು ಆಕಿದು ಜೋಡಿ
ಹೇಳಿ ಮಾಡಸ್ತಂಗ್ ಐತಿನೋಡ್ರಿ
ನಾನು ಆಕಿ ಕೂಡಿ
ನೆಡ್ಸಬೆಕು ಜೀವನದ ಸ್ಕೊಟರ ಗಾಡಿ

ನನ್ನ ನೋಟಕ್ಕ ನಗೆಯ ಚೆಲ್ಲಿ
ಕರ್ಪೂರದಂಗ ಕರಗ್ತಾಳ
ನನ್ನ ಮಾತಿಗೆ ಹುಬ್ಬೇರಿಸಿ
ಹೌದು ಹೌದು ಅಂತಾಳ

ಆಕಿ ಕಣ್ಣಾಗ ಕಣ್ಣಿಟ್ಟು ನೋಡೀದ್ರ
ನಾಚಿ ನೀರ್ ಆಗ್ತಾಳ
ಆಕಿನ ಹೊಗಳೀದ್ರ
ಹಾರಿ ಹಕ್ಕಿ ಆಗ್ತಾಳ

ಶೆಟ್ಟರ ಹುಡಗಿ ಸೆಟಗೊ೦ಡ್ರ
ಬಾಳ ಚೆಂದ ಕಾನತಾಳ
ಸಾಫ್ಟ್ವೇರ್ ಹುಡಗಿ ನಾಚಕೊ೦ಡ್ರ
ಮಿರಿ ಮಿರಿ ಮಿಂಚತಾಳ

Sunday, October 24, 2010

(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ಹೆಂಗೋ ಏನೋ BE ಮುಗುಸು
ಎಲ್ಲಾ ಕಂಪನಿಗೆ ಅಪ್ಲೈ ಮಾಡು
ಸಿಕ್ಕಿದ್ ಕಂಪನಿ ಜಾಇನ್ ಆಗು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ವೀಕೆಂಡ್ ಆಫೀಸ್ಗೆ ಹೋಗಿ ಬ್ರೌಸಿಂಗ್ ಮಾಡು
ಕ್ಲೈಂಟ್ ಉಗಿಯೋವಾಗ ಮ್ಯೂಟ್ ಮಾಡಿ ಹರಟೆ ಹೊಡಿ
ಕ್ವಾರ್ಟರ್ ಏಂಡ್ ಗೊಮ್ಮೆ ರೆಸಾರ್ಟ್ ಹೋಗಿ ಕ್ಯಾಕಿ ಹೊಡಿ
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ವರ್ಷಕೊಮ್ಮೆ ಹೈಕ್ ತೊಗೋ
ಒಕೆಯಾದ್ರೆ ಇನ್ನೊಂದು ವರ್ಷ ಅಲ್ಲೇ ಕೊಳಿತಿರು
ಬೇಜಾರಾದ್ರೆ ಇನ್ನೊಂದು ಕಂಪನಿಗೆ ಜಂಪ್ ಹೊಡಿ
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ಆಫಶೋರ್ ಇದ್ದವರಿಗೆ ಆನ್ಸೈಟ್ ಚಾನ್ಸ್ ಬೇಕು
ಆನ್ಸೈಟ್ ಇದ್ದವರಿಗೆ ಆಫಶೋರ್ ಹುಡಗಿ ಬೇಕು
ಎರೆಡು ಸಿಗದೇ ಮುವತ್ತಾದ್ರೆ ಸಿಕ್ಕವರು ಶಿವಾ ಅ೦ದು ರೈಟ್ ಹೇಳು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ಜೋಡಿಯಾಗಿ ಸಿರಿಯಲ್ಸ್ ತಿಂದು ಆಫೀಸ್ ಹೋಗು
ಮದ್ಯಹ್ನದೊತ್ತು ಆಫೀಸ್ ನಲ್ಲೆ ಲ೦ಚ್ ಮಾಡು
ಡಿನ್ನರ್ ನಲ್ಲಿ ಬರ್ಗರ್ ತಿ೦ದು ಗುಡ್ ನೈಟ್ ಹೇಳಿ ಬೆಡ್ಡಿಗೆ ಹೋಗು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

ಹೆಸರಿಗೆ ಮಾತ್ರ ಡಬಲ್ ಇನ್ ಕಂ
ಆದರು ಸಾಲ್ವ್ ಆಗಿಲ್ಲ ಫೈನಾನ್ಸ್ ಪ್ರಾಬ್ಲಂ
ಇಯರ್ ಏಂಡ್ ಆದ್ರೆ ಟ್ಯಾಕ್ಸ್ ರಿಬೇಟ್ ಹುಡುಕು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!


ಬೆಂಗಳೂರಲ್ಲಿ 30/40 ಸೈಟ್ ಕನಸ ಕಾಣು
ಫ್ಯಾಮಿಲಿ ಪ್ಲಾನಿಂಗ್ ಹೆಸರ್ನಲ್ಲಿ ಜೀವನ ಮಾಡು
ಮಿಡ್ ಲೈಫ್ ಕ್ರೈಸಸ್ನಾಗ ಜೀವನ ಮಾಡು
(ಸಾಫ್ಟ್ವೇರ್) ಲೈಫ್ ಇಷ್ಟೇನೆ !!

Tuesday, August 3, 2010

ಹಿಗೊ೦ದು ವೀಕ್ಎಂಡ್ ...

ಲ್ಲ ಶನಿವಾರದ ಹ೦ಗ ವಾರ ಕ್ರಿಕೆಟ್ ಇರ್ಲಿಲ್ಲ ... ಆರಾಮಾಗಿ AM ಹೋಗಿ PM ಆದ ಮ್ಯಾಗ ಎದ್ದ್ಯಾ.
ಅಸ್ಟು ಲೇಟಾಗಿ ಎದ್ರುನು ಹಾಸಿಗೆ ಬಿಟ್ಟು ಏಳೊ ಮನಸಿರ್ಲಿಲ್ಲ ....ಸರೀ ಅಂತ system ನಲ್ಲಿಹಾಡು ಆದ್ರು ಕೇಳಿದ್ರಾಯ್ತು ಅನ್ಕೊಂಡು, ಒಳ್ಳೆ ಹಾಡು ಹುಡುಕ್ತಾ ಇದ್ದೆ ...ಅಸ್ಟರಲ್ಲಿ ಪ್ರವೀಣ್ ಗೊಡ್ಕಿ೦ಡೆ ಅವರ "ರಾಗಿಣಿ" ಸಿಕ್ತು. ಕರೆವ೦ದ್ರ ಬಾಳಾ ಚೊಲೋ ಕ೦ಪೊಸಿಶನ್. ಕೊಳಲು ಹಾಗು ತಬಲಾ ಮಿಶ್ರಿತ instrumental ಕೇಳ್ತಾ ಕೇಳ್ತಾ ಹೋದ್ರೆ ಹಂಗೆ ಮೈ ಮರೆತೊಗ್ತೀವಿ. ನನ್ನ ಎಲ್ಲ ಮೆಚ್ಚಿನ ಹಳೆಯ ಹಾಡುಗಳನನ ಹಿ೦ದುಸ್ತಾನಿ ಮೂಲ ರಾಗ ಹೆಸರಿನಲ್ಲಿ ಸ೦ಯೊಜಿಸಿದ್ದಾರೆ. ಕೊಳಲಿನ ಇ೦ಪಾದ ನಾದದಲ್ಲಿ ಸೊಗಸಾಗಿ ಹೆಣೆದಿದ್ದಾರೆ.
(http://www.kannadaaudio.com/Songs/Instrumental/home/Ragini1.php)


ಸರಿ ಒಟ್ಟಿನಲ್ಲಿ ದೊಡ್ಡ ಮನಸ ಮಾಡಿ ಎದ್ದೆಬಿಟ್ಟೆ. ಅಡಿಗೆ ಮೆನೆಗೆ ಹೋಗಿ ಕಳ್ಳ ಬೆಕ್ಕಿನ ಹ೦ಗ ಇಣುಕಿ ನೋಡಿದೆ...
ಅಪ್ಪಿ ತಪ್ಪಿ roomies ಏನಾದ್ರು ಮಾಡ್ಯಾರನು ಅಂತ ಇಣಿಕಿ ನೋಡಿದೆ .. ನನ್ನ ಪುಣ್ಯಕ ಚಾ ಮಾಡಿದ್ರು ....ಸ್ವಲ್ಪ ಉಳಿಸಿದ್ರು ಕೂಡ. ಕಪ್ಪನ್ಯಾಗ ಚಾ ಹಾಕ್ಕೊಂಡು ಮೈಕ್ರೋವೇವ್ ನ್ಯಾಗ ಬೆಚ್ಚಗ ಮಾಡಕೊ೦ಡು ಬಂದು ಇನ್ನೊಂದು ರೌಂಡ್ ಹಾಡು ಕೇಳಿದ್ರಾತು ಅಂತ ಬ೦ದು ಕೂತ್ಕೊಂಡೆ. ಒ೦ದು ಚೊಲೋ ಹಾಡು ಸಿಕ್ತು. ತ೦ಡ್ಯಾಗ ಬಿಸೆ ಚಾ ಹೇರಕೊ೦ತ ಮಧುರ ಹಾಡುಗಳನ್ನೂ ಕೇಳೋದ್ರಲ್ಲಿ ಇರೋ ಮಜಾ ಆಸ್ಟಿಸ್ಟಲ್ಲ

ಎಲ್ಲಿ ಜಾರತೋ
ಮನವು, ಎಲ್ಲೇ ಮೀರೀತೋ
ಎಲ್ಲಿ ಅಲ್ಲಿ ಅಲೆತಿಹುದೋ
ಏಕೆ ನಿನ್ನದಯತೋ .....

ಮೈಸೂರು ಅನ೦ತಸ್ವಾಮಿ ಅವರ ಸ೦ಗೀತ ಮತ್ತೆ ರತ್ನಮಾಲ ಪ್ರಕಾಶ್ ಅವರ ಧ್ವನಿ. ಇದು ಅಸ್ಟೆ ಅಲ್ಲ ಭಾವಸ೦ಗಮದಲ್ಲಿ ಇರೋ ಹಾಡು ಭಾಳ ಚೆ೦ದ ಅದವು .

ನಿಜವಾಗಲುನು ವೀಕ್ಎಂಡ್ ಬಂದರ ಎರೆಡು ದಿವಸದ ಟೈಮ್ ಟೆಬಲ್ಲಿಗು ಮತ್ತ ಉಳದ ಐದು ದಿವಸದ ಟೈಮ್ ಟೆಬಲ್ಲಿಗು ಅಜ ಗಜಾ೦ತರ ವ್ಯತ್ಯಾಸ. ವೀಕ್ ಡೇಸ್ ನಲ್ಲಿ ಕಾಲಚಕ್ರವನ್ನು ಬೆನ್ನತ್ತಿ ಒಡಕೊ೦ತ ಒಡಕೊ೦ತ ಉಸಿರಾಡಿಸೋದಕ್ಕು ಟೈಮ್ ಇಲ್ಲಲಲಪ ಅನಸುತ್ತ , ಬ್ಯಾಸರ ಆಗೇತಿ ಅ೦ತ ಸ್ವಲ್ಪ ಅರಾಮ ಮಾಡೊಕ್ಕು ಆಗೋಲ್ಲ. ಆದರೆ ವೀಕ್ ಎಂಡ್ ನಲ್ಲಿ ಇರುವ ನಲವತ್ತೆಟು ತಾಸಿಗುನು ನಾವ ರಿ೦ಗ್ ಮಾಸ್ಟರ್. ನಮ್ಮ ಜೀವನ ಹೆ೦ಗ ಬೇಕಾದ್ರೂ ಹ೦ಗ ಸಾಗಿಸಬಹುದು. ಏನ್ ಮಾಡಿದ್ದ್ರುನು ಯಾರು ಕೇಳೌರ್ ಇರ೦ಗಿಲ್ಲ. "ಕರದು ಕಟ್ಟವರು ಇರಂಗಿಲ್ಲ ತುರಿಸಿ ಮೇವ ಹಾಕೌರ್ ಇರ೦ಗಿಲ್ಲ". ನಮ್ಮದ ಸಮ್ರಾಜ್ಯಾ, ನಾವ ದೊರೆ, ನಾವ ಪ್ರಜೆ. ಬೇಕಾದಷ್ಟು ನಿದ್ದಿ ಮಾಡು, ಹೊಟ್ಟಿ ಹಸದರ ಊಟ ಮಾಡು ಇಲ್ಲಂದ್ರ ಉಪಾಸ ಇರು. ಹಸದಾಗ ಕೂಳು ಇಲ್ಲ೦ದ್ರ ಐತೆಲ (ಪಿಜಾಯನಮಹ:) ಫೋನು ಎತ್ತದು ಪಿಜಾ ಆರ್ಡರ್ ಮಾಡೋದು. ಎರಡು ದಿವಸದಾಗ ಗಾಂಧಿಜಿ ನಮಗ ಸ್ವತ೦ತ್ರ್ಯ ತ೦ದು ಕೊಟ್ಟಿದ್ದು ಎಷ್ಟು ಚೊಲೋ ಆತಪ ಅ೦ತ ಅನಸುತ್ತ.

ಹಿ೦ಗ ಕನ್ನಮುಚ್ಚಿ ಕಣ್ಣ ಬಿಡುದ್ರಾಗನ "so called weekend" ಮುಗದಿರುತ್ತ.. ಸೋಮವಾರ ನೆನಸಿ ಕೊ೦ಡ್ರ ಹೊಟ್ಟ್ಯಾಗ ಹೆಗ್ಗಣ ಓಡಾಡಿದ೦ಗ ಅನಸಾಕ್ ಕು೦ದರತೈತಿ. ವೀಕ್ಎಂಡ್ ಕಾಮನಬಿಲ್ಲು ಇದ್ದ೦ಗ, ದೋರದಗಿ೦ದ ಬಾಲ ಚ೦ದ ಕಾನತ್ತ ಸಮೀಪ ಹೋದ ಕೂಡಲೇ ಮಾಯ ಆಗಿರ್ತೈತಿ. ಬಂತಪ ವೀಕ್ ಎಂಡ್ ಅ೦ತ ಖುಷಿಪಡುಕಿ೦ತ ಮು೦ಚೆಕನ ಹೊತಲಪ ವೀಕ್ ಎಂಡ್ ಅ೦ತ ಸ೦ಕಟ ಪಡು ಹ೦ಗ ಮಾಡುತ್ತ.
ಅದಕ್ಕೆ ಯಾವದೋ ಒಬ್ಬ ಮೆಧಾವಿ ಸರಿಯಾಗಿಯೇ ಹೇಳಿದ್ದಾನೆ. "There aren't enough days in the weekend"

Tuesday, July 27, 2010

ಕ್ರಿಸ್ನಾ ಸಪ್ಪನ್ ಬ್ಯಾಳಿರಿ ....

ಮುಂದಿನ ತಿಂಗಳು ಭಾರತಕ್ಕೆ ಹೋಗಲು ಟಿಕೆಟ್ಸ್ ಬುಕ್ ಮಾಡಿ ಬಂದು ಒಂದು ಕಪ್ ಟೀ ಹೀರತಾ ವರಾ೦ಡದಲ್ಲಿ ಕುಳಿತಿದ್ದೆ, ಅವಾಗ ಕಳೆದಬಾರಿಯ ಭಾರತದ ಪ್ರವಾಸ ನೆನಪಿಗೆ ಬ೦ತು. ಆ ಬಾರಿ ಬಹಳ ನೆನಪಿಡುವ ಘಟನೆ ನೆಡದಿದ್ದರೂ ಒ೦ದು ಘಟನೆ ನೆನಸಿ ಕೊಂಡು ತುಂಬಾ ನಗು ಬರ್ತಾ ಇತ್ತು. ಆ ದಿನಗಳಲ್ಲಿ ಇಲ್ಲಿ ಭಾರತಿಯರ ಮೇಲೆ ಹಲ್ಲೆ ನೆಡದಿದ್ದ ವರದಿಗಳು ನ್ಯೂಸ್ ಚಾನೆಲ್ಗಳಲ್ಲಿ ಸರ್ವೇ ಸಾಮಾನ್ಯವಾಗಿತ್ತು. ನಮ್ಮ ಊರಿಗೆ ಹೋದಾಗ, ಅಲ್ಲಿ ಹೊಲದ ಕಡೆ ಹೋಗಿದ್ದೆ. ಅಲ್ಲಿ ನನಗೆ ಪರಿಚಯ ಇದ್ದ ಕೆಲವು ರೈತರು ಸಿಕ್ಕು ಯೋಗಕ್ಷೇಮ ವಿಚಾರಿಸಿ ಮಾತಾಡಿಸಿದರು. ಅವರಲ್ಲಿ ಒಬ್ಬರು ಎಲ್ಲಪ್ಪ ಅಂತ. ಬಾಲ್ಯದಿಂದಲೂ ಅವರ ಜೊತೆ ಒಡನಾಟ ಜಾಸ್ತಿ.
ಅವರೊಡನೆ ನೆಡದ ನೇರ ಸಂಭಾಷಣೆಯನ್ನು ನಿಮ್ಮ ಮುಂದೆ ಇಡುತಿದ್ದೇನೆ

ಎಲ್ಲಪ್ಪ: ಏನ್ ಶೆಟ್ಟರು, ಹೆಂಗ ಅದೀರಿ ...
ನಾನು: ಆರಾಮ ಅದೀನ್ರಿ
ಎಲ್ಲಪ್ಪ: ನೀವು ಫರೆನ್ಗೆ ಹೋಗಿದ್ರೆಲ ...
ನಾನು: ಹೂನ್ರಿ ..
ಎಲ್ಲಪ್ಪ: ಅಮೆರಿಕದಾಗ ಇದ್ರೆಲss
ನಾನು: ಹೂನ್ರಿ, ಮು೦ಚೆಕ ಅಲ್ಲೇ ಇದ್ದಿನ್ರಿ , ಈಗ ಆಸ್ಟ್ರೇಲಿಯದಾಗ ಅದೀನ್ರಿ.
ಎಲ್ಲಪ್ಪ: ಒಹ್ ಹ೦ಗನ್ರಿ, ಅಲ್ಲಿನು ಉಳ್ಳಗಡ್ಡಿ ೧೫೦ ರುಪಾಯಕ್ಕ ಕೆಜಿ, ಅಕ್ಕಿ ಸಾವಿರುಪಾಯಕ್ಕ ಹತ್ತ ಕೆಜಿ ಅನ್ನ್ರಿ ಮತ್ತs ...
[ಅವರು ನಾನು ಅಮೆರಿಕಾದಾಗ ಇದ್ದಾಗ ಹೇಳಿದ್ದ ಇರುಳ್ಳಿ, ಅಕ್ಕಿ ಬೆಲೆಯನ್ನು ನೆನಪಿಟ್ಟು, ಆಸ್ಟ್ರೇಲಿಯದಲ್ಲಿ ಎಷ್ಟು ಅಂತ ಕೇಳ್ತಾ ಇದ್ದಾರೆ]
ನಾನು: ಒಂಚೂರು ಹೆಚ್ಚು ಕಮ್ಮಿ ಅಸ್ಟರೀ
ಎಲ್ಲಪ್ಪ: ವೊಟ್ಟ ನೀವು ಎಲ್ಲೇ ಹೊದ್ರುನು ತುಟ್ಟಿ ಊಟ ಮಾಡವ್ರು ಅನ್ರಿ ...
ನಾನು: ಹ೦ಗೆನಿಲ್ರಿ, ಅಲ್ಲೇ ರೇಟು ಇದ್ದಷ್ಟು ಕೊಟ್ಟ ತಿನಬೇಕಲ್ಲರಿ ...
ಎಲ್ಲಪ್ಪ: ಅದು ಖರೆ ಐತಿ ಬಿಡ್ರಿ ...
ಅಂದಂಗ ಅಲ್ಲೇ ನಮ್ಮ ಮಂದಿಗೆ ಬಾಳ ತ್ರಾಸ ಕೊಡಾಕುಂತ್ತರಂತಲ್ಲ್ರಿss ನಮಗರ ಏನ್ ಗೊತ್ತು ಮನ್ನೇ ಟಿವ್ಯಾಗ ತೋರ್ಸಿದ್ರು,
ನೀವು ಹುಶಾರಾಗಿರ್ರೆಪ ..
ನಾನು: ಹೂನ್ರಿ ಇರ್ತೀನ್ರಿ ..
ಎಲ್ಲಪ್ಪ: ಅಲ್ಲ ನನ್ನ ಕೇಳಿದ್ರ ಸುಮ್ಮನ ಬಿಟ್ಟ ಬ೦ದು, ಚೋಲೋತೆಂಗ ಕನ್ಯಾ ನೋಡಕೊಂಡು ಇಲ್ಲೇ ಇರೋದು ಬೇಸಿ ಅಂತೀನಿ .... ಏನಪ ರಗಡ ದೇಶ ಸುತ್ತೀರಿ ರಗಡ ರೊಕ್ಕ ಮಾಡೀರಿ, ಚೋಲೆತೆಂಗ ಲಗ್ನ ಆಗಿ ಇಲ್ಲೇ ನಮ್ಮ ದೇಶದಾಗ ಆರಾಮಾಗಿ ಇರಬಾಡದ್ರೆಪ್ಪss..
ನಾನು: ಹೌದ್ರಿ ಒಂಚೂರು ಗಲಾಟೆ ಐತಿ ...
ಎಲ್ಲಪ್ಪ: ಅಲ್ಲರಿ ಅನ್ನುದರ ಏನ್ ಅ೦ತಾರ ಅವ್ರು ... ಸುಮ್ಮ ಸುಮ್ಮನ ನಮ್ಮ ಮ೦ದಿ ಯಾಕ ತಡವತಾರ ಅವ್ರು ...ಒಮ್ಮೆ ಕರಡು ಕು೦ದ್ರಿಸಿ ಕೆಳಬೇಕಪ... ಹಿ೦ಗ ಹಿ೦ಗಿ೦ಗ ಹಿ೦ಗಿ೦ಗೈತಿ ಹಿ೦ಗಿ೦ಗಿಲ್ಲ ಹೊ೦ದಕೊ೦ಡು ಹೋದ್ರ ಎಲ್ಲರವು ಬಾಳೆ ಸುದ್ದ ಅಕ್ಕವು ...
ಅ೦ತ ತಿಳಿಸಿ ಹೇಳ್ರಿ ....ಇಲ್ಲ೦ದ್ರ ಐತೆಲ ಬಾರ್ಕೊಲು ... ಸೋನ್ನಿ ಮ್ಯಾಗ ತಿಲಕೊಂದ್ರ ಸೈ ಅನ್ನು ಇಲ್ಲಂದ್ರ ಬರ್ಕೊಲ ಗತಿ ಇ೦ತವಕ ...
[ನನಗೆ ಮನಸ್ಸಿನಲ್ಲಿ ನಗು ...ಆದರು ಮುಕದಲ್ಲಿ ಗ೦ಭೇರತೆ ತೋರಸ್ತ ಇದ್ದೆ ...]
ನಾನು: ಇಲ್ಲ ಕಡಿಮೆ ಆಗಕುಂತೈತ್ರಿ ಈಗ ...
ಎಲ್ಲಪ್ಪ: ಅಲ್ಲ ನಮ್ಮ ಕ್ರಿಸ್ನ ಏನ್ ಕೆಲಸ ಮಾಡವಲ್ಲರಿ ಇವ ... ಸುಮ್ಮನ ಮೂಗು ಮು೦ದ ಮಡಕೊ೦ಡು ತಾಸಿಗೊ೦ದು ಮಾತಡಕೊ೦ತ ..... ಆಗ್ಲಿಲ್ಲ ಹೋಗಲಿಲ್ಲ ....ಲಾಲು ಇಲ್ಲ ಮೋದಿನ ಪಾಡರಿ .... ನಮ್ಮ ಕ್ರಿಸ್ನ ಸಪ್ಪನ ಬ್ಯಳಿರಿ ...

ಅಸ್ಟರಲ್ಲಿ ನನ್ನ ಫೋನು ರಿ೦ಗ ರಿ೦ಗ ರಿ೦ಗಾ......ರಿ೦ಗ ರಿ೦ಗ ರಿ೦ಗಾ .......ಅ೦ತ ಹೊಡಕೊಳ್ತಾ ಇತ್ತು ...ನಾನು ಎಲ್ಲಪ್ಪರಿಗೆ ಮತ್ತ ಬೆಟ್ಟಿ ಅಕ್ಕಿನ್ರಿ ಅ೦ತ ಹೇಳಿ ಹೊರಟೆ ... ....

Thursday, July 22, 2010

Some Bun The ...

ಯಾವದು ಈ ಬಂಧ
ಏನು ಈ ಅನುಬಂಧ
ಹೇಗೆ ಈ ಸಂಬಂಧ

ಪ್ರಾಣಸಖಿ ಎನ್ನಲೇ
ಚಂದ್ರಮುಖಿ ಎನ್ನಲೇ
ಗಗನಸಖಿ ಎನ್ನಲೇ

ಒಂದೇ ಕೊಟ್ಟಿಯ ದನಗಳಂತೆ
ಒಂದೇ ಗೂಡಿನ ಹಕ್ಕಿಗಳಂತೆ
ಒಂದೇ ತೋಟದ ಹೂಗಳಂತೆ …

ನನ್ನ ಹಾಡಿನ ರಾಗ ನೀನು
ಆ ರಾಗದ ಸ್ವರ ನೀನು
ಆ ಸ್ವರದ ಜೀವ ನೀನು ....

Tuesday, June 29, 2010

ಉತ್ತರ ಧ್ರುವದಿಂ ದಕ್ಷಿನ ಧ್ರುವಕು

ಕಳೆದ ಹಲವಾರು ದಿನಗಳಿಂದ karnatic, ಭಾವಗೀತೆ ಕೇಳ್ತಾ ಕೇಳ್ತಾ ಕನ್ನಡ ಹಳೆ ಹಾಡು ಕೇಳೆ ಇರ್ಲಿಲ್ಲ. ಅದಕ್ಕೆ ಸುಮ್ನೆ ಒಂದು ರೌಂಡ್ ನಮ್ಮ ಫೆವರೆಟ್ ಹಾಡು ಕೇಳೋಣ ಅಂತ ಮೊಬೈಲ್ ನಲ್ಲಿ ಪ್ಲೇ ಲಿಸ್ಟ್ ಶುರು ಮಡಿದ ಕೂಡಲೇ

" ಉತ್ತರ ಧ್ರುವದಿಂ
ದಕ್ಷಿನ
ಧ್ರುವಕು
ಚುಂಬಕ ಗಾಳಿಯು ಬಿಸುತಿದೆ"

ಹಾಡು ಶುರುವಾಯ್ತು. ಹಾಡು ಎಷ್ಟು ಮದುರ ಎಷ್ಟು ಸಲ ಕೇಳಿದ್ರು ಇನ್ನು ಹಚ್ಚು ಹಸರಾಗಿದೆ.
ಹಾಡು ಕೇಳ್ತಾ ಕೇಳ್ತಾ , ಹಾಡು ನನಗೆ ಎಷ್ಟು ಸಮಂಜಸವಾಗುತ್ತಲ್ವೆ ಅಂತ ಯೋಚನೆಯ ಹೊಂಡಕ್ಕ ಬಿದ್ದೆ. USA ನಿಂದ sydneyಗೆ ಬಂದ ದಿನಗಳು ನೆನಪಾಗ್ತಾ ಇದ್ದವು. ಹಾಡು ನನಗ ಬರದಾರೇನೋ ಅನಸ್ತಿತ್ತು. Newyork ನಿಂದ sydneyಗೆ ಜೀವನದ ಪಯಣ ಸಾಗಿತ್ತು. ಚುಂಬಕ ಗಾಳಿ ಜೊತೆ ಹೊತೆಗೆ ನಾನು ತೇಲಿ ಉತ್ತರದಿಂದ ದಕ್ಷಿಣಕ್ಕೆಬಂದಿದ್ದೆನಿ ಏನೋ ಅನಸಿತ್ತು.

ಜೀವನವೆಂಬ ರೈಲುಬಂಡಿ ನನ್ನನ್ನು ಊರಿಂದ ಓರಿಗೆ, ದೇಶದಿಂದ ದೇಶಕ್ಕೆ ಕರೆದೊಯ್ದಿತ್ತು. ನನ್ನ ಸ್ಟಾಪ್ ಬಂತು ಅ೦ದಕೊ೦ಡಾಕ್ಷನ ಮತ್ತೆ ಇನ್ನೊಂದು ಸ್ಟಾಪ್ ಗೆ ಕರೆದೊಯ್ಯುತ್ತಿತ್ತು. ಒಂದರಿಂದ ಇನ್ನೊಂದು ಹೋಗುತ್ತಾ ಹೋಗುತ್ತಾ ರೋಣದಿಂದ, ಧಾರವಾಡ ಅಲ್ಲಿಂದ ಹುಬ್ಬಳ್ಳಿ, ಹುಬ್ಲಿಯಿಂದ ಬಂಗಳೂರು, ಬೆಂಗಳೂರಿನಿಂದ Newyork, ಅಲ್ಲಿಂದ Philadelphia, phillyಯಿಂದ sydney. ಅವಾಗ ಇವಾಗ ಮನಸು ಹೇಳ್ತಾ ಇರುತ್ತೆ "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ". ಮನಿ ಮಠ ಎಲ್ಲ ಬಿಟ್ಟು ಪರದೇಸಿ ಹಂಗ ಎಸ್ಟ ದಿನ ಹಿಂಗ ಇರುದಪ ಅನಸುತ್ತೆ. ಅಲೆಮಾರಿ ಜೀವನ ಬೇಸತ್ತು ಹೋಗಿದೆ ಅಂತ ಮೇಲಿಂದ ಅನಸಿದರೂ ಎಲ್ಲೊ ಅಂತರಾಳದಲ್ಲಿ ಹೊಸ ದೇಶ, ಭಾಷೆ, ಸಂಸ್ಕ್ತ್ರಿತಿ, ಸಂಸ್ಕಾರ ನೋಡಲು, ಅನುಭವಿಸಲು ಸಿಗುತ್ತೆ ಅಂತ ಏನೋ ಒಂದು ತೃಪ್ತಿ. ಪ್ರತಿಯೊಂದು ಊರಿಗೆ, ದೇಶಕ್ಕೆ, ಭಾಷೆಗೆ ತನ್ನದೇ ಅದ ಒಂದು ವೈಶಿಷ್ಟ್ಯ.

ಸ್ಕೂಲ್ ನಲ್ಲಿ ಬಾಲ್ಯದ ನೆನಪು, ಕಾಲೇಜ್ನಲ್ಲಿ ಸ್ಕೂಲಿನ ನೆನಪು, ಜಾಬ್ನಲ್ಲಿ ಕಾಲೇಜ್ ನೆನೆಪು. ಹಂಗೆ ಹೊಸ ಪ್ರಾಜೆಕ್ಟ್ ನಲ್ಲಿ ಹಳೆ ಪ್ರಾಜೆಕ್ಟ್ ಮೇಟ್ಸ್, ಹಳೆ ವರ್ಕ್ ಕಲ್ಚರ್, ಹಳೆ ಪ್ರಾಸೆಸ್ ನೆನಪು. ಅದೇ ಅಲ್ಲವೇ ಜೀವನ ಹಳೆಯ ಸವಿ ನೆನಪನ್ನು ಸವಿಯುತ್ತ ಹೊಸದತ್ತ ದಾಪುಗಾಲು ಹಾಕುವದು. ಆದರೆ ಎಸ್ಟೆ ಊರು ಸುತ್ತಲಿ, ದೇಶ ಸುತ್ತಲಿ ನಮ್ಮ ಪರ್ಸನಾಲಿಟಿಗೆ ನಾವು ಹುಟ್ಟಿ ಬೆಳೆದ ಊರಿನ ಟಚ್ ಇದ್ದೆ ಇರುತ್ತೆ. ಒಂದು ಹಾಡು ಎಂತೆಂತ ಏನಪು ಹುಟ್ಟಿ ಹಾಕ್ತವ ಅಂತ ಯೋಚಿಸಿ ನನ್ನಸ್ಟಕ್ಕೆ ನಾನೇ ನಕ್ಕು ಸುಮ್ಮನಾದೆ :)

Wednesday, June 9, 2010

ಬಾಳ ನೌಕೆ

ಪ್ರಪಂಚ ಹಿಂದೆ ಹಾಕಲು ಒಡಿದವರೆಸ್ಟು?
ಹಿಂದೆ ಬೀಳುವ ಭಯದಿಂದ ಒಡಿದವರೆಸ್ಟು?
ಮಾಯದಜಿಂಕೆ ಬೆನ್ನತ್ತಿದಾಗ ಹಿಂದೆ ಯಾರು? ಮುಂದೆ ಯಾರು?


ಜೀವನದ ಜ೦ಜಾಟದಲ್ಲಿ ಬೆಂದವರೆಸ್ಟು?
ಜಗತ್ತಿನ ಜೂಜಾಟದಲ್ಲಿ ಸೋತವರೆಸ್ಟು?
ಬಾಳಿನಲ್ಲಿ ಬೇಸರದಿಂದ ನೊಂದವರೆಸ್ಟು?


ಕಾಲ ಚಕ್ರ ಉರಳ್ತಾನೆ ಇರಬೇಕು
ಗಡಿಯಾರದ ಮುಳ್ಳು ಸುತ್ತತಾನೆ ಇರಬೇಕು
ಜೀವನದ ನೌಕೆ ತೇಲ್ತಾನೆ ಇರಬೇಕು


ಯುಗಾದಿ ಮತ್ತೆ ಬರುತ್ತೆ
ಹಸಿರು ಮತ್ತೆ ಚಿಗಿರುತ್ತೆ
ಹೊಸ ನೀರು, ಹೊಸ ಗಾಳಿ, ಹೊಸ ಬೆಳಕು ಬಂದೆ ಬರುತ್ತೆ

Wednesday, June 2, 2010

ನಮ್ಮದು ಭಾರಿ ಲೆವಲ್ರಿ ...ನಮ್ಮ ಲೆವೆಲ್ ತಕ್ಕ ಕನ್ಯಾ ಸಿಕ್ಕಿಲ್ಲರಿ ..

ಎಲ್ಲಾರಿಗೂ ವಯಸ್ಸು ಅಕ್ಕವ,
ಹಂಗ ನಂಗು ವಯಸ್ಸು ಆಗ್ಯಾವ
ಮನ್ಯಾಗ ಹಿರಯರು ಅಂದಾರ ಲಗ್ನ ಮಾಡ್ಕೊಳಲೊ ಬೆಪ್ಪೆ..

ವಯಸ್ಸಿನ ಹುಡ್ಗ ಇವ,
ಲಗ್ನದ ಹುಳ ತೆಲ್ಯಾಗ ಹೊಕ್ಕವ
ಸುರು ಆತು ಲೆಕ್ಕಾಚಾರ ಎಂತ ಹುಡಗಿನ ನಾ ಒಪ್ಪೇ ?

ರಂಬೆ ಊರ್ವಶಿ ಹುಡಿಕಿ ತರುವ ತವಕ
ಹಾರ ಕುದರಿ ಬೆನ್ನ ಏರಿ ಹಾರಿ ಹೋಗೋ ಹುರುಪು
ಜೋಡಿಯಾಗಿ ದೇಶ ಸುತ್ತಿ ಚೈನಿ ಹೊಡಿಯೋ ಕನಸು ತಪ್ಪೇ?

ನಮಗೇನು ಗೊತ್ತು ಮುಂದಿನ ಹಕ್ಕಿಕತ್ ಏನಂತ
ಗೊತ್ತಾಯ್ತು ಮಾಡರ್ನ್ ಹುಡಿಗ್ಯಾರ ಲೆವಲ್ ಭಾರಿ ಅಂತ
ನೋಡಿ ಅನಸ್ತು ನಾ ಬಾವ್ಯಾಗಿನ ಕಪ್ಪೆ

ಒನ್ನೆದಾಕಿ ನೋಡಾಕ ಚೂರು ಕಪ್ಪು
ಮೂಗ ಮುರಕೊಂತ ಕೇಳ್ತಾಳ
ಆಕಳು ಕಪ್ಪಾದರೆ ಹಾಲು ಕಪ್ಪೇ?

ಮತ್ತೊಂದು ಕನ್ಯಾ ವಯಸ್ಸು ಜಾಸ್ತಿ
ಕನ್ಯಾ ತೋರುಸು ಏಜೆಂಟ್ ಅಂತಾನ
ಹುನಿಸಿಮರ ಮುಪ್ಪಾದರೆ ಹುಳಿ ಮುಪ್ಪೇ?

ಮತ್ತೊಬ್ಯಾಕಿ , ಮಾತೆತ್ತೀದರ ಫಾರೆನ್ ಅ೦ತಾಳ
ಹೆಸರಿಗಿಂತ ಮುಂಚೆ ಪಗಾರ ಕೇಳ್ತಾಳ
ಇಕಿನ ಕಟಕೊ೦ಡ್ರ ಕೈಗೆ ಚಿಪ್ಪೇ

ದೊಡ್ಡವರು ಹೇಳ್ತಾರ ಕನ್ಯಾ ಹುಡುಕೋದು ಸರಳಿಲ್ಲ
‘3 roses’ ಚಾದ೦ಗ ಬಣ್ಣ, ರುಚಿ, ಶಕ್ತಿ ಎಲ್ಲ ಸಿಗಂಗಿಲ್ಲ
ಎಲ್ಲೆರ ಸ್ವಲ್ಪಕಂಪ್ರೋಮೈಸ್ ಆಗಬೇಕು ‘ಅಪ್ಪಿ’

ಹಿಂಗ ಎಲ್ಲಿತನಕ ಕಾಯೋದು
ಎಸ್ಟ ಅಂತ ಕನ್ಯಾ ನೋಡೋದು
ಹಿಂಗ ಅದ್ರ ಮುಂದ ಕೈಯಾಗ್ ಚಿಪ್ಪೆ

Wednesday, May 26, 2010

ನಿನಗಾಗಿ


ನಿನ್ನ ಕನಸಿನ ಕುಸುಮವಾಗಿರುವೆ

ನಿನ್ನ ಮನದ ಮೊಗ್ಗಾಗಿರುವೆ

ನಿನ್ನ ಒಡಲ ಕಡಲಾಗಿರುವೆ ...


ನಿನ್ನ ಮನೆಯ ಹಿತ್ತಿಲ ಗಿಡದ ನೆರಳಾಗಿರುವೆ

ಮನೆಮುಂದಿನ ಬಯಲಿನ ತಂಗಾಳಿಯಾಗಿರುವೆ

ನಡಮನಿಯ ಹೊಸ್ತಿಲಾಗುರುವೆ ...



ನಿನ್ನೊಡಲ ಹುತ್ತಿನ ಹಾವಾಗಿರುವೆ

ನಿನ್ನ ಕ೦ಗ ಕಾಡಿಗೆಯಾಗಿರುವೆ

ಎಲ್ಲಾದರಿರುವೆ , ಎಂತಾದರಿವೆ, ನಿನ್ನವನಾಗಿರುವೆ

ಜೀವನ

ಜೀವನ ಚದುರಂಗ
ತಾ ಒಂದು ಬಗೆದರೆ
ದೈವ ಬೇರೇನೋ ಬಗೆಯುದು ಉಂಟು

ಇಲ್ಲಿ ಮಿಲನ ಆಕಸ್ಮಿಕ
ಅಗಲುವುದು ಅನಿವಾರ್ಯ
ಈ ಆಸ್ಮಿಕ ಮತ್ತು ಅನಿವರ್ಯತೆಯಲ್ಲಿ ಬಂದೊಗುವರೊಡನೆ ಎಂತಾ ನೆಂಟು

ಜಗದೀಶನಾಡುವ ಜಗವೇ ನಾಟಕರಂಗ
ನಾ ಪಾತ್ರದಾರಿ
ಹಚ್ಚಿದ ಬಣ್ಣ ಹೇಳುವ ಸಾಲುಗಳ ನಡುವೆ ಬಿಡಿಸಲಾಗದ ಗಂಟು

Monday, May 17, 2010

ಮಗ್ಗಲ್ಮನಿ ಹುಡಗಿಗೊಂದು ಪದ್ಯಾ



ಮಗ್ಗಲ್ಮನಿ
ಹುಡಗಿ ಹೆಸರು ವಿದ್ಯಾ
ಆಕೀ ಪ್ರೀತಿ ಹೊಂಡಕ್ಕ ನಾ ಬಿದ್ಯಾ
ಗೆಲ್ಲಬೇಕಲ್ಲ ಆಕಿ ಮನಸ್ಸು, ಅದೆ೦ಗ ಸಾಧ್ಯ?

'ಪ'ದಿಂದ ಸುರು ಆದ್ರ ಪದ್ಯ
'ಗ'ದಿಂದ ಸುರು ಆದ್ರ ಗದ್ಯ
ಒಟ್ನ್ಯಾಗ ಏನರ ಬರದ್ರ ಸಾಕು ಸದ್ಯ..


ಅದನ್ನೊಡಿ ಆಕೀ ಅಂದ್ಲು, ಲೋ ಸಿದ್ಯಾ
ಬರಕೊಂತ ಕುಂದುರು ನೀನು ಪದ್ಯಾ
ನಮ್ಮಪ್ಪ ಲಗ್ನ ಮಾಡ್ತಾನ ನನ್ನ ರಮೇಶನ್ ಮದ್ಯ .

Saturday, May 15, 2010

ಪ್ರೀತಿ ಮಾಡಿರಿ ..

ನೀಳ ಆಕಾಶದಂತ ನಿಷ್ಕಳಂಕ ಪ್ರೀತಿ ಮಾಡಿರಿ
ಮೆಘಗಳನು ಚುಂಬಿಸುವ ಹಿಮಾಲಯದ ಹಾಲಿನಂತಾ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ಜಾತಿ ಬೇಧ ಮರೆಸುವ ಸಂಗೀತದಂತ ಪ್ರೀತಿ ಮಾಡಿರಿ
ದೇಶ, ಭಾಷೆ ಮೀರಿ ಸೇರುವ ಸಪ್ತ ಸಾಗರದಂತ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ಆನು ತಾನು ನೀನು ನಾನು ಎಂಬ ಬೇದ ಮಾಡದ ಕಂದನಂತೆ ಪ್ರೀತಿ ಮಾಡಿರಿ
ಮಗುವಿಗಾಗಿ ಸರ್ವಸ್ವ ತ್ಯಜಿಸುವ ತಾಯಿಯಂತೆ ನಿಸ್ವಾರ್ಥ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ರಾಮನಿಗಾಗಿ ಕಾಯುವ ಶಬಿರಿಯಂತೆ ಪೂಜ್ಯ ಭಾವನೆಯ ಪ್ರೀತಿ ಮಾಡಿರಿ
ಈ ಮಾಯಾ ಲೋಕದ ಕ್ರತಕ ಜೀವನದ ಸ್ವಾರ್ಥವನ್ನು ಅಣಕಿಸುವಂತೆ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

Wednesday, May 12, 2010

ಬ್ಯಾಡಬೆ ಹುಡಗೀ…

ಬ್ಯಾಡಬೆ ಹುಡಗೀ…
ನೀ ಹಂಗ ನೋಡಬ್ಯಾಡ
ಆ ಲುಕ್ ನೋಡೀದ್ರನ ಒಂದು ಪಲ್ಸ ಮಿಸ್ ಆಗುತ್ತ …

ಬ್ಯಾಡಬೆ ಹುಡಗೀ…
ನೀ ಹಂಗ ನಗಬ್ಯಾಡಾ
ಆ ಸ್ಮೈಲ್ ನೋಡೀದ್ರ ಎದಿಯಾಗ ಹಳ್ಳ ನಟ್ಟಂಗಾಗುತ್ತ

ಬ್ಯಾಡಬೆ ಹುಡಗೀ…
ನೀ ಹಂಗ ನಡೀಬ್ಯಾಡ
ಆ ನಡಿಗೀಗೆ ನಿಂತಲ್ಲೇ ಜೋಲಿ ತಪ್ಪುತ್ತಾ

ಬ್ಯಾಡಬೆ ಹುಡಗೀ…
ನೀ ಅಸ್ಟು ನಲೀಬ್ಯಾಡ
ಆ ವೈಯಾರಕ್ಕ ಒಂದ ಹುಬ್ಬು ಏರಿ ನಗತೈತಿ

Thursday, May 6, 2010

ನೀನಿಲ್ಲದ ...

ಆಸೆಯ ಹೂವಿಂದ ಪ್ರೀತಿಯ ಮಂಟಪ ಹಾಕೀನಿ,

ನೀನ ಬರದಿದ್ರ ಏನಂತ ಹೇಳಲಿ ಈ ಮನಸೀಗೆ

ನೀನಿರದಿದ್ರೆ ಯಾರನ್ನ ಜೋಡಿಸಲಿ ಈ ಹೃದಯಕ್ಕ



ಕನ್ನಹನಿಯ ಮುತ್ತಿಂದ ಸರವೊಂದು ಪೋನಸೀನಿ

ನೀನಾ ಇಲ್ಲಂದ್ರ ಏನಂತ ಹೇಳಲಿ ಆ ಮುತ್ತಿಟ್ಟ ಕಣ್ಣೀಗೆ

ನೀನಾ ಇಲ್ಲಂದ್ರ ಯಾರ ಕೊರಳೀಗೆ ಆ ಸರ?



ನಾಕಂಡ ಕನಸೀನ ಹಂದರವ ಕಟ್ಟೆನಿ

ನೀನಿಲ್ದನ ಗಾಳಿ ಬಿರುಗಾಳಿ ಹೆಂಗ ತಳೀತು

ನೀನಿಲ್ಲದ ಹಂದರ ನಗ್ಯಾಕೆ?

Wednesday, May 5, 2010

ಅವಳ ಮುಸುಕಿನ ಚಿತ್ರ

ದಿನ ಉರುಳಿದವು, ಋತು ಕಳೆದವು
ಆದರೆ ಮನದಲಿ ಮನೆ ಮಾಡಿದ ಅವಳ ನೆನಪು ಅಳಿಸಿಲ್ಲ

ಆ ನೆನಪಿಗೆ, ಕನಸಲಿ ರೂಪ ಕೊಡಲೆತ್ನಿಸಿದೆ
ನಾ ಕನಸುಗಾರನಾದೆ, ಆದರೆ ಅವಳ ರೂಪ ಸಿಕ್ಕಿಲ್ಲ

ಆ ನೆನಪನು, ಕುಂಚದಿ ಸೆರೆ ಹಿಡಿದೆ
ನಾ ಚಿತ್ರಕಾರಾನಾದೆ ಆದರೆ ಅವಳ ಚಿತ್ರವಾಗಿಲ್ಲ

ಆ ನೆನಪನು, ಪದಗಳಲಿ ಪೋನಿಸಿದೆ
ನಾ ಕವಿಯಾದೆ ಆದರೆ ಅವಳ ಕವಿತೆಯಾಗಿಲ್ಲ

ಆ ನೆನಪನು, ಶಿಲೆಯಲಿ ಕೆತ್ತಿದೆ
ನಾ ಶಿಲ್ಪಿಯಾದೆ, ಆದರೆ ಅವಳ ಮೂರ್ತಿಯಾಗಿಲ್ಲ










........ ತಮ್ಮಾ ಹೆಣ್ಣು ದೆವ್ವಿನ ಕಾಟಾ ಜಾಸ್ತಿ ಆಗೈತಿ ಅನಸುತ್ತ... ಮಕ್ಕೊಳು ಮುಂದ ತೆಲೆದಿಮ್ಬಿನ್ಯಾಗ ಕಸಬರಿಕೆ ಇಲ್ಲ ಚಪ್ಪಲು ಇಟಕೊಂದು ಮೊಕ್ಕೊರಪಾ...ಅಂದ್ರ ಚೊಲೋ ನಿದ್ದಿ ಬರತೈತಿ ....ಹೆಣ್ ದೆವ್ವಿನ ಕಾಟ ಇರಂಗಿಲ್ಲ ...

ಹೆಹೆಹೆಹೆ !!!!

ಏನ ಹೇಳಲಿ ಈ ಹುಚ್ಚ ಮನಸೀಗೆ !

ಹಳೆಯ ನೆನಪುಗಳು ಮದುರ ...
ಕಳೆದ ಘಳಿಗೆಳು ಸವಿರ..
ಅದ್ರುನು ಕಡ್ತಾವ ನೆನಪ !!


ಮತ್ತ ಬರ್ತೀನಿ ನಿನ್ನ ಹಳ್ಳಿಗೆ
ಅಂತ ಹೇಳಿದ್ದ್ಯಾ ನನಗೆ ನಾನ ಮೆಲ್ಲಂಗೆ
ಅಲ್ಲಿತನಕ ಹೆಂಗ ಕಯತೀಪಾ ಹೀರೋ! ಅಂತ ಕೆಳಿತ್ತ ನನ್ ಮನಸಾ!!


ಹೇಳಾಕ ನಾನಿಲ್ಲೆ, ಅವಳು ಅಲ್ಲೆ
ಅದ್ರ ನನ್ನ ದಿನಚರಿಯಲ್ಲಿ ಅವಳೇ ಸುಪ್ರಬಾತ
ಅವಳೇ ಶುಭಮಂಗಳ !!

ಬೇಕಂದ್ರ ಸಿಗದವಳು, ಬ್ಯಾಡ೦ದ್ರ ಬಿಡದವಳು
ಬೇಕು ಬ್ಯಾಡಾ ಅನ್ನಕ ನೀನ್ಯಾರಪಾ ತಮ್ಮ ..
ಅಂತ ಕೇಳುತ್ತ ನನ್ನ ಮನಸ್ಸು ನನ್ನಾ !!

ಅವಳಿಲ್ಲ೦ದ್ರುನು ಹುಡುಕೋ ಕಣ್ಣಗಳು
ಅವಳ ದ್ವನಿಗೆ ಹಪಹಪಿಸೋ ಕಿವಿಗಳು
ಹುಚ್ಹ ಮನಸಿಗೇನು ಗೊತ್ತು ಅವಳಿಲ್ಲಂತ!!

Saturday, May 1, 2010

ಹಿಗೊ೦ದು ವೀಕ್ಎಂಡ್ ...

ಎಲ್ಲ ಶನಿವಾರದ ಹ೦ಗ ಈ ವಾರ ಕ್ರಿಕೆಟ್ ಇರ್ಲಿಲ್ಲ ... ಆರಾಮಾಗಿ AM ಹೋಗಿ PM ಆದ ಮ್ಯಾಗ ಎದ್ದ್ಯಾ.
ಅಸ್ಟು ಲೇಟಾಗಿ ಎದ್ರುನು ಹಾಸಿಗೆ ಬಿಟ್ಟು ಏಳೊ ಮನಸಿರ್ಲಿಲ್ಲ ....ಸರೀ ಅಂತ system ನಲ್ಲಿಹಾಡು ಆದ್ರು ಕೇಳಿದ್ರಾಯ್ತು ಅನ್ಕೊಂಡು, ಒಳ್ಳೆ ಹಾಡು ಹುಡುಕ್ತಾ ಇದ್ದೆ ...ಅಸ್ಟರಲ್ಲಿ ಪ್ರವೀಣ್ ಗೊಡ್ಕಿ೦ಡೆ ಅವರ "ರಾಗಿಣಿ" ಸಿಕ್ತು. ಕರೆವ೦ದ್ರ ಬಾಳಾ ಚೊಲೋ ಕ೦ಪೊಸಿಶನ್. ಕೊಳಲು ಹಾಗು ತಬಲಾ ಮಿಶ್ರಿತ instrumental ಕೇಳ್ತಾ ಕೇಳ್ತಾ ಹೋದ್ರೆ ಹಂಗೆ ಮೈ ಮರೆತೊಗ್ತೀವಿ. ನನ್ನ ಎಲ್ಲ ಮೆಚ್ಚಿನ ಹಳೆಯ ಹಾಡುಗಳನನ ಹಿ೦ದುಸ್ತಾನಿ ಮೂಲ ರಾಗದ ಹೆಸರಿನಲ್ಲಿ ಸ೦ಯೊಜಿಸಿದ್ದಾರೆ. ಕೊಳಲಿನ ಇ೦ಪಾದ ನಾದದಲ್ಲಿ ಸೊಗಸಾಗಿ ಹೆಣೆದಿದ್ದಾರೆ.
(http://www.kannadaaudio.com/Songs/Instrumental/home/Ragini1.php)


ಸರಿ ಒಟ್ಟಿನಲ್ಲಿ ದೊಡ್ಡ ಮನಸ ಮಾಡಿ ಎದ್ದೆಬಿಟ್ಟೆ. ಅಡಿಗೆ ಮೆನೆಗೆ ಹೋಗಿ ಕಳ್ಳ ಬೆಕ್ಕಿನ ಹ೦ಗ ಇಣುಕಿ ನೋಡಿದೆ...
ಅಪ್ಪಿ ತಪ್ಪಿ roomies ಏನಾದ್ರು ಮಾಡ್ಯಾರನು ಅಂತ ಇಣಿಕಿ ನೋಡಿದೆ .. ನನ್ನ ಪುಣ್ಯಕ ಚಾ ಮಾಡಿದ್ರು ....ಸ್ವಲ್ಪ ಉಳಿಸಿದ್ರು ಕೂಡ. ಕಪ್ಪನ್ಯಾಗ ಚಾ ಹಾಕ್ಕೊಂಡು ಮೈಕ್ರೋವೇವ್ ನ್ಯಾಗ ಬೆಚ್ಚಗ ಮಾಡಕೊ೦ಡು ಬಂದು ಇನ್ನೊಂದು ರೌಂಡ್ ಹಾಡು ಕೇಳಿದ್ರಾತು ಅಂತ ಬ೦ದು ಕೂತ್ಕೊಂಡೆ. ಒ೦ದು ಚೊಲೋ ಹಾಡು ಸಿಕ್ತು. ತ೦ಡ್ಯಾಗ ಬಿಸೆ ಚಾ ಹೇರಕೊ೦ತ ಮಧುರ ಹಾಡುಗಳನ್ನೂ ಕೇಳೋದ್ರಲ್ಲಿ ಇರೋ ಮಜಾ ಆಸ್ಟಿಸ್ಟಲ್ಲ

ಎಲ್ಲಿ ಜಾರತೋ
ಮನವು, ಎಲ್ಲೇ ಮೀರೀತೋ
ಎಲ್ಲಿ ಅಲ್ಲಿ ಅಲೆತಿಹುದೋ
ಏಕೆ ನಿನ್ನದಯತೋ .....

ಮೈಸೂರು ಅನ೦ತಸ್ವಾಮಿ ಅವರ ಸ೦ಗೀತ ಮತ್ತೆ ರತ್ನಮಾಲ ಪ್ರಕಾಶ್ ಅವರ ಧ್ವನಿ. ಇದು ಅಸ್ಟೆ ಅಲ್ಲ ಭಾವಸ೦ಗಮದಲ್ಲಿ ಇರೋ ಹಾಡು ಭಾಳ ಚೆ೦ದ ಅದವು .

ನಿಜವಾಗಲುನು ಈ ವೀಕ್ಎಂಡ್ ಬಂದರ ಆ ಎರೆಡು ದಿವಸದ ಟೈಮ್ ಟೆಬಲ್ಲಿಗು ಮತ್ತ ಉಳದ ಐದು ದಿವಸದ ಟೈಮ್ ಟೆಬಲ್ಲಿಗು ಅಜ ಗಜಾ೦ತರ ವ್ಯತ್ಯಾಸ. ವೀಕ್ ಡೇಸ್ ನಲ್ಲಿ ಕಾಲಚಕ್ರವನ್ನು ಬೆನ್ನತ್ತಿ ಒಡಕೊ೦ತ ಒಡಕೊ೦ತ ಉಸಿರಾಡಿಸೋದಕ್ಕು ಟೈಮ್ ಇಲ್ಲಲಲಪ ಅನಸುತ್ತ , ಬ್ಯಾಸರ ಆಗೇತಿ ಅ೦ತ ಸ್ವಲ್ಪ ಅರಾಮ ಮಾಡೊಕ್ಕು ಆಗೋಲ್ಲ. ಆದರೆ ವೀಕ್ ಎಂಡ್ ನಲ್ಲಿ ಇರುವ ನಲವತ್ತೆ೦ಟು ತಾಸಿಗುನು ನಾವ ರಿ೦ಗ್ ಮಾಸ್ಟರ್. ನಮ್ಮ ಜೀವನ ಹೆ೦ಗ ಬೇಕಾದ್ರೂ ಹ೦ಗ ಸಾಗಿಸಬಹುದು. ಏನ್ ಮಾಡಿದ್ದ್ರುನು ಯಾರು ಕೇಳೌರ್ ಇರ೦ಗಿಲ್ಲ. "ಕರದು ಕಟ್ಟವರು ಇರಂಗಿಲ್ಲ ತುರಿಸಿ ಮೇವ ಹಾಕೌರ್ ಇರ೦ಗಿಲ್ಲ". ನಮ್ಮದ ಸಮ್ರಾಜ್ಯಾ, ನಾವ ದೊರೆ, ನಾವ ಪ್ರಜೆ. ಬೇಕಾದಷ್ಟು ನಿದ್ದಿ ಮಾಡು, ಹೊಟ್ಟಿ ಹಸದರ ಊಟ ಮಾಡು ಇಲ್ಲಂದ್ರ ಉಪಾಸ ಇರು. ಹಸದಾಗ ಕೂಳು ಇಲ್ಲ೦ದ್ರ ಐತೆಲ (ಪಿಜಾಯನಮಹ:) ಫೋನು ಎತ್ತದು ಪಿಜಾ ಆರ್ಡರ್ ಮಾಡೋದು. ಈ ಎರಡು ದಿವಸದಾಗ ಗಾಂಧಿಜಿ ನಮಗ ಸ್ವತ೦ತ್ರ್ಯ ತ೦ದು ಕೊಟ್ಟಿದ್ದು ಎಷ್ಟು ಚೊಲೋ ಆತಪ ಅ೦ತ ಅನಸುತ್ತ.

ಹಿ೦ಗ ಕನ್ನಮುಚ್ಚಿ ಕಣ್ಣ ಬಿಡುದ್ರಾಗನ "so called weekend" ಮುಗದಿರುತ್ತ.. ಸೋಮವಾರ ನೆನಸಿ ಕೊ೦ಡ್ರ ಹೊಟ್ಟ್ಯಾಗ ಹೆಗ್ಗಣ ಓಡಾಡಿದ೦ಗ ಅನಸಾಕ್ ಕು೦ದರತೈತಿ. ಈ ವೀಕ್ಎಂಡ್ ಕಾಮನಬಿಲ್ಲು ಇದ್ದ೦ಗ, ದೋರದಗಿ೦ದ ಬಾಲ ಚ೦ದ ಕಾನತ್ತ ಸಮೀಪ ಹೋದ ಕೂಡಲೇ ಮಾಯ ಆಗಿರ್ತೈತಿ. ಬಂತಪ ವೀಕ್ ಎಂಡ್ ಅ೦ತ ಖುಷಿಪಡುಕಿ೦ತ ಮು೦ಚೆಕನ ಹೊತಲಪ ವೀಕ್ ಎಂಡ್ ಅ೦ತ ಸ೦ಕಟ ಪಡು ಹ೦ಗ ಮಾಡುತ್ತ.
ಅದಕ್ಕೆ ಯಾವದೋ ಒಬ್ಬ ಮೆಧಾವಿ ಸರಿಯಾಗಿಯೇ ಹೇಳಿದ್ದಾನೆ. "There aren't enough days in the weekend"

Friday, April 30, 2010

ನನ್ನವಳು..

ಚೂರು ಅ೦ದಗಾತಿ, ಚೂರು ಮಾಟಗಾತಿ, ಚೂರು ಮುಖದಲ್ಲಿ ಲಕ್ಷಣ ಇರ್ಬೇಕು, ನಗು ಎದ್ದು ಕಾನತಿದ್ರುನು ಅಲ್ಲಲಿ ಅವಾಗಿವಾಗ ಹಂಗ ಬ೦ದು ಹಿಂಗೋ ಗಾಂಭೀರ್ಯ, ಬಾಯಲ್ಲಿ ಕಾಣೋ ನಗುಗಿಂತ ಜಾಸ್ತಿ ಮುಕದಲಿ ನಗು ಇರ್ಬೇಕು, ಮುಕದಲ್ಲಿ ಕಣೋ ನಗುಗಿಂತ ಮನಸನಲ್ಲಿ ನಗು ಇರ್ಬೇಕು, ಆ ನಗುವಿನಲಿ ತುಂಟತನ, ಸಮಯಕ್ಕ ತಕ್ಕಂತೆ ಸೆನ್ಸ್ ಆಫ್ ಕಾಮಿಡಿ, ಚೂರು ಹುಸಿಗೋಪ, ಚೂರು ಮೊಂಡುತನ, ಲೈಟಾಗಿ possessiveness, ಏನೇನೋ ಹುಡಕೊವಂತ ಅತ್ತಿತ್ತ ಓಡಾಡುವ ಕಂಗಳು, ಮನಸತುಂಬ ಮುಗ್ದ ಬಾವನೆ ಆದ್ರೆ ಬೇಕಾದಷ್ಟು ಬೆರಿಕಿತನ, ನಾಜೂಕು ಮಾತು, ಸ್ವಲ್ಪ ಸಂಗೀತದಲಿ ಮಿ೦ದಿರೋವಳು, ಸ್ವಲ್ಪ ಸಾಹಿತ್ಯದ ಗಾಳಿ ಗಂಧ ಗೊತ್ತಿರೊಳು, ತಟಗು ಜಾನಪದದ ಸೊಗಡಿನ ಸಿಂಚಿನ, ಹಸಿದಾಗ ಹೊಟ್ಟೆಗೆ ಹಿಟ್ಟಿಡೊವಶ್ಟು ನಳಪಾಕತನ,
ಮೇಲಿಂದ modern ಲೂಕಿದ್ದು ಒಳಗಿಂದ ಹಳೆಯ ಸಂಸ್ಕೃತಿ ತುಂಬಿರೋವಳು, ಮಾತಿನಲ್ಲಿ ನನ್ನನ್ನು ಬಿಟ್ಟುಕೊಡದೆ ಇರೋಳು, ಅವಾಗ ಇವಾಗ ಹೊಗಳುವವಳು, ಚಾನ್ಸ್ ಸಿಕ್ಕಾಗ ಕಾಲೆಳೆವವಳು, ಚಳಿಯಲ್ಲಿ ಬಿಸಿ ಕಾಫ್ಫೀಯಂತೆ, ಬೇಸಿಗೆಯಲಿ ತಂಪು ಮಜ್ಜಿಗೆಯ೦ತೆ, ಕಸ್ಟದಲಿ ಮುಗಳ್ನಗೆ ಚೆಲ್ಲೊವವಳು, ಮನೆಯಿಂದ ಹೊರಡುವಾಗ ಒಂದು ಚಿಕ್ಕ ನಗು ಚಲ್ಲಿ ಕಳಸುವವಳು, ಮತ್ತೆ ಬಂದಾಗ broad ಸ್ಮೈಲ್ ಮಾಡಿ welcome ಮಾಡೋವವಳು.....

ಈ ಮೋಹನ ಮುರಳಿಯ ಕೊಳಲಿನ ನಾದ ಕೇಳಿ
ದೂರದ ತೀರದಿಂದ ಹಾರಿ ಬಾರೋ ಪರಿಜಾತದಂಗೆ,
ಯಾವಾಗ ಬಂದು ಪ್ರತ್ಯಕ್ಷ ಅಗ್ತಾಳೋ ಅವ್ಳು ?? ....ನನ್ನವಳು!!!

Tuesday, January 12, 2010

ಬೆಳಿಗ್ಗೆ roomie ಎಬ್ಬಿಸಿದಾಗ ಎಂಟೂ ವರೆ. ದಿನಾಲೂ ಬೆಳಿಗ್ಗೆ ಬೇಗನೆ ಏಳಬೇಕು ಅಂತ ಅಂದುಕೊಂಡೆ ಮಲಗ್ತೀನಿ ಅದ್ರು ಅದೆಂಗೆ ಎಚ್ಚರಾ ಆಗೋಲ್ಲ ಅಂತ 28 ಆದ್ರೂನು ತಿಳಿದಿಲ್ಲ ನಂಗೆ. ಸರಿ ಬಿಡು " ಅದೇ ರಾಗ ಅದೇ ಹಾಡು...ಏನೇ ಅದ್ರು ನಾನಂತೂ ಉದ್ದರಾಗೋಲ್ಲ" ಅಂದ್ಕೊಂಡು ಬೇಗ ಬೇಗನೆ ಬೆಳಿಗಿನ ಕಾರ್ಯಕ್ರಮ ಮುಗಿಸಿಕೊಂಡು. ರೆಡಿ ಆಗಿ, Breakfast ಏನು ತಿನಬೇಕು ಅಂತ kitchen ಒಂದು ರೌಂಡು ಸ್ಕ್ಯಾನ್ ಮಾಡೀದೆ. ಸೆರೆಅಲ್ಸ್ ಬಿಟ್ಟರೆ ಬೇರೇನೂ ಗತಿ ಇರೋಲ್ಲam ಅಂತ ಗೊತ್ತು ಆದ್ರೂನು ಹಾಳ ಮನಸ್ಸು ಕೇಳಬೆಕಲಾ. ನನ್ನ ಹಣೆ ಬರಹನೆ ಇಷ್ಟು "ಸಿಕ್ಕಿದ್ದು ಶಿವಾ" ಅಂತೇಳಿ ತಿಂದಕೊಂಡು ಆಫೀಸ್ಗೆ ಬಂದು mಮಾಡಿ, ಕೆಲಸಕ್ಕೆ ಕೈ ಸುರುಹಚ್ಕೊಂಡೆ. ನನ್ನ ಗತಿ ನೋಡಿ ಕುಂಬಾರಣ್ಣ ಹಾಡು ನೆನಪಿಗೆ ಬರುತ್ತೆ.

ಮುಂಜೆನೆದ್ದು ಕುಂಬಾರಣ್ಣ ಹಾಲುಬಾನ ಉಂಡಾಣ್ಣಾ

ಹಾರ್ಯಾರಿ ಮಣ್ಣ ತುಳಿದಾನ, ಹಾರಿ ಹಾರ್ಯಾರಿ ಮಣ್

ತುಳಿಯುತ ಮಾಡ್ಯನ ನಾವ್ಯಾರು ಹೊರುವಂತ ಐರಾನಿ

ಅಲ್ಲ ನಗಬೇಡಿ, ಎಲ್ಲ Onsite ನಲ್ಲಿ ಇರೋ bachelor ಇಂಜಿನಿಯರ್ ಹಣೆಬರ ಇಸ್ಟೇ ಕಣ್ರೀ... ನಾವು ಕುಂಬಾರಣ್ಣ ಹಾಗೆ cereals ತಿಂದು kyeboard ಕುಟ್ಟಿ ಕುಟ್ಟಿ ಯಾರೀಗೂ ತಿಳಿಯರಾದಂತ software ಬರೀತಿವಿ. ಗಡಿಗೆಯಾದರು ಕೆಲಸಕ್ಕೆ ಬರುತ್ತೆ software ಏನಕ್ಕೂ ಬರೋಲ್ಲ :). ಕೆಲಸ ಶುರುಮಾಡಿ ಒಂದು ಘಂಟೆ ಕೂಡ ಆಗಿರೋಲ್ಲ ಅಷ್ಟರಲ್ಲಿ ಟೀ ಇಲ್ಲ ಕಾಫೀ ಕುಡಿಲಿಕ್ಕೆ ಹೋಗ್ತಿವಿ. ಸುಮ್ನೆ ಟೀ ಕುಡಕೊಂಡು ಹೋಗು ಮಕ್ಕಳಾ ನಾವು, ಊಟದಿಂದ ಬಂದ ಬಂದ ಹರಟೆ ಇಲ್ಲದಿದ್ದರೆ ಊಟದಿಂದ ಬಂದಮೇಲೆ ರೀ ... ಮಾರ್ಕೆಟ್ ತುಂಬ ಡೌನು, recession ಡೀಪ್ ಆಗ್ತಾ ಇದೆ, ಒಬಾಮ bailout ಮಾಡ್ತಾನೆ, ಟೆರರ್ ಅಟಾಕ್, ಕ್ರಿಕೆಟು ಮಣ್ಣು ಮಸಿ ಅಂತ ಹರಟೆ ಹೊಡದಮೇಲೆನೆ ಸ್ವಲ್ಪ ಟೀಗೆ ಟೇಸ್ಟ್ ಬರೋದು. ಮತ್ತೆ ವಾಪಾಸ್ ಬಂದು ಮತ್ತೆ ಕುಂಬಾರಣ್ಣಹಾಗೆ keyboard ಕುಟ್ಟಲಿಕ್ಕೆ ಸ್ಟಾರ್ಟು. ಊಟಕ್ಕೆ ಎಲ್ಲಿ ಹೋಗೋದು, ಮನೆಗಾ ಹೋಗೋದ ಇಲ್ವಾ ಆಚೇಗಡೆ ರೆಸ್ಟೋರೆಂಟ್ ಹೋಗೋದಾ ಅಂತ ತಲೇಲಿ ಹುಳಾ ಓಡ್ತಾ ಇರ್ತಾವೆ. ಒಂದೆರೆಡು ಮೇಲ್ ಮಾಡಿ ಊಟಕ್ಕೆ ಹೋಗ್ತಾ ಇರೋದೆಯಾ.

ಬಜನೆ ಪದಾ

ರಾತ್ರಿ ಒಂದೂವರೆ ಅದ್ರುನು ನಿದ್ರೆ ಬರ್ತಾ ಇಲ್ಲ. ತಲೆಯಲ್ಲೇ ಏನೇನೋ ವಿಚಾರ. ಸ್ವಲ್ಪ ಹೊತ್ತು family ಬಗ್ಗೆ ವಿಚಾರ ಮಾಡಿದ್ರೆ, ಇನ್ನೊಂದು ಗಳಿಗೆಯಲ್ಲಿ office vichara, ಮತ್ತೊಂದು ಗಳಿಗೆಯಲ್ಲಿ ಇನ್ನೇನೋ ವಿಚಾರ. ನಡುವೆ ನಂಗೆ ಇವತ್ತು ಯಾಕೆ ನಿದ್ರೆ ಬರ್ತಿಲ್ಲ ಅಂತ root cause analysis ಬೇರೆ. ಇವತ್ತು sunday night, ಬೆಳಿಗ್ಗೆ ತುಂಬಾ ಲೇಟಾಗಿ ಎದ್ದಿದ್ದೆ ಅದಕ್ಕೆ ಹಿಂಗೆ ಅನಕೊಂಡೆ. ಇವೆಲ್ಲರ ನಡುವೆ ನಂಗೆ ಇವತ್ತು ಯಾಕೋ ಬಾಲ್ಯದ ನೆನಪು. 2nd/3rd ಇರಬೇಕು ಅವಾಗ, ನಮ್ಮ ಓಣಿಯಲ್ಲಿ ಶ್ರಾವಣ ಮಾಸದಲ್ಲಿ ಬಜನೇ ನಡೀತಿತ್ತು. ಯಾಕೊ ಆ ಬಜನೇ ನೆನಪು. ಆ ಬಜನೇ ಯಲ್ಲಿ ಹಾಡುವ ಕೆಲವಿಂದು ಪದಗಳ (ಹಾಡುಗಳ) ನೆನಪು.
"ಅರಳ ಗುಂಡಿಗೆ ಶರಣು ಬಸವನು ಕೂರಿಗೆ ಹೂಡ್ಯನೋ,
ಶರಣರು ಕೂಡ್ಯರೋ ಕೂರಿಗೆ ಪೂಜಯೇ ಮಾಡ್ಯರೋ.....


"ಶರಣರು ಬರುವಲ್ಲಿ, ಶರಣರು ನಡೆವಲ್ಲಿ ಜ್ಯೋತಿಯ ಬೆಳಗಮ್ಮ, ಮಂಗಳಾರುತಿ ಹಾಡಮ್ಮ ..."


"ಎಲ ಲಿಂಗ ಎಲ್ಲಿ ಅಡಗಿ ಬೇಗ ಬಾರೋ ಓಡುತಾ ಹಳ್ಳಿ ಗ್ರಾಮದಲ್ಲಿ ಜನಸಿ ಮುಗುಲಕೊಡದಲ್ಲಿ ಮೆರಸಿ"

ಆ ದಿನಗಳಲ್ಲಿ ಶ್ರಾವಣ ದಲ್ಲಿ ಬಜನೆ ಹೋಗೋದು ಅಂದ್ರೆ ಏನೋ ಒಂದು ಹುರುಪು. ನಸೀಗಲೇ ಏಳೋಕೆ ಬೇಜಾರು ಆದ್ರೆ ಅಮ್ಮ ..." ನೋಡ ಅಪ್ಪಿ ...ಬಜನೆ ನಮ್ಮ ಮನೆ ಹತ್ರ ಬರಾಕ ಹತ್ತೈತಿ ನೀನೋದೀದ್ರ ಇನ್ನ ಮಕ್ಕೊಂಡಿದಿ... ಬಜನಿ ಹೊತಂದ್ರ ನಗೊತ್ತಿಲ್ಲ ನೋಡು ...ಅಮ್ಯಾಗ ಯಾಕಿ ಎಬಿಸಿಲ್ಲ ಅನಬ್ಯಾಡಾ ...." ಅಂತ ಅಡಿಗೆ ಮನೆಯಿಂದ ಜೋರಾಗಿ ಹೇಳಿದ ಕೂಡಲೇ ನಾನು ಅಣ್ಣ ಮತ್ತೆ ತಮ್ಮ ಎಲ್ಲರು ಬೇಗನೆ ಎದ್ದು ಸ್ನಾನ ಮಾಡಿ, ಅಂಗಿ ಚೊಣ್ಣ ಹಾಕ್ಕೊಂಡು ಈಬತ್ತಿ ಹಚ್ಕೊಂಡು ಕೈಯಲ್ಲಿ ಉದನ ಕಡ್ಡಿ ಹಿಡಕೊಂಡು ಬಜನೆ ಮೇಳದ ಜೊತೆ ಸೇರ್ತಿದ್ವಿ.

ಹಿಂಗೆ ಹತ್ತು ಹಲವಾರು ಬಜನೆ ಪದಗಳು ನೆನಪು ಬರ್ತಾ ಇದ್ದವು.... ಅಲ್ಲ ಇವರೆಲ್ಲ ಹಾಡುಗಳನ್ನು ಹೆಂಗ ಬರೀತಾ ಇದ್ರೂ, ಅದಕ್ಕ ರಾಗ ಸಂಯೋಜನೆ ಹೇಗೆ ಮಾಡ್ತಾ ಇದ್ದರು ಅಂತ ನೆನಸಿದ್ರೆ ಇಗಲೂ ಕೂಡ ಮೈ ರೋಮಾಂಚನ ಅನಿಸುತ್ತದೆ. ಆಗಿನ ಜನರ routine ಅಂದ್ರೆ ನಸೀಗಲೇ ಎದ್ದು ಹೊಲಕ್ಕ ಹೋಗಿ ಬಂದು, ಜಳಕ ಮಾಡಿ ಬಿಸೆ ರೊಟ್ಟಿ ತಿಂದು, ಒಂದತಾಸು ಅಡ್ಡಾಗಿ, ಸಂಜಿಕೆ ಬಜರಕ ಹೋಗಿ ಅಲ್ಲಿ ಸಿಕ್ಕ ಗೆಳೆಯರ ಜೊತೆ ಮಳೆ, ಬೆಳೆ, ಕಮತ ಬಗ್ಗೆ ಒಂದತಾಸು ಹರಟೆ ಹೊಡದು ರಾತ್ರಿ ಊಟ ಮಾಡಿ ಮಲಕೊಂದ್ರ ಅವತ್ತಿನ ದಿನ ಮುಗೀತು. ಇದನ್ನೆಲ್ಲಾ ನೆನಸಿ ಕೊಂಡರೆ ನಮ್ಮ ಒರಿನಲ್ಲಿ ಒಕಕಲತನ ಮಾಡೋ ಮಂದಿ ಜೀವನ ಮತ್ತ ನಮ್ಮ ಜೀವನ ಎಸ್ಟೊಂದು ವತ್ಯಾಸ ಐತ್ಹೆಲ್ಲ ಅನಸುತ್ತ. ಆವಾಗ entertainment ಅಂದ್ರೆ ಬಜನೆ, ಜನಪದ, ನಾಟಕ ಅಸ್ಟೇ ... ಆದರೆ ಈಗ Radio, FM, TV, Interent, movies, DVDs ಏನೆಲ್ಲಾ ಇದ್ರುನು ಒಂದೊಂದು ಸಲ ಸಮಯ ಹೋಗೋದೇ ಇಲ್ಲ ಎಸ್ಟೊಂದು ಬೇಜಾರು ಅನಸುತ್ತೆ.

ಅಯ್ಯಯೋ ರಾತ್ರಿ ೨ ಆಗ್ತಾ ಬಂತು ನಾಳೆ monday ಬೇರೆ. ಆಫೀಸ್ ಗೆ ಹೋಗಬೇಕು. ಮಲಕೊಂತೀನಿ. ನಾನು ಅವಾಗ ಬಜನೆಗೆ ಹೋಗೋ ನೆನಪು ಬಂತು ಅದಕ್ಕೆ ಎದ್ದು ಕುಂತು ಈ blog ಬರದೆ. ಯಾಕಂದ್ರೆ ಆ ನೆನಪುಗಳು ಸವಿ ನೆನಪುಗಳು. ಬೆಳೆಯುತ್ತ ಬೆಳೆಯುತ್ತ ರೋಣದಿಂದ (ನಮ್ಮೂರು) ಧಾರವಾಡಕ್ಕೆ ಅಲ್ಲಿಂದ ಹುಬ್ಬಳ್ಳಿಗೆ ಅಲ್ಲಿಂದ ಬೆಂಗಳೂರಿಗೆ ಅಲ್ಲಿಂದ NewYork ಅಲ್ಲಿಂದ Philadelphia ಅಲ್ಲಿಂದ Sydney. ಹೀಗೆ ನನ್ನ ಜೀವನ ಬಿಸಿಲುಗುದಿರೆಯನ್ನೇರಿ ಹೋಗ್ತಾ ಇದೆ ಅನಸುತ್ತೆ. ಇಂತ Fast ಲೈಫಿನಲ್ಲಿ ಈತರಹದ ನೆನಪು ಬರುವುದು ತುಂಬಾ ವಿರಳ ಅಂತ ನೆನಪು ಅದ ಕೂಡಲೇ ಎದ್ದು BLOG ಬರೀತಾ ಇದ್ದೀನಿ.
ಕಣ್ಣು ಉರೀತಾ ಇದೆ ಆದರೆ ಮನಸ್ಸಿಗೆ ಏನೋ ಸಮಾದಾನ ...ಒಂದು ಮದುರ ನೆನಪನ್ನು ಪದಗಳಲ್ಲಿ ಹಿಡಿದ ಉತ್ಸಾಹ. ಈ ಉತ್ಸಾಹನಾದ್ರುನು ನಿದ್ರೆತರುಸುತ್ತೆ ಅನಕೊತೀನಿ :-)