Tuesday, January 12, 2010

ಬೆಳಿಗ್ಗೆ roomie ಎಬ್ಬಿಸಿದಾಗ ಎಂಟೂ ವರೆ. ದಿನಾಲೂ ಬೆಳಿಗ್ಗೆ ಬೇಗನೆ ಏಳಬೇಕು ಅಂತ ಅಂದುಕೊಂಡೆ ಮಲಗ್ತೀನಿ ಅದ್ರು ಅದೆಂಗೆ ಎಚ್ಚರಾ ಆಗೋಲ್ಲ ಅಂತ 28 ಆದ್ರೂನು ತಿಳಿದಿಲ್ಲ ನಂಗೆ. ಸರಿ ಬಿಡು " ಅದೇ ರಾಗ ಅದೇ ಹಾಡು...ಏನೇ ಅದ್ರು ನಾನಂತೂ ಉದ್ದರಾಗೋಲ್ಲ" ಅಂದ್ಕೊಂಡು ಬೇಗ ಬೇಗನೆ ಬೆಳಿಗಿನ ಕಾರ್ಯಕ್ರಮ ಮುಗಿಸಿಕೊಂಡು. ರೆಡಿ ಆಗಿ, Breakfast ಏನು ತಿನಬೇಕು ಅಂತ kitchen ಒಂದು ರೌಂಡು ಸ್ಕ್ಯಾನ್ ಮಾಡೀದೆ. ಸೆರೆಅಲ್ಸ್ ಬಿಟ್ಟರೆ ಬೇರೇನೂ ಗತಿ ಇರೋಲ್ಲam ಅಂತ ಗೊತ್ತು ಆದ್ರೂನು ಹಾಳ ಮನಸ್ಸು ಕೇಳಬೆಕಲಾ. ನನ್ನ ಹಣೆ ಬರಹನೆ ಇಷ್ಟು "ಸಿಕ್ಕಿದ್ದು ಶಿವಾ" ಅಂತೇಳಿ ತಿಂದಕೊಂಡು ಆಫೀಸ್ಗೆ ಬಂದು mಮಾಡಿ, ಕೆಲಸಕ್ಕೆ ಕೈ ಸುರುಹಚ್ಕೊಂಡೆ. ನನ್ನ ಗತಿ ನೋಡಿ ಕುಂಬಾರಣ್ಣ ಹಾಡು ನೆನಪಿಗೆ ಬರುತ್ತೆ.

ಮುಂಜೆನೆದ್ದು ಕುಂಬಾರಣ್ಣ ಹಾಲುಬಾನ ಉಂಡಾಣ್ಣಾ

ಹಾರ್ಯಾರಿ ಮಣ್ಣ ತುಳಿದಾನ, ಹಾರಿ ಹಾರ್ಯಾರಿ ಮಣ್

ತುಳಿಯುತ ಮಾಡ್ಯನ ನಾವ್ಯಾರು ಹೊರುವಂತ ಐರಾನಿ

ಅಲ್ಲ ನಗಬೇಡಿ, ಎಲ್ಲ Onsite ನಲ್ಲಿ ಇರೋ bachelor ಇಂಜಿನಿಯರ್ ಹಣೆಬರ ಇಸ್ಟೇ ಕಣ್ರೀ... ನಾವು ಕುಂಬಾರಣ್ಣ ಹಾಗೆ cereals ತಿಂದು kyeboard ಕುಟ್ಟಿ ಕುಟ್ಟಿ ಯಾರೀಗೂ ತಿಳಿಯರಾದಂತ software ಬರೀತಿವಿ. ಗಡಿಗೆಯಾದರು ಕೆಲಸಕ್ಕೆ ಬರುತ್ತೆ software ಏನಕ್ಕೂ ಬರೋಲ್ಲ :). ಕೆಲಸ ಶುರುಮಾಡಿ ಒಂದು ಘಂಟೆ ಕೂಡ ಆಗಿರೋಲ್ಲ ಅಷ್ಟರಲ್ಲಿ ಟೀ ಇಲ್ಲ ಕಾಫೀ ಕುಡಿಲಿಕ್ಕೆ ಹೋಗ್ತಿವಿ. ಸುಮ್ನೆ ಟೀ ಕುಡಕೊಂಡು ಹೋಗು ಮಕ್ಕಳಾ ನಾವು, ಊಟದಿಂದ ಬಂದ ಬಂದ ಹರಟೆ ಇಲ್ಲದಿದ್ದರೆ ಊಟದಿಂದ ಬಂದಮೇಲೆ ರೀ ... ಮಾರ್ಕೆಟ್ ತುಂಬ ಡೌನು, recession ಡೀಪ್ ಆಗ್ತಾ ಇದೆ, ಒಬಾಮ bailout ಮಾಡ್ತಾನೆ, ಟೆರರ್ ಅಟಾಕ್, ಕ್ರಿಕೆಟು ಮಣ್ಣು ಮಸಿ ಅಂತ ಹರಟೆ ಹೊಡದಮೇಲೆನೆ ಸ್ವಲ್ಪ ಟೀಗೆ ಟೇಸ್ಟ್ ಬರೋದು. ಮತ್ತೆ ವಾಪಾಸ್ ಬಂದು ಮತ್ತೆ ಕುಂಬಾರಣ್ಣಹಾಗೆ keyboard ಕುಟ್ಟಲಿಕ್ಕೆ ಸ್ಟಾರ್ಟು. ಊಟಕ್ಕೆ ಎಲ್ಲಿ ಹೋಗೋದು, ಮನೆಗಾ ಹೋಗೋದ ಇಲ್ವಾ ಆಚೇಗಡೆ ರೆಸ್ಟೋರೆಂಟ್ ಹೋಗೋದಾ ಅಂತ ತಲೇಲಿ ಹುಳಾ ಓಡ್ತಾ ಇರ್ತಾವೆ. ಒಂದೆರೆಡು ಮೇಲ್ ಮಾಡಿ ಊಟಕ್ಕೆ ಹೋಗ್ತಾ ಇರೋದೆಯಾ.

ಬಜನೆ ಪದಾ

ರಾತ್ರಿ ಒಂದೂವರೆ ಅದ್ರುನು ನಿದ್ರೆ ಬರ್ತಾ ಇಲ್ಲ. ತಲೆಯಲ್ಲೇ ಏನೇನೋ ವಿಚಾರ. ಸ್ವಲ್ಪ ಹೊತ್ತು family ಬಗ್ಗೆ ವಿಚಾರ ಮಾಡಿದ್ರೆ, ಇನ್ನೊಂದು ಗಳಿಗೆಯಲ್ಲಿ office vichara, ಮತ್ತೊಂದು ಗಳಿಗೆಯಲ್ಲಿ ಇನ್ನೇನೋ ವಿಚಾರ. ನಡುವೆ ನಂಗೆ ಇವತ್ತು ಯಾಕೆ ನಿದ್ರೆ ಬರ್ತಿಲ್ಲ ಅಂತ root cause analysis ಬೇರೆ. ಇವತ್ತು sunday night, ಬೆಳಿಗ್ಗೆ ತುಂಬಾ ಲೇಟಾಗಿ ಎದ್ದಿದ್ದೆ ಅದಕ್ಕೆ ಹಿಂಗೆ ಅನಕೊಂಡೆ. ಇವೆಲ್ಲರ ನಡುವೆ ನಂಗೆ ಇವತ್ತು ಯಾಕೋ ಬಾಲ್ಯದ ನೆನಪು. 2nd/3rd ಇರಬೇಕು ಅವಾಗ, ನಮ್ಮ ಓಣಿಯಲ್ಲಿ ಶ್ರಾವಣ ಮಾಸದಲ್ಲಿ ಬಜನೇ ನಡೀತಿತ್ತು. ಯಾಕೊ ಆ ಬಜನೇ ನೆನಪು. ಆ ಬಜನೇ ಯಲ್ಲಿ ಹಾಡುವ ಕೆಲವಿಂದು ಪದಗಳ (ಹಾಡುಗಳ) ನೆನಪು.
"ಅರಳ ಗುಂಡಿಗೆ ಶರಣು ಬಸವನು ಕೂರಿಗೆ ಹೂಡ್ಯನೋ,
ಶರಣರು ಕೂಡ್ಯರೋ ಕೂರಿಗೆ ಪೂಜಯೇ ಮಾಡ್ಯರೋ.....


"ಶರಣರು ಬರುವಲ್ಲಿ, ಶರಣರು ನಡೆವಲ್ಲಿ ಜ್ಯೋತಿಯ ಬೆಳಗಮ್ಮ, ಮಂಗಳಾರುತಿ ಹಾಡಮ್ಮ ..."


"ಎಲ ಲಿಂಗ ಎಲ್ಲಿ ಅಡಗಿ ಬೇಗ ಬಾರೋ ಓಡುತಾ ಹಳ್ಳಿ ಗ್ರಾಮದಲ್ಲಿ ಜನಸಿ ಮುಗುಲಕೊಡದಲ್ಲಿ ಮೆರಸಿ"

ಆ ದಿನಗಳಲ್ಲಿ ಶ್ರಾವಣ ದಲ್ಲಿ ಬಜನೆ ಹೋಗೋದು ಅಂದ್ರೆ ಏನೋ ಒಂದು ಹುರುಪು. ನಸೀಗಲೇ ಏಳೋಕೆ ಬೇಜಾರು ಆದ್ರೆ ಅಮ್ಮ ..." ನೋಡ ಅಪ್ಪಿ ...ಬಜನೆ ನಮ್ಮ ಮನೆ ಹತ್ರ ಬರಾಕ ಹತ್ತೈತಿ ನೀನೋದೀದ್ರ ಇನ್ನ ಮಕ್ಕೊಂಡಿದಿ... ಬಜನಿ ಹೊತಂದ್ರ ನಗೊತ್ತಿಲ್ಲ ನೋಡು ...ಅಮ್ಯಾಗ ಯಾಕಿ ಎಬಿಸಿಲ್ಲ ಅನಬ್ಯಾಡಾ ...." ಅಂತ ಅಡಿಗೆ ಮನೆಯಿಂದ ಜೋರಾಗಿ ಹೇಳಿದ ಕೂಡಲೇ ನಾನು ಅಣ್ಣ ಮತ್ತೆ ತಮ್ಮ ಎಲ್ಲರು ಬೇಗನೆ ಎದ್ದು ಸ್ನಾನ ಮಾಡಿ, ಅಂಗಿ ಚೊಣ್ಣ ಹಾಕ್ಕೊಂಡು ಈಬತ್ತಿ ಹಚ್ಕೊಂಡು ಕೈಯಲ್ಲಿ ಉದನ ಕಡ್ಡಿ ಹಿಡಕೊಂಡು ಬಜನೆ ಮೇಳದ ಜೊತೆ ಸೇರ್ತಿದ್ವಿ.

ಹಿಂಗೆ ಹತ್ತು ಹಲವಾರು ಬಜನೆ ಪದಗಳು ನೆನಪು ಬರ್ತಾ ಇದ್ದವು.... ಅಲ್ಲ ಇವರೆಲ್ಲ ಹಾಡುಗಳನ್ನು ಹೆಂಗ ಬರೀತಾ ಇದ್ರೂ, ಅದಕ್ಕ ರಾಗ ಸಂಯೋಜನೆ ಹೇಗೆ ಮಾಡ್ತಾ ಇದ್ದರು ಅಂತ ನೆನಸಿದ್ರೆ ಇಗಲೂ ಕೂಡ ಮೈ ರೋಮಾಂಚನ ಅನಿಸುತ್ತದೆ. ಆಗಿನ ಜನರ routine ಅಂದ್ರೆ ನಸೀಗಲೇ ಎದ್ದು ಹೊಲಕ್ಕ ಹೋಗಿ ಬಂದು, ಜಳಕ ಮಾಡಿ ಬಿಸೆ ರೊಟ್ಟಿ ತಿಂದು, ಒಂದತಾಸು ಅಡ್ಡಾಗಿ, ಸಂಜಿಕೆ ಬಜರಕ ಹೋಗಿ ಅಲ್ಲಿ ಸಿಕ್ಕ ಗೆಳೆಯರ ಜೊತೆ ಮಳೆ, ಬೆಳೆ, ಕಮತ ಬಗ್ಗೆ ಒಂದತಾಸು ಹರಟೆ ಹೊಡದು ರಾತ್ರಿ ಊಟ ಮಾಡಿ ಮಲಕೊಂದ್ರ ಅವತ್ತಿನ ದಿನ ಮುಗೀತು. ಇದನ್ನೆಲ್ಲಾ ನೆನಸಿ ಕೊಂಡರೆ ನಮ್ಮ ಒರಿನಲ್ಲಿ ಒಕಕಲತನ ಮಾಡೋ ಮಂದಿ ಜೀವನ ಮತ್ತ ನಮ್ಮ ಜೀವನ ಎಸ್ಟೊಂದು ವತ್ಯಾಸ ಐತ್ಹೆಲ್ಲ ಅನಸುತ್ತ. ಆವಾಗ entertainment ಅಂದ್ರೆ ಬಜನೆ, ಜನಪದ, ನಾಟಕ ಅಸ್ಟೇ ... ಆದರೆ ಈಗ Radio, FM, TV, Interent, movies, DVDs ಏನೆಲ್ಲಾ ಇದ್ರುನು ಒಂದೊಂದು ಸಲ ಸಮಯ ಹೋಗೋದೇ ಇಲ್ಲ ಎಸ್ಟೊಂದು ಬೇಜಾರು ಅನಸುತ್ತೆ.

ಅಯ್ಯಯೋ ರಾತ್ರಿ ೨ ಆಗ್ತಾ ಬಂತು ನಾಳೆ monday ಬೇರೆ. ಆಫೀಸ್ ಗೆ ಹೋಗಬೇಕು. ಮಲಕೊಂತೀನಿ. ನಾನು ಅವಾಗ ಬಜನೆಗೆ ಹೋಗೋ ನೆನಪು ಬಂತು ಅದಕ್ಕೆ ಎದ್ದು ಕುಂತು ಈ blog ಬರದೆ. ಯಾಕಂದ್ರೆ ಆ ನೆನಪುಗಳು ಸವಿ ನೆನಪುಗಳು. ಬೆಳೆಯುತ್ತ ಬೆಳೆಯುತ್ತ ರೋಣದಿಂದ (ನಮ್ಮೂರು) ಧಾರವಾಡಕ್ಕೆ ಅಲ್ಲಿಂದ ಹುಬ್ಬಳ್ಳಿಗೆ ಅಲ್ಲಿಂದ ಬೆಂಗಳೂರಿಗೆ ಅಲ್ಲಿಂದ NewYork ಅಲ್ಲಿಂದ Philadelphia ಅಲ್ಲಿಂದ Sydney. ಹೀಗೆ ನನ್ನ ಜೀವನ ಬಿಸಿಲುಗುದಿರೆಯನ್ನೇರಿ ಹೋಗ್ತಾ ಇದೆ ಅನಸುತ್ತೆ. ಇಂತ Fast ಲೈಫಿನಲ್ಲಿ ಈತರಹದ ನೆನಪು ಬರುವುದು ತುಂಬಾ ವಿರಳ ಅಂತ ನೆನಪು ಅದ ಕೂಡಲೇ ಎದ್ದು BLOG ಬರೀತಾ ಇದ್ದೀನಿ.
ಕಣ್ಣು ಉರೀತಾ ಇದೆ ಆದರೆ ಮನಸ್ಸಿಗೆ ಏನೋ ಸಮಾದಾನ ...ಒಂದು ಮದುರ ನೆನಪನ್ನು ಪದಗಳಲ್ಲಿ ಹಿಡಿದ ಉತ್ಸಾಹ. ಈ ಉತ್ಸಾಹನಾದ್ರುನು ನಿದ್ರೆತರುಸುತ್ತೆ ಅನಕೊತೀನಿ :-)