Wednesday, May 26, 2010

ನಿನಗಾಗಿ


ನಿನ್ನ ಕನಸಿನ ಕುಸುಮವಾಗಿರುವೆ

ನಿನ್ನ ಮನದ ಮೊಗ್ಗಾಗಿರುವೆ

ನಿನ್ನ ಒಡಲ ಕಡಲಾಗಿರುವೆ ...


ನಿನ್ನ ಮನೆಯ ಹಿತ್ತಿಲ ಗಿಡದ ನೆರಳಾಗಿರುವೆ

ಮನೆಮುಂದಿನ ಬಯಲಿನ ತಂಗಾಳಿಯಾಗಿರುವೆ

ನಡಮನಿಯ ಹೊಸ್ತಿಲಾಗುರುವೆ ...



ನಿನ್ನೊಡಲ ಹುತ್ತಿನ ಹಾವಾಗಿರುವೆ

ನಿನ್ನ ಕ೦ಗ ಕಾಡಿಗೆಯಾಗಿರುವೆ

ಎಲ್ಲಾದರಿರುವೆ , ಎಂತಾದರಿವೆ, ನಿನ್ನವನಾಗಿರುವೆ

ಜೀವನ

ಜೀವನ ಚದುರಂಗ
ತಾ ಒಂದು ಬಗೆದರೆ
ದೈವ ಬೇರೇನೋ ಬಗೆಯುದು ಉಂಟು

ಇಲ್ಲಿ ಮಿಲನ ಆಕಸ್ಮಿಕ
ಅಗಲುವುದು ಅನಿವಾರ್ಯ
ಈ ಆಸ್ಮಿಕ ಮತ್ತು ಅನಿವರ್ಯತೆಯಲ್ಲಿ ಬಂದೊಗುವರೊಡನೆ ಎಂತಾ ನೆಂಟು

ಜಗದೀಶನಾಡುವ ಜಗವೇ ನಾಟಕರಂಗ
ನಾ ಪಾತ್ರದಾರಿ
ಹಚ್ಚಿದ ಬಣ್ಣ ಹೇಳುವ ಸಾಲುಗಳ ನಡುವೆ ಬಿಡಿಸಲಾಗದ ಗಂಟು

Monday, May 17, 2010

ಮಗ್ಗಲ್ಮನಿ ಹುಡಗಿಗೊಂದು ಪದ್ಯಾ



ಮಗ್ಗಲ್ಮನಿ
ಹುಡಗಿ ಹೆಸರು ವಿದ್ಯಾ
ಆಕೀ ಪ್ರೀತಿ ಹೊಂಡಕ್ಕ ನಾ ಬಿದ್ಯಾ
ಗೆಲ್ಲಬೇಕಲ್ಲ ಆಕಿ ಮನಸ್ಸು, ಅದೆ೦ಗ ಸಾಧ್ಯ?

'ಪ'ದಿಂದ ಸುರು ಆದ್ರ ಪದ್ಯ
'ಗ'ದಿಂದ ಸುರು ಆದ್ರ ಗದ್ಯ
ಒಟ್ನ್ಯಾಗ ಏನರ ಬರದ್ರ ಸಾಕು ಸದ್ಯ..


ಅದನ್ನೊಡಿ ಆಕೀ ಅಂದ್ಲು, ಲೋ ಸಿದ್ಯಾ
ಬರಕೊಂತ ಕುಂದುರು ನೀನು ಪದ್ಯಾ
ನಮ್ಮಪ್ಪ ಲಗ್ನ ಮಾಡ್ತಾನ ನನ್ನ ರಮೇಶನ್ ಮದ್ಯ .

Saturday, May 15, 2010

ಪ್ರೀತಿ ಮಾಡಿರಿ ..

ನೀಳ ಆಕಾಶದಂತ ನಿಷ್ಕಳಂಕ ಪ್ರೀತಿ ಮಾಡಿರಿ
ಮೆಘಗಳನು ಚುಂಬಿಸುವ ಹಿಮಾಲಯದ ಹಾಲಿನಂತಾ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ಜಾತಿ ಬೇಧ ಮರೆಸುವ ಸಂಗೀತದಂತ ಪ್ರೀತಿ ಮಾಡಿರಿ
ದೇಶ, ಭಾಷೆ ಮೀರಿ ಸೇರುವ ಸಪ್ತ ಸಾಗರದಂತ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ಆನು ತಾನು ನೀನು ನಾನು ಎಂಬ ಬೇದ ಮಾಡದ ಕಂದನಂತೆ ಪ್ರೀತಿ ಮಾಡಿರಿ
ಮಗುವಿಗಾಗಿ ಸರ್ವಸ್ವ ತ್ಯಜಿಸುವ ತಾಯಿಯಂತೆ ನಿಸ್ವಾರ್ಥ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ರಾಮನಿಗಾಗಿ ಕಾಯುವ ಶಬಿರಿಯಂತೆ ಪೂಜ್ಯ ಭಾವನೆಯ ಪ್ರೀತಿ ಮಾಡಿರಿ
ಈ ಮಾಯಾ ಲೋಕದ ಕ್ರತಕ ಜೀವನದ ಸ್ವಾರ್ಥವನ್ನು ಅಣಕಿಸುವಂತೆ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

Wednesday, May 12, 2010

ಬ್ಯಾಡಬೆ ಹುಡಗೀ…

ಬ್ಯಾಡಬೆ ಹುಡಗೀ…
ನೀ ಹಂಗ ನೋಡಬ್ಯಾಡ
ಆ ಲುಕ್ ನೋಡೀದ್ರನ ಒಂದು ಪಲ್ಸ ಮಿಸ್ ಆಗುತ್ತ …

ಬ್ಯಾಡಬೆ ಹುಡಗೀ…
ನೀ ಹಂಗ ನಗಬ್ಯಾಡಾ
ಆ ಸ್ಮೈಲ್ ನೋಡೀದ್ರ ಎದಿಯಾಗ ಹಳ್ಳ ನಟ್ಟಂಗಾಗುತ್ತ

ಬ್ಯಾಡಬೆ ಹುಡಗೀ…
ನೀ ಹಂಗ ನಡೀಬ್ಯಾಡ
ಆ ನಡಿಗೀಗೆ ನಿಂತಲ್ಲೇ ಜೋಲಿ ತಪ್ಪುತ್ತಾ

ಬ್ಯಾಡಬೆ ಹುಡಗೀ…
ನೀ ಅಸ್ಟು ನಲೀಬ್ಯಾಡ
ಆ ವೈಯಾರಕ್ಕ ಒಂದ ಹುಬ್ಬು ಏರಿ ನಗತೈತಿ

Thursday, May 6, 2010

ನೀನಿಲ್ಲದ ...

ಆಸೆಯ ಹೂವಿಂದ ಪ್ರೀತಿಯ ಮಂಟಪ ಹಾಕೀನಿ,

ನೀನ ಬರದಿದ್ರ ಏನಂತ ಹೇಳಲಿ ಈ ಮನಸೀಗೆ

ನೀನಿರದಿದ್ರೆ ಯಾರನ್ನ ಜೋಡಿಸಲಿ ಈ ಹೃದಯಕ್ಕ



ಕನ್ನಹನಿಯ ಮುತ್ತಿಂದ ಸರವೊಂದು ಪೋನಸೀನಿ

ನೀನಾ ಇಲ್ಲಂದ್ರ ಏನಂತ ಹೇಳಲಿ ಆ ಮುತ್ತಿಟ್ಟ ಕಣ್ಣೀಗೆ

ನೀನಾ ಇಲ್ಲಂದ್ರ ಯಾರ ಕೊರಳೀಗೆ ಆ ಸರ?



ನಾಕಂಡ ಕನಸೀನ ಹಂದರವ ಕಟ್ಟೆನಿ

ನೀನಿಲ್ದನ ಗಾಳಿ ಬಿರುಗಾಳಿ ಹೆಂಗ ತಳೀತು

ನೀನಿಲ್ಲದ ಹಂದರ ನಗ್ಯಾಕೆ?

Wednesday, May 5, 2010

ಅವಳ ಮುಸುಕಿನ ಚಿತ್ರ

ದಿನ ಉರುಳಿದವು, ಋತು ಕಳೆದವು
ಆದರೆ ಮನದಲಿ ಮನೆ ಮಾಡಿದ ಅವಳ ನೆನಪು ಅಳಿಸಿಲ್ಲ

ಆ ನೆನಪಿಗೆ, ಕನಸಲಿ ರೂಪ ಕೊಡಲೆತ್ನಿಸಿದೆ
ನಾ ಕನಸುಗಾರನಾದೆ, ಆದರೆ ಅವಳ ರೂಪ ಸಿಕ್ಕಿಲ್ಲ

ಆ ನೆನಪನು, ಕುಂಚದಿ ಸೆರೆ ಹಿಡಿದೆ
ನಾ ಚಿತ್ರಕಾರಾನಾದೆ ಆದರೆ ಅವಳ ಚಿತ್ರವಾಗಿಲ್ಲ

ಆ ನೆನಪನು, ಪದಗಳಲಿ ಪೋನಿಸಿದೆ
ನಾ ಕವಿಯಾದೆ ಆದರೆ ಅವಳ ಕವಿತೆಯಾಗಿಲ್ಲ

ಆ ನೆನಪನು, ಶಿಲೆಯಲಿ ಕೆತ್ತಿದೆ
ನಾ ಶಿಲ್ಪಿಯಾದೆ, ಆದರೆ ಅವಳ ಮೂರ್ತಿಯಾಗಿಲ್ಲ










........ ತಮ್ಮಾ ಹೆಣ್ಣು ದೆವ್ವಿನ ಕಾಟಾ ಜಾಸ್ತಿ ಆಗೈತಿ ಅನಸುತ್ತ... ಮಕ್ಕೊಳು ಮುಂದ ತೆಲೆದಿಮ್ಬಿನ್ಯಾಗ ಕಸಬರಿಕೆ ಇಲ್ಲ ಚಪ್ಪಲು ಇಟಕೊಂದು ಮೊಕ್ಕೊರಪಾ...ಅಂದ್ರ ಚೊಲೋ ನಿದ್ದಿ ಬರತೈತಿ ....ಹೆಣ್ ದೆವ್ವಿನ ಕಾಟ ಇರಂಗಿಲ್ಲ ...

ಹೆಹೆಹೆಹೆ !!!!

ಏನ ಹೇಳಲಿ ಈ ಹುಚ್ಚ ಮನಸೀಗೆ !

ಹಳೆಯ ನೆನಪುಗಳು ಮದುರ ...
ಕಳೆದ ಘಳಿಗೆಳು ಸವಿರ..
ಅದ್ರುನು ಕಡ್ತಾವ ನೆನಪ !!


ಮತ್ತ ಬರ್ತೀನಿ ನಿನ್ನ ಹಳ್ಳಿಗೆ
ಅಂತ ಹೇಳಿದ್ದ್ಯಾ ನನಗೆ ನಾನ ಮೆಲ್ಲಂಗೆ
ಅಲ್ಲಿತನಕ ಹೆಂಗ ಕಯತೀಪಾ ಹೀರೋ! ಅಂತ ಕೆಳಿತ್ತ ನನ್ ಮನಸಾ!!


ಹೇಳಾಕ ನಾನಿಲ್ಲೆ, ಅವಳು ಅಲ್ಲೆ
ಅದ್ರ ನನ್ನ ದಿನಚರಿಯಲ್ಲಿ ಅವಳೇ ಸುಪ್ರಬಾತ
ಅವಳೇ ಶುಭಮಂಗಳ !!

ಬೇಕಂದ್ರ ಸಿಗದವಳು, ಬ್ಯಾಡ೦ದ್ರ ಬಿಡದವಳು
ಬೇಕು ಬ್ಯಾಡಾ ಅನ್ನಕ ನೀನ್ಯಾರಪಾ ತಮ್ಮ ..
ಅಂತ ಕೇಳುತ್ತ ನನ್ನ ಮನಸ್ಸು ನನ್ನಾ !!

ಅವಳಿಲ್ಲ೦ದ್ರುನು ಹುಡುಕೋ ಕಣ್ಣಗಳು
ಅವಳ ದ್ವನಿಗೆ ಹಪಹಪಿಸೋ ಕಿವಿಗಳು
ಹುಚ್ಹ ಮನಸಿಗೇನು ಗೊತ್ತು ಅವಳಿಲ್ಲಂತ!!

Saturday, May 1, 2010

ಹಿಗೊ೦ದು ವೀಕ್ಎಂಡ್ ...

ಎಲ್ಲ ಶನಿವಾರದ ಹ೦ಗ ಈ ವಾರ ಕ್ರಿಕೆಟ್ ಇರ್ಲಿಲ್ಲ ... ಆರಾಮಾಗಿ AM ಹೋಗಿ PM ಆದ ಮ್ಯಾಗ ಎದ್ದ್ಯಾ.
ಅಸ್ಟು ಲೇಟಾಗಿ ಎದ್ರುನು ಹಾಸಿಗೆ ಬಿಟ್ಟು ಏಳೊ ಮನಸಿರ್ಲಿಲ್ಲ ....ಸರೀ ಅಂತ system ನಲ್ಲಿಹಾಡು ಆದ್ರು ಕೇಳಿದ್ರಾಯ್ತು ಅನ್ಕೊಂಡು, ಒಳ್ಳೆ ಹಾಡು ಹುಡುಕ್ತಾ ಇದ್ದೆ ...ಅಸ್ಟರಲ್ಲಿ ಪ್ರವೀಣ್ ಗೊಡ್ಕಿ೦ಡೆ ಅವರ "ರಾಗಿಣಿ" ಸಿಕ್ತು. ಕರೆವ೦ದ್ರ ಬಾಳಾ ಚೊಲೋ ಕ೦ಪೊಸಿಶನ್. ಕೊಳಲು ಹಾಗು ತಬಲಾ ಮಿಶ್ರಿತ instrumental ಕೇಳ್ತಾ ಕೇಳ್ತಾ ಹೋದ್ರೆ ಹಂಗೆ ಮೈ ಮರೆತೊಗ್ತೀವಿ. ನನ್ನ ಎಲ್ಲ ಮೆಚ್ಚಿನ ಹಳೆಯ ಹಾಡುಗಳನನ ಹಿ೦ದುಸ್ತಾನಿ ಮೂಲ ರಾಗದ ಹೆಸರಿನಲ್ಲಿ ಸ೦ಯೊಜಿಸಿದ್ದಾರೆ. ಕೊಳಲಿನ ಇ೦ಪಾದ ನಾದದಲ್ಲಿ ಸೊಗಸಾಗಿ ಹೆಣೆದಿದ್ದಾರೆ.
(http://www.kannadaaudio.com/Songs/Instrumental/home/Ragini1.php)


ಸರಿ ಒಟ್ಟಿನಲ್ಲಿ ದೊಡ್ಡ ಮನಸ ಮಾಡಿ ಎದ್ದೆಬಿಟ್ಟೆ. ಅಡಿಗೆ ಮೆನೆಗೆ ಹೋಗಿ ಕಳ್ಳ ಬೆಕ್ಕಿನ ಹ೦ಗ ಇಣುಕಿ ನೋಡಿದೆ...
ಅಪ್ಪಿ ತಪ್ಪಿ roomies ಏನಾದ್ರು ಮಾಡ್ಯಾರನು ಅಂತ ಇಣಿಕಿ ನೋಡಿದೆ .. ನನ್ನ ಪುಣ್ಯಕ ಚಾ ಮಾಡಿದ್ರು ....ಸ್ವಲ್ಪ ಉಳಿಸಿದ್ರು ಕೂಡ. ಕಪ್ಪನ್ಯಾಗ ಚಾ ಹಾಕ್ಕೊಂಡು ಮೈಕ್ರೋವೇವ್ ನ್ಯಾಗ ಬೆಚ್ಚಗ ಮಾಡಕೊ೦ಡು ಬಂದು ಇನ್ನೊಂದು ರೌಂಡ್ ಹಾಡು ಕೇಳಿದ್ರಾತು ಅಂತ ಬ೦ದು ಕೂತ್ಕೊಂಡೆ. ಒ೦ದು ಚೊಲೋ ಹಾಡು ಸಿಕ್ತು. ತ೦ಡ್ಯಾಗ ಬಿಸೆ ಚಾ ಹೇರಕೊ೦ತ ಮಧುರ ಹಾಡುಗಳನ್ನೂ ಕೇಳೋದ್ರಲ್ಲಿ ಇರೋ ಮಜಾ ಆಸ್ಟಿಸ್ಟಲ್ಲ

ಎಲ್ಲಿ ಜಾರತೋ
ಮನವು, ಎಲ್ಲೇ ಮೀರೀತೋ
ಎಲ್ಲಿ ಅಲ್ಲಿ ಅಲೆತಿಹುದೋ
ಏಕೆ ನಿನ್ನದಯತೋ .....

ಮೈಸೂರು ಅನ೦ತಸ್ವಾಮಿ ಅವರ ಸ೦ಗೀತ ಮತ್ತೆ ರತ್ನಮಾಲ ಪ್ರಕಾಶ್ ಅವರ ಧ್ವನಿ. ಇದು ಅಸ್ಟೆ ಅಲ್ಲ ಭಾವಸ೦ಗಮದಲ್ಲಿ ಇರೋ ಹಾಡು ಭಾಳ ಚೆ೦ದ ಅದವು .

ನಿಜವಾಗಲುನು ಈ ವೀಕ್ಎಂಡ್ ಬಂದರ ಆ ಎರೆಡು ದಿವಸದ ಟೈಮ್ ಟೆಬಲ್ಲಿಗು ಮತ್ತ ಉಳದ ಐದು ದಿವಸದ ಟೈಮ್ ಟೆಬಲ್ಲಿಗು ಅಜ ಗಜಾ೦ತರ ವ್ಯತ್ಯಾಸ. ವೀಕ್ ಡೇಸ್ ನಲ್ಲಿ ಕಾಲಚಕ್ರವನ್ನು ಬೆನ್ನತ್ತಿ ಒಡಕೊ೦ತ ಒಡಕೊ೦ತ ಉಸಿರಾಡಿಸೋದಕ್ಕು ಟೈಮ್ ಇಲ್ಲಲಲಪ ಅನಸುತ್ತ , ಬ್ಯಾಸರ ಆಗೇತಿ ಅ೦ತ ಸ್ವಲ್ಪ ಅರಾಮ ಮಾಡೊಕ್ಕು ಆಗೋಲ್ಲ. ಆದರೆ ವೀಕ್ ಎಂಡ್ ನಲ್ಲಿ ಇರುವ ನಲವತ್ತೆ೦ಟು ತಾಸಿಗುನು ನಾವ ರಿ೦ಗ್ ಮಾಸ್ಟರ್. ನಮ್ಮ ಜೀವನ ಹೆ೦ಗ ಬೇಕಾದ್ರೂ ಹ೦ಗ ಸಾಗಿಸಬಹುದು. ಏನ್ ಮಾಡಿದ್ದ್ರುನು ಯಾರು ಕೇಳೌರ್ ಇರ೦ಗಿಲ್ಲ. "ಕರದು ಕಟ್ಟವರು ಇರಂಗಿಲ್ಲ ತುರಿಸಿ ಮೇವ ಹಾಕೌರ್ ಇರ೦ಗಿಲ್ಲ". ನಮ್ಮದ ಸಮ್ರಾಜ್ಯಾ, ನಾವ ದೊರೆ, ನಾವ ಪ್ರಜೆ. ಬೇಕಾದಷ್ಟು ನಿದ್ದಿ ಮಾಡು, ಹೊಟ್ಟಿ ಹಸದರ ಊಟ ಮಾಡು ಇಲ್ಲಂದ್ರ ಉಪಾಸ ಇರು. ಹಸದಾಗ ಕೂಳು ಇಲ್ಲ೦ದ್ರ ಐತೆಲ (ಪಿಜಾಯನಮಹ:) ಫೋನು ಎತ್ತದು ಪಿಜಾ ಆರ್ಡರ್ ಮಾಡೋದು. ಈ ಎರಡು ದಿವಸದಾಗ ಗಾಂಧಿಜಿ ನಮಗ ಸ್ವತ೦ತ್ರ್ಯ ತ೦ದು ಕೊಟ್ಟಿದ್ದು ಎಷ್ಟು ಚೊಲೋ ಆತಪ ಅ೦ತ ಅನಸುತ್ತ.

ಹಿ೦ಗ ಕನ್ನಮುಚ್ಚಿ ಕಣ್ಣ ಬಿಡುದ್ರಾಗನ "so called weekend" ಮುಗದಿರುತ್ತ.. ಸೋಮವಾರ ನೆನಸಿ ಕೊ೦ಡ್ರ ಹೊಟ್ಟ್ಯಾಗ ಹೆಗ್ಗಣ ಓಡಾಡಿದ೦ಗ ಅನಸಾಕ್ ಕು೦ದರತೈತಿ. ಈ ವೀಕ್ಎಂಡ್ ಕಾಮನಬಿಲ್ಲು ಇದ್ದ೦ಗ, ದೋರದಗಿ೦ದ ಬಾಲ ಚ೦ದ ಕಾನತ್ತ ಸಮೀಪ ಹೋದ ಕೂಡಲೇ ಮಾಯ ಆಗಿರ್ತೈತಿ. ಬಂತಪ ವೀಕ್ ಎಂಡ್ ಅ೦ತ ಖುಷಿಪಡುಕಿ೦ತ ಮು೦ಚೆಕನ ಹೊತಲಪ ವೀಕ್ ಎಂಡ್ ಅ೦ತ ಸ೦ಕಟ ಪಡು ಹ೦ಗ ಮಾಡುತ್ತ.
ಅದಕ್ಕೆ ಯಾವದೋ ಒಬ್ಬ ಮೆಧಾವಿ ಸರಿಯಾಗಿಯೇ ಹೇಳಿದ್ದಾನೆ. "There aren't enough days in the weekend"