Thursday, January 1, 2015

ರವಿಯನ್ನ ಮತ್ತು ಚಂದಮಾಮರ ಅಪರೂಪದ ಭೇಟಿ
















 ಹೀಗೆ ಒಂದು ರವಿವಾರದ  ಸೂಟಿ
ರವಿಯನ್ನ ಮತ್ತು ಚಂದಮಾಮರ ಅಪರೂಪದ ಭೇಟಿ
ನಡೆಯಿತು ವಿವಾದ, ಯಾರಿಗೆ ಯಾರು ಸಾಟಿ?

ಮಂದಹಾಸದಿ ಚೆಂದ
ಹರಟೆ ಹೊಡೆಯಲು ಅಂದ
ಯಾವುದು ಚೆಂದ?

ಮೂಡಣದ ಮಾಲಿಕನ ಮುಂಜಾನೆಯ ಚಿಗರು ಮೀಸೆಯ ನಗುವೆ?
ಪಡುವಣದಲಿ ಮಿಂದ ಮಂದಹಾಸದ  ಕೆಂದ ಮೊಗವೆ?
ಅಥವಾ ಕತ್ತಲೆಯ ಲೋಕಕ್ಕೆ ಬೆಳದಿಂಗಳ ಬಾಡದ ಊಟಬಡಿಸುವ ನನ್ನ ಚೆಲುವೆ?

ದಿನದ ನೌಕರಿ ಮುಗಿಸಿ ಹೊರಟಿದ್ದ ಸೂರ್ಯನಿಗೆ ಎಲ್ಲಿಲ್ಲದ ಕೋಪ
ಬಾಡಿಗೆ ಬೆಳಕಿನಲಿ ಲೋಕ ಬೆಳಗುವ ಗುತ್ತಿಗೆದಾರನ ಮಾತು ಕೇಳಿ ತಾಪ
ತಿಳಿಸಬೇಕು ಚಂದಿರನಿಗೆ ಅವನ ನಿಜ ರೂಪ 

ಎಲೊ ಮೂಢನೆ, ತಿಂಗಳ ಕೊನೆಗೆ ಕಾಣದೆ ಓಡುವೆ
ಮುಖದಿ ಎಲ್ಲ ನಿನಗೆ ಮೊಡುವೆ
ಆದರು ಏತಕೆ ನಿನಗೆ ನನ್ನ ಗೊಡುವೆ ?

ನಗುತ ಚಂದಿರ ಅಂದನು ಯಾವದು ಇಲ್ಲ ನನಗೆ ಒಡುವೆ
ಅದುರೂ ನಾನು ಯಾವಾಗಲೂ ನಲೀವೆ  
ಅದುವೆ ನನ್ನ ಚೆಲುವೆ

ನಮ್ಮಿಬ್ಬರ ಕೆಲಸ ಒಂದೇ
ಶಿಫ್ಟ್ ಬೇರೆ ಇದ್ದರು ಕೆಲಸ ಅದೆ 
ಹೊಸ ವರುಷದ ಬೋನಸ್ ಇರದಿದ್ದರೂ ಪಾರ್ಟಿ ಇಂದೆ.. 


No comments:

Post a Comment