
ಸ್ನೇಹ ತರುವ ಸಖ್ಯ
ಪ್ರೀತಿ ಕೊಡುವ ಸೌಖ್ಯ
ವಿರಹ ಕೊಡುವ ದುಖ: ಮಾತಿನಲ್ಲಿ ಹೆಳುವುದು ಹೇಗೆ?
ಇಲ್ಲಾ, ಪದಗಳಲಿ ಪೂೕನಿಸಲಾ?
ಪದಗಳ ಸಾಲನ್ನು ತಕ್ಕಡಿಯಲಿ ತೂಗುವುದುoಟೆ?
ಭಾವನೆಗಳಿಗೆ ಬೆಲೆಯು೦ಟೆ?
ಪದಗಳಿಗೆ ತೂಕವು೦ಟೆ?
ನೋವಿಗೆ ಆಳ ಉ೦ಟೆ?
ದುನಿಯಾದಾಗೆ ಎಲ್ಲಾನು ಕ್ವಾ೦ಟಿಫೖ ಮಾಡ್ತಾರೆ.
ಪ್ರೀತಿನ ಮಜ್ನು, ಪಾರುಗೆ ಕಂಪೆರ್ ಮಾಡ್ತಾರೆ
ಇಲ್ಲಾ, ಪ್ರೀತಿನ ತ್ಯಾಗದಲ್ಲಿ ತೂಗತಾರೆ
ಪ್ರೀತಿಯಿಂದ ಏನು ಲಾಭ ಅಂತಾರೆ
ಪ್ರೀತಿಯನು ಅಳೆಯಲು ತಕ್ಕಡಿಯಲ್ಲ ಸ್ಪಂದಿಸುವ ಮನಸ್ಸು ಬೇಕು
ಪ್ರೀತಿಯನ್ನು ಪ್ರೀತಿಯಿಂದ ಅರಿತರೆ ಸಾಕು
ಜಗದ ನೋವಿಗೆ ಪ್ರೀತಿಯ ಮಲಾಮು
ಜೀವನದ ನಲಿವಿಗೆ ಪ್ರೀತಿಗೆ ಸಲಾಮು