Wednesday, June 9, 2010

ಬಾಳ ನೌಕೆ

ಪ್ರಪಂಚ ಹಿಂದೆ ಹಾಕಲು ಒಡಿದವರೆಸ್ಟು?
ಹಿಂದೆ ಬೀಳುವ ಭಯದಿಂದ ಒಡಿದವರೆಸ್ಟು?
ಮಾಯದಜಿಂಕೆ ಬೆನ್ನತ್ತಿದಾಗ ಹಿಂದೆ ಯಾರು? ಮುಂದೆ ಯಾರು?


ಜೀವನದ ಜ೦ಜಾಟದಲ್ಲಿ ಬೆಂದವರೆಸ್ಟು?
ಜಗತ್ತಿನ ಜೂಜಾಟದಲ್ಲಿ ಸೋತವರೆಸ್ಟು?
ಬಾಳಿನಲ್ಲಿ ಬೇಸರದಿಂದ ನೊಂದವರೆಸ್ಟು?


ಕಾಲ ಚಕ್ರ ಉರಳ್ತಾನೆ ಇರಬೇಕು
ಗಡಿಯಾರದ ಮುಳ್ಳು ಸುತ್ತತಾನೆ ಇರಬೇಕು
ಜೀವನದ ನೌಕೆ ತೇಲ್ತಾನೆ ಇರಬೇಕು


ಯುಗಾದಿ ಮತ್ತೆ ಬರುತ್ತೆ
ಹಸಿರು ಮತ್ತೆ ಚಿಗಿರುತ್ತೆ
ಹೊಸ ನೀರು, ಹೊಸ ಗಾಳಿ, ಹೊಸ ಬೆಳಕು ಬಂದೆ ಬರುತ್ತೆ

8 comments:

  1. ತುಂಬಾ ಅರ್ಥಪೂರ್ಣವಾದ ಕವನ..
    ಕಾಲ ಚಕ್ರದ ಬಗ್ಗೆ... ಕಾಲ ಕಳೆದು ಹೋದಮೇಲೆ ವ್ಯಥೆ ಪಟ್ಟವರು
    ಕಾಲವನ್ನು ಬೆನ್ನುಹತ್ತಿ... ನೊಂದವರು...
    ಮತ್ತೆ ಹೊಸ ಚಿಗುರು ಬರುತ್ತೆ ಎಂಬ ಬರವಸೆ ಇರಲೇ ಬೇಕು ಜೀವನದಲ್ಲಿ
    ಅದೇ ಒಂದು ಬಾಳ ನೌಕೆ :)

    ReplyDelete
  2. ಕಾಲ ಯಾರಿಗೂ ಕಾಯುವುದಿಲ್ಲ.ಕವನ ಚೆನ್ನಾಗಿದೆ.ನಿಮ್ಮ ಬಾಳ ನೌಕೆಯ ಪಯಣ ಸುಖಕರವಾಗಿರಲಿ ಎನ್ನುವ ಹಾರೈಕೆ.ಬ್ಲಾಗಿಗೆ ಭೇಟಿ ಕೊಡಿ.ಧನ್ಯವಾದಗಳು.

    ReplyDelete
  3. ಬಹಳ ಚನ್ನಾಗಿ ಮೂಡಿವೆ ಸಾಲುಗಳು...ಹಳೆತನ್ನು ಅವಲೋಕಿಸಿ ಹೊಅಸತನ್ನು ಬರಮಾಡಿಕೊಳ್ಳುವುದೇ ಜೀವನ

    ReplyDelete
  4. Thanks all for yr comments n feedback...

    ReplyDelete
  5. IshwarJakkali ,

    ಸೊಗಸಾದ ಕವಿತೆ..
    ಆದರೆ 'ಷ್ಟು' ಬದಲಾಗಿ 'ಸ್ಟು' ಬಂದಿದ್ದು ಅಹಿತವೆನಿಸುತ್ತಿದೆ..

    ReplyDelete