Saturday, May 15, 2010

ಪ್ರೀತಿ ಮಾಡಿರಿ ..

ನೀಳ ಆಕಾಶದಂತ ನಿಷ್ಕಳಂಕ ಪ್ರೀತಿ ಮಾಡಿರಿ
ಮೆಘಗಳನು ಚುಂಬಿಸುವ ಹಿಮಾಲಯದ ಹಾಲಿನಂತಾ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ಜಾತಿ ಬೇಧ ಮರೆಸುವ ಸಂಗೀತದಂತ ಪ್ರೀತಿ ಮಾಡಿರಿ
ದೇಶ, ಭಾಷೆ ಮೀರಿ ಸೇರುವ ಸಪ್ತ ಸಾಗರದಂತ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ಆನು ತಾನು ನೀನು ನಾನು ಎಂಬ ಬೇದ ಮಾಡದ ಕಂದನಂತೆ ಪ್ರೀತಿ ಮಾಡಿರಿ
ಮಗುವಿಗಾಗಿ ಸರ್ವಸ್ವ ತ್ಯಜಿಸುವ ತಾಯಿಯಂತೆ ನಿಸ್ವಾರ್ಥ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

ರಾಮನಿಗಾಗಿ ಕಾಯುವ ಶಬಿರಿಯಂತೆ ಪೂಜ್ಯ ಭಾವನೆಯ ಪ್ರೀತಿ ಮಾಡಿರಿ
ಈ ಮಾಯಾ ಲೋಕದ ಕ್ರತಕ ಜೀವನದ ಸ್ವಾರ್ಥವನ್ನು ಅಣಕಿಸುವಂತೆ ಪ್ರೀತಿ ಮಾಡಿರಿ
ಪ್ರೀತಿ ಮಾಡಿರಿ, ಜಗದೊಳಗೆ ಪ್ರೀತಿಯ ಬೀಜ ಬಿತ್ತಿರಿ

6 comments:

  1. ಈಶ್ವರ್, ಪ್ರೀತಿ ಮಾಡಿರಿ ಎನ್ನೋ ಆಹ್ವಾನ ..ಸಂದೇಶ ನೋಡಿ ಯಕ್ಕೋ ನೀವು ಪ್ರಮೋದ ಮುತಾಲಿಕ್ ಗೆ ‘ಬಾ ಒಂದು ಕೈ ನೋಡ್ಕೋತೀನಿ ಅನ್ನೋಹಾಗಿತ್ತು‘ ಆದ್ರೆ ಅದರಲ್ಲೇ ಕಂಡೀಶನ್ಸ್ ಹಾಕಿ ಹೀಗೇ ಇರಬೇಕು..ಹೀಗೇ ಪ್ರೀತಿ ಆಗಬೇಕು ಅನ್ನೋದನ್ನ ಹೇಳಿ....ಚೌಕಟ್ಟು ಹಾಕಿದ್ದೀರಿ....

    ReplyDelete
  2. tumbaane chenaagide kavana :) ... jagadOLage preetiya bija bitto padagaLu sakattagive :)

    ReplyDelete
  3. Thanks Jalayana,
    Ee moden yugadali, preeti annodu ontara anakoolate iddange agide.... kind of diluted ...
    I was trying convey the same ..

    @ Manasa
    Tumba dhanyavadalu

    ReplyDelete
  4. ನಿಮ್ಮ ಪ್ರೀತಿ ಮಾಡಿರಿ ಮಂತ್ರ ಚೆನ್ನಾಗಿದೆ...

    ReplyDelete