Tuesday, June 29, 2010

ಉತ್ತರ ಧ್ರುವದಿಂ ದಕ್ಷಿನ ಧ್ರುವಕು

ಕಳೆದ ಹಲವಾರು ದಿನಗಳಿಂದ karnatic, ಭಾವಗೀತೆ ಕೇಳ್ತಾ ಕೇಳ್ತಾ ಕನ್ನಡ ಹಳೆ ಹಾಡು ಕೇಳೆ ಇರ್ಲಿಲ್ಲ. ಅದಕ್ಕೆ ಸುಮ್ನೆ ಒಂದು ರೌಂಡ್ ನಮ್ಮ ಫೆವರೆಟ್ ಹಾಡು ಕೇಳೋಣ ಅಂತ ಮೊಬೈಲ್ ನಲ್ಲಿ ಪ್ಲೇ ಲಿಸ್ಟ್ ಶುರು ಮಡಿದ ಕೂಡಲೇ

" ಉತ್ತರ ಧ್ರುವದಿಂ
ದಕ್ಷಿನ
ಧ್ರುವಕು
ಚುಂಬಕ ಗಾಳಿಯು ಬಿಸುತಿದೆ"

ಹಾಡು ಶುರುವಾಯ್ತು. ಹಾಡು ಎಷ್ಟು ಮದುರ ಎಷ್ಟು ಸಲ ಕೇಳಿದ್ರು ಇನ್ನು ಹಚ್ಚು ಹಸರಾಗಿದೆ.
ಹಾಡು ಕೇಳ್ತಾ ಕೇಳ್ತಾ , ಹಾಡು ನನಗೆ ಎಷ್ಟು ಸಮಂಜಸವಾಗುತ್ತಲ್ವೆ ಅಂತ ಯೋಚನೆಯ ಹೊಂಡಕ್ಕ ಬಿದ್ದೆ. USA ನಿಂದ sydneyಗೆ ಬಂದ ದಿನಗಳು ನೆನಪಾಗ್ತಾ ಇದ್ದವು. ಹಾಡು ನನಗ ಬರದಾರೇನೋ ಅನಸ್ತಿತ್ತು. Newyork ನಿಂದ sydneyಗೆ ಜೀವನದ ಪಯಣ ಸಾಗಿತ್ತು. ಚುಂಬಕ ಗಾಳಿ ಜೊತೆ ಹೊತೆಗೆ ನಾನು ತೇಲಿ ಉತ್ತರದಿಂದ ದಕ್ಷಿಣಕ್ಕೆಬಂದಿದ್ದೆನಿ ಏನೋ ಅನಸಿತ್ತು.

ಜೀವನವೆಂಬ ರೈಲುಬಂಡಿ ನನ್ನನ್ನು ಊರಿಂದ ಓರಿಗೆ, ದೇಶದಿಂದ ದೇಶಕ್ಕೆ ಕರೆದೊಯ್ದಿತ್ತು. ನನ್ನ ಸ್ಟಾಪ್ ಬಂತು ಅ೦ದಕೊ೦ಡಾಕ್ಷನ ಮತ್ತೆ ಇನ್ನೊಂದು ಸ್ಟಾಪ್ ಗೆ ಕರೆದೊಯ್ಯುತ್ತಿತ್ತು. ಒಂದರಿಂದ ಇನ್ನೊಂದು ಹೋಗುತ್ತಾ ಹೋಗುತ್ತಾ ರೋಣದಿಂದ, ಧಾರವಾಡ ಅಲ್ಲಿಂದ ಹುಬ್ಬಳ್ಳಿ, ಹುಬ್ಲಿಯಿಂದ ಬಂಗಳೂರು, ಬೆಂಗಳೂರಿನಿಂದ Newyork, ಅಲ್ಲಿಂದ Philadelphia, phillyಯಿಂದ sydney. ಅವಾಗ ಇವಾಗ ಮನಸು ಹೇಳ್ತಾ ಇರುತ್ತೆ "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ". ಮನಿ ಮಠ ಎಲ್ಲ ಬಿಟ್ಟು ಪರದೇಸಿ ಹಂಗ ಎಸ್ಟ ದಿನ ಹಿಂಗ ಇರುದಪ ಅನಸುತ್ತೆ. ಅಲೆಮಾರಿ ಜೀವನ ಬೇಸತ್ತು ಹೋಗಿದೆ ಅಂತ ಮೇಲಿಂದ ಅನಸಿದರೂ ಎಲ್ಲೊ ಅಂತರಾಳದಲ್ಲಿ ಹೊಸ ದೇಶ, ಭಾಷೆ, ಸಂಸ್ಕ್ತ್ರಿತಿ, ಸಂಸ್ಕಾರ ನೋಡಲು, ಅನುಭವಿಸಲು ಸಿಗುತ್ತೆ ಅಂತ ಏನೋ ಒಂದು ತೃಪ್ತಿ. ಪ್ರತಿಯೊಂದು ಊರಿಗೆ, ದೇಶಕ್ಕೆ, ಭಾಷೆಗೆ ತನ್ನದೇ ಅದ ಒಂದು ವೈಶಿಷ್ಟ್ಯ.

ಸ್ಕೂಲ್ ನಲ್ಲಿ ಬಾಲ್ಯದ ನೆನಪು, ಕಾಲೇಜ್ನಲ್ಲಿ ಸ್ಕೂಲಿನ ನೆನಪು, ಜಾಬ್ನಲ್ಲಿ ಕಾಲೇಜ್ ನೆನೆಪು. ಹಂಗೆ ಹೊಸ ಪ್ರಾಜೆಕ್ಟ್ ನಲ್ಲಿ ಹಳೆ ಪ್ರಾಜೆಕ್ಟ್ ಮೇಟ್ಸ್, ಹಳೆ ವರ್ಕ್ ಕಲ್ಚರ್, ಹಳೆ ಪ್ರಾಸೆಸ್ ನೆನಪು. ಅದೇ ಅಲ್ಲವೇ ಜೀವನ ಹಳೆಯ ಸವಿ ನೆನಪನ್ನು ಸವಿಯುತ್ತ ಹೊಸದತ್ತ ದಾಪುಗಾಲು ಹಾಕುವದು. ಆದರೆ ಎಸ್ಟೆ ಊರು ಸುತ್ತಲಿ, ದೇಶ ಸುತ್ತಲಿ ನಮ್ಮ ಪರ್ಸನಾಲಿಟಿಗೆ ನಾವು ಹುಟ್ಟಿ ಬೆಳೆದ ಊರಿನ ಟಚ್ ಇದ್ದೆ ಇರುತ್ತೆ. ಒಂದು ಹಾಡು ಎಂತೆಂತ ಏನಪು ಹುಟ್ಟಿ ಹಾಕ್ತವ ಅಂತ ಯೋಚಿಸಿ ನನ್ನಸ್ಟಕ್ಕೆ ನಾನೇ ನಕ್ಕು ಸುಮ್ಮನಾದೆ :)

7 comments:

  1. chandada haadinondige nenapina bhaavanegala jodane... nice..!!!

    ReplyDelete
  2. ಸರಿಯಾಗಿ ಹೇಳಿದ್ದಿರಿ... ಜೀವನದಲ್ಲಿ ಆಗು ಹೋಗುಗಳ ಬಗ್ಗೆ ಸಾಕಷ್ಟು ಹಾಡುಗಳು ನಮಗಾಗಿಯೇ ಇವೆ ಅನಸುತ್ತೆ...
    ತುಂಬಾ ಚೆನಾಗಿ ಬರೆದಿದ್ದೀರಿ... ಅಭಿನಂದನೆಗಳು :)

    ReplyDelete
  3. Thanks Chukki Mam/Sitaram Sir and Manasa avare :-)

    ReplyDelete
  4. IshwarJakkali ,
    ಹೌದು ಒಂದೊಂದು ಹಾಡುಗಳು ಹಾಗೆಯೆ..
    ನನಗಂತೂ 'ಮಠ' ಚಿತ್ರದ 'ಸತ್ಯಮೇವಜಯತೆ' ಹಾಡು ತುಂಬಾನೇ ತಿಳಿಸಿಕೊಡ್ತು..

    ReplyDelete
  5. ಛಲೋ ಬರಿದೀರಿ..ಈಶ್ವರ್..
    "ನಮ್ಮ ಪರ್ಸನಾಲಿಟಿಗೆ ನಾವು ಹುಟ್ಟಿ ಬೆಳೆದ ಊರಿನ ಟಚ್ ಇದ್ದೆ ಇರ್ತದ.."
    ಖರೇ ಮಾತ್ ಆಡೀರಿ..ನಿಮ್ಮ ಬರಹದಾಗೂ ಅದೇ accent ಉಳಿಸಿಕೊಳ್ರಲಾ..ಓದ್ಲಿಕ್ ನಮಗೂ ಚೆ೦ದ್ ಅನಿಸ್ತದ..

    ಶುಭಾಶಯಗಳು
    ಅನ೦ತ್

    ReplyDelete