Wednesday, June 2, 2010

ನಮ್ಮದು ಭಾರಿ ಲೆವಲ್ರಿ ...ನಮ್ಮ ಲೆವೆಲ್ ತಕ್ಕ ಕನ್ಯಾ ಸಿಕ್ಕಿಲ್ಲರಿ ..

ಎಲ್ಲಾರಿಗೂ ವಯಸ್ಸು ಅಕ್ಕವ,
ಹಂಗ ನಂಗು ವಯಸ್ಸು ಆಗ್ಯಾವ
ಮನ್ಯಾಗ ಹಿರಯರು ಅಂದಾರ ಲಗ್ನ ಮಾಡ್ಕೊಳಲೊ ಬೆಪ್ಪೆ..

ವಯಸ್ಸಿನ ಹುಡ್ಗ ಇವ,
ಲಗ್ನದ ಹುಳ ತೆಲ್ಯಾಗ ಹೊಕ್ಕವ
ಸುರು ಆತು ಲೆಕ್ಕಾಚಾರ ಎಂತ ಹುಡಗಿನ ನಾ ಒಪ್ಪೇ ?

ರಂಬೆ ಊರ್ವಶಿ ಹುಡಿಕಿ ತರುವ ತವಕ
ಹಾರ ಕುದರಿ ಬೆನ್ನ ಏರಿ ಹಾರಿ ಹೋಗೋ ಹುರುಪು
ಜೋಡಿಯಾಗಿ ದೇಶ ಸುತ್ತಿ ಚೈನಿ ಹೊಡಿಯೋ ಕನಸು ತಪ್ಪೇ?

ನಮಗೇನು ಗೊತ್ತು ಮುಂದಿನ ಹಕ್ಕಿಕತ್ ಏನಂತ
ಗೊತ್ತಾಯ್ತು ಮಾಡರ್ನ್ ಹುಡಿಗ್ಯಾರ ಲೆವಲ್ ಭಾರಿ ಅಂತ
ನೋಡಿ ಅನಸ್ತು ನಾ ಬಾವ್ಯಾಗಿನ ಕಪ್ಪೆ

ಒನ್ನೆದಾಕಿ ನೋಡಾಕ ಚೂರು ಕಪ್ಪು
ಮೂಗ ಮುರಕೊಂತ ಕೇಳ್ತಾಳ
ಆಕಳು ಕಪ್ಪಾದರೆ ಹಾಲು ಕಪ್ಪೇ?

ಮತ್ತೊಂದು ಕನ್ಯಾ ವಯಸ್ಸು ಜಾಸ್ತಿ
ಕನ್ಯಾ ತೋರುಸು ಏಜೆಂಟ್ ಅಂತಾನ
ಹುನಿಸಿಮರ ಮುಪ್ಪಾದರೆ ಹುಳಿ ಮುಪ್ಪೇ?

ಮತ್ತೊಬ್ಯಾಕಿ , ಮಾತೆತ್ತೀದರ ಫಾರೆನ್ ಅ೦ತಾಳ
ಹೆಸರಿಗಿಂತ ಮುಂಚೆ ಪಗಾರ ಕೇಳ್ತಾಳ
ಇಕಿನ ಕಟಕೊ೦ಡ್ರ ಕೈಗೆ ಚಿಪ್ಪೇ

ದೊಡ್ಡವರು ಹೇಳ್ತಾರ ಕನ್ಯಾ ಹುಡುಕೋದು ಸರಳಿಲ್ಲ
‘3 roses’ ಚಾದ೦ಗ ಬಣ್ಣ, ರುಚಿ, ಶಕ್ತಿ ಎಲ್ಲ ಸಿಗಂಗಿಲ್ಲ
ಎಲ್ಲೆರ ಸ್ವಲ್ಪಕಂಪ್ರೋಮೈಸ್ ಆಗಬೇಕು ‘ಅಪ್ಪಿ’

ಹಿಂಗ ಎಲ್ಲಿತನಕ ಕಾಯೋದು
ಎಸ್ಟ ಅಂತ ಕನ್ಯಾ ನೋಡೋದು
ಹಿಂಗ ಅದ್ರ ಮುಂದ ಕೈಯಾಗ್ ಚಿಪ್ಪೆ

8 comments:

  1. ಕವನ ಚಂದ ಐತಿ.ಲಗೂನ ಒಳ್ಳೇ ಕನ್ಯಾ ಸಿಗಲಿ.

    ReplyDelete
  2. ನಿಮ್ಮ ಕವನ ಚೆನ್ನಾಗಿದೆ..ಬೇಗೆ ಹುಡುಗಿ ಹುಡುಕಿರಿ ಇಲ್ಲ ಅಂದ್ರೆ ಕಷ್ಟ ಆದೀತು .

    ReplyDelete
  3. ಜಬರ್ದಸ್ತ ಬರದಿರೀ... ಹಾಸ್ಯಪೂರ್ಣವಾಗಿದೆ...
    ನಿಮ್ಮ ಲೆವೆಲ್ಗೆ ತಕ್ಕ ಕನ್ಯಾ ಸಿಗಲಿ :)

    ReplyDelete
  4. ಹಹಹ,, ಭಾಳ ಛಲೋ ಬರ್ದೀರೀ....ಅಂಧಂಗ....ಹುಡ್ಗೀನ್ ಹುಡ್ಕೋಕ್ ಶರು ಹಚ್ಕೊಳ್ಳಿ ಮತ್ತ...

    ReplyDelete
  5. Thanks to all for yr comments n wishes :-)

    ReplyDelete
  6. chinthee madbyaadree.. yappaa..
    lagoona hudgi sigtaalree....madivi aakkathee...

    nice poem..

    ReplyDelete
  7. Thx for yr wishes and comments ..Chukkichittara avare

    ReplyDelete