Thursday, September 18, 2014

ನನ್ನ ಮತ್ತು ನನ್ನವಳ ದೋಸ್ತಿ..

ನನ್ನ  ಮತ್ತು ನನ್ನವಳ ದೋಸ್ತಿ
ತುಂಬಾ ತುಂಬಾ ಜಾಸ್ತಿ 
ಪ್ರೀತಿಯೆ ನಮ್ಮ ಸ್ತಿರಾಸ್ತಿ 
ಅದುವೆ ನಮ್ಮ ಮೆಣ ಬಸತಿ

ನನ್ನ ಮತ್ತು ನನ್ನವಳ ದೋಸ್ತಿ
ಯಾವಾಗಲೂ ಮಸ್ತಿ 
ಒಮ್ಮೆಮ್ಮೆ ಬಿಳುತ್ತೆ ಕುಸ್ತಿ
ಖಂಡಿತಾ ಅವಳಿಗೇ ಪ್ರಶಸ್ತಿ 

ನನ್ನ ಮತ್ತು ನನ್ನವಳ ದೋಸ್ತಿ
ಬಿಟ್ಟರೆ, ಜೀವನವೇ  ನಾಸ್ತಿ 
ಅವಳ ಮನದಲ್ಲೆಯೇ ನನ್ನ ವಸತಿ 
ಅವಳೇ ನನ್ನ ಸತಿ, ಆತ್ಮರತಿ

ನನ್ನ ಮತ್ತು ನನ್ನವಳ ದೋಸ್ತಿ 
ಗಟ್ಟಿ ಬಂಗಾರದ ಸೂರ್ತಿ 
ಬಿಟ್ಟಾಗ ಬಿರುಕು ಒಂದೊಂದ್ ಸರ್ತಿ 
ಮಾಡಬೇಕು ತುರಂತ ದುರಸ್ತಿ 

ಜೀವನ ಕಷ್ಟ ಸುಖಗಳ ಜಂಗಿಕುಸ್ತಿ 
ಜೋಡಿ ಕೂಡಿ ಹೋರಾಟವೆ ನಮ್ಮ ಆಸ್ತಿ 
ಅಂತರಂಗದ ಆತ್ಮವಿಶ್ವಾಸ ಚಿರಾಸ್ತಿ 
ಸಂಭಂದದ ಸರಪಳಿಗಳು ಜಬರದಸ್ತಿ ..  

 

ಮನವೆ, ತುಟಿಗಚ್ಚಿ ಹಿಡಿಯದಿರು ನೋವ..

ಮನದಿ ತುಟಿಗಚ್ಚಿ ಹಿಡಿದಿರುವ ನೋವ 
ಬಾರದೆ ಅಡಗಿರುವ ಮಾತುಗಳ ಭಾವ
ಬರದ ಮಾತನು ಪದಗಳಲಿ ಪೊನಿಸಿದ ಕಾವ್ಯ
ಸೇರಿಸಿದರೆ ಕವನಕೊಂದು ರಾಗದ ಜೀವ
ಸುರದಿ ಆಗುವುದು ಸುಂದರ ಭಾವಗೀತೆ 
ಕೇಳಿದರೆ ಆ ಗೀತೆ ಮಿಡಿಯುವುದು ಹೃದಯ
ಮುಸ್ಸಂಜೆಯ ತಂಪಲ್ಲಿ ಮಿಂದಂತೆ ಬೆಂದ ಜೀವ
ತುಂತುರಿನ ತಂಗಾಳಿಯಲಿ ತೆಲಿಹೊದಂತೆ ಮನದ ನೋವ 

ಚಿಂತಿಸದಿರು ಮತ್ತೆ ಮರುಕಳಿಸಿದರೆ ನೋವ
ಮತ್ತೆ ನೇಸರನು ಚೆಲ್ಲತಾನ ಮುಂಜಾವ
ಎಲ್ಲೆಲ್ಲೂ ಹಸಿರಾಗಿ ಚಿಗಿರ್ತಾವ ಮಾವ  
ಸುತ್ತ ಪರಿಸರದಿ ಅರಳುತಾವ  ಹೂವ
ಎತ್ತೆಲೆತ್ತಲೂ ಪಸರಿಸುತ್ತಾವ ಲವಲವಿಕೆಯ ಛಾಯೆ

ಮತ್ತೆಕೆ ಬೇಸರ ಜೀವವೆ?
ಮತ್ತೆ ನೇಸರನು ಬರುತಾನ ಕಳಿಯೊಕೆ ನೋವ
ಮನವೆ, ತುಟಿಗಚ್ಚಿ ಹಿಡಿಯದಿರು ನೋವ..  


Saturday, September 13, 2014

'ಅಮಾವಾಸ್ಯ' .. ಒಂದು ನಾಟಕ


ಅಂದು ಕಂಡ ದೃಶ್ಯವು ವೖಶಂಪಾಯನ ಸರೋವರದಲ್ಲಿ ಅಡಗಿಕೊಂಡಿದ್ದ ದುರ್ಯೊಧನನ್ನು ಹೊಡಿದೆಬ್ಬಿಸಿದಂತೆ ನನ್ನ ಮನದಲ್ಲಿ ಅಡಗಿ ಕುಳಿತಿದ್ದ ನನ್ನ ಕಲ್ಪನಾಶಕ್ತಿಯನ್ನು ಎಚ್ಹರ ಮಾಡಿತ್ತು. ಅದು 'ಅಮಾವಾಸ್ಯ' ಎಂಬ ನಾಟಕ. ಅಮೆರಿಕದಲ್ಲಿ ನೊಡಿದ ಮೊಟ್ಟ ಮೊದಲ ನಾಟಕ. ಅದು ಸಂಗಿತ, ಸಾಹಿತ್ಯ, ನಟನೆ ಹಾಗೂ ನಾಟ್ಯಕಲೆಯ ಒಂದು ಅತ್ಯುನತ ಮಿಶ್ರಣ. (ಅದಕ್ಕೆ ನನ್ನ  ಶ್ರೀಮತಿಯ ಫ್ರೆಂಡ್ 'ಶಚಿ'ಗೊಂದು ದನ್ಯವಾದ.
ಈ ಒಂದು ನಾಟಕ ನನ್ನಂತವನಿಗೆ ನಿಜವಾಗಲು ಒಂದು ಸ್ಪೂರ್ತಿ. ಬರೆಯುವ ಗಿಳಿದ್ದರು (ಹಾಬಿ) ಇದ್ದರನೂ  ಸರಿಯಾದ ಸ್ಫೂರ್ತಿ ಇಲ್ಲ, ಸನ್ನಿವೆಷ ಇಲ್ಲ, ಅಂತ ತಮಗೆ ತಾವೆ ಹೆಳ್ಕೊಂಡು lazyಯಾಗಿ ತಿರಗೊರಿಗೆ ಒಂದು ನಿಜವಾದ ಸ್ಫೂರ್ತಿ. ನಿಜ ಹೆಳ್ಬೆಕು ಅಂದ್ರೆ software ಅಟೊಮೆತಿಕ್ life ನಲ್ಲಿ ಸೃಜನಶಿಲತೆ ಇಲ್ಲ ಅಂದ್ರೆ ಜಿವ ಇರೊ robotಗಳಂತೆ ನಾವು. Then we are mere machine which follows set of instructions written by someone. ನಾಟಕ ಸೃಜನಶಿಲತೆಯ ಬಂಡಾರ.  ಅದು ನಮ್ಮ ಪುಟ್ಟ ಹೃದಯಕ್ಕೆ ಸಂತೋಷದ ಚಿಲುಮೆ ಹುಟ್ಟಿಸುತ್ತೆ, ಅದು ಮತ್ತೆ ಸಹಸ್ರಾರು ಸೃಜನಶಿಲತೆಯ ದೀಪಗಳನ್ನು ಹಚ್ಚುವುದು ಶತಸಿದ್ಧ. 'ಅಮಾವಾಸ್ಯ' ಆ ಸ್ಪೂರ್ ಎಂಬದಕ್ಕೆ ನನ್ನೀ ಎರೆಡು ಸಾಲು..  

ಬಣ್ಣ ಹಚ್ಚಿದರಷ್ಟೆ ನಾಟಕವಾಗದು
ಅದಕ್ಕೆ ಒಂದೆರೆಡು ಸಾಲು
ಆ ಸಾಲಿಗೆ  ಆರ್ಥ  
ಒಂದು  ಸುಮದುರವಾದ ರಾಗ 
ಆ  ರಾಗಕ್ಕೆ ಜೀವ 
ಮತ್ತೆ ಸುಂದರವಾದ ಸಾಹಿತ್ಯ
ಸಾಹಿತ್ಯಕ್ಕೆ ತಕ್ಕ ನೃತ್ಯ 
ಅದೊಂದು ಸುಂದಕಾಂಡವಾಗುವುದು 
ಪ್ರೇಕ್ಷಕ ಮಂತ್ರಹಾಕಿದ ಮೂಕನ೦ತೆ 
ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ
ತನು ಮನ ತೂಗುವನು
ಅದಕ್ಕೆ 'ಅಮಾವಾಸ್ಯ' ಸಾಕ್ಷಿ
 
Creativity is a chain reaction, an act of creativity enlightens zillions of minds with or without knowledge of it.



Saturday, December 11, 2010

ನೀನೆ ನನ್ನ ಪರಪ೦ಚ ...

ಪ್ರೀತಿ ಅಂದರೇನು? ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸ್ತಾರೆ ? ಪ್ರೀತಿ ಆಳ ಕಂಡು ಹಿಡಿದವರ್ಯಾರು? ಆ ಆಳವನ್ನು ಅರಿಯಲು ತ್ಯಾಗದ ಅವಶ್ಯಕತೆ ಎಷ್ಟು? ಒಬ್ಬರು ಇನ್ನೊಬ್ಬರಿಗಾಗಿ ಏನನ್ನು ಅಥವಾ ಯಾರನ್ನು ತ್ಯಜಿಸುತ್ತಾರೆ ಅನ್ನುವ ಮೂಲಕವೇ ಪ್ರೀತಿಯನ್ನು ಅಳಿಯಬೇಕಾ? ಪ್ರೀತಿಗೆ ತ್ಯಾಗಕ್ಕೆ ಎ೦ತಹ ಸ೦ಬ೦ಧ? ಎರೆಡಕು ಏನು ಭಾ೦ದವ್ಯ? ಪ್ರೀತಿಯನ್ನು ತ್ಯಾಗವೆ೦ಬ ಇ೦ಚುಪಟ್ಟಿಯಿ೦ದಲೆ ಅಳಿಯಬೇಕಾ ? ಅದಕ್ಕೆ ಬೇರ್ಯಾವ ಮೌಲ್ಯಮಪಾನ ಸಾಟಿ ಇಲ್ವಾ ?

ಎರೆಡು ಪ್ರೀತಿಸುವ ಮನಸ್ಸುಗಳು ಸದಾ ಒಂದನ್ನೊಂದು ನೀನೆಸ್ಟು ನನ್ನನ್ನು ಪ್ರೆತಿಸ್ತೀಯಾ ಅ೦ತ ಯಕ್ಷಪ್ರಶ್ನೆಯನ್ನು ಹೆಗಲಮೆಲೆರಿಸಿಕೊ೦ಡೆ ಸವಾರಿ ಮಾಡುತ್ತಿರುತ್ತವೆ. ದೆವಾನ್ ದೇವತೆಗಳಾಗಿರಲಿ, ಮಹಾನ್ ಪ್ರೆಮಿಗಳಾಗಿರಲಿ, ಯುವ ಪ್ರೆಮಿಗಳಾಗಿರಲಿ ಈ ಯಕ್ಷ ಪ್ರಶ್ನೆ ಸದಾ ಇದ್ದೆ ಇರುತ್ತದೆ. ಎಸ್ಟೆ ವರ್ಷಗಳ ಪ್ರೀತಿಯಾಗಿರಲಿ, ಎಸ್ಟೆ ದಿನಗಳ ಪ್ರೆತಿಯಾಗಿರಲಿ ಪ್ರತಿಗಳಿಗೆಯಲ್ಲೂ ಎಲ್ಲ ಪ್ರೇಮಿಗಳೂ ಈ ಪ್ರಶ್ನೆಗೆ ಒಂದಲ್ಲ ಒಂದು ರೇತಿಯಿ೦ದ ಉತ್ತರ ಕೊಡ್ತಾನೆ ಇರ್ತಾರೆ.

ಸಹಸ್ರಾರು ಕೋಟಿ ಜನರಿರುವ ಈ ವಿಶಾಲ ಜಗತ್ತಿನ್ನಲ್ಲಿ ನಾನು ಒಬ್ಬ ವ್ಯಕ್ತಿ. ಅವಳೊಬ್ಬ ವ್ಯಕ್ತಿ. ನನಗೆ ಅವಳೇ ಪರಪಂಚ. ಅವಳಿಲ್ಲದೆ ಈ ಪರಪಂಚ ನನಗೆ ಶೂನ್ಯ. ಅವಳಿಗೆ ನಾನೇ ಪರಪ೦ಚ. ಅವಳಿಗೆ ನಾನೇ ಪರಪಂಚ ಅನ್ನೋದೆ ಈ ಜೀವಕ್ಕೆ ಸಮಾಧಾನ. ನನ್ನವಳಿಗೆ ನಾನೇ ಪರಪಂಚ ಅನ್ನೋ ಭಾವನೆಯ ಸಾಕು ಬದಕು ಕಟ್ಟಲು, ಕನಸು ಹೆಣೆಯಲು. ಆ ಭಾವವೇ ಯಾವ ತ್ಯಾಗಕ್ಕೂ ಸಿದ್ದ ಮಾಡುತ್ತದೆ. ಆ ತ್ಯಾಗವೇ ಪ್ರೀತಿಯಂಬ ದೀವಿಗೆಗೆ ಎಣ್ಣೆಯಾಗಿ ಸದಾ ಬೆಳಗುವಂತೆ ಮಾಡುತ್ತದೆ. ತ್ಯಾಗವೊಂದೆ ಪ್ರೀತಯ ಮುಲ್ಯಮಾಪನ ಅನ್ನೋದು ಸತ್ಯವಲ್ಲವಾದರು ತ್ಯಾಗ ಪ್ರೀತಿಯ ಒಂದು ರೂಪ.

ಪುಟ್ಟನ೦ಜಿ ಇಲ್ಲದೆ ರತ್ನನ ಪರಪಂಚ ಇಲ್ಲ
ನೀನಿಲ್ಲದೆ ನನ್ನ ಪರಪಂಚ ಇಲ್ಲ
ನಾನೇ ನಿನ್ನ ಪರಪಂಚ ಎಂಬ ಭಾವವೆ ಸಾಕು
ಹೃದಯ ಅರಳಲು
ಕನಸು ಚಿಗಿಯಲು
ಬದುಕು ಕಟ್ಟಲು
ನೀನೆ ನನ್ನ ಪರಪ೦ಚ ...
ನೀನೆ ನನ್ನ ಪರಪ೦ಚ ...

Sunday, November 28, 2010

ಶ೦ಖದಿ೦ದ ಬಂದ್ರನ ತೀರ್ಥ..

ಮಾತಾಡಿದರ ಮುತ್ತಿನಂಗ ಇರಬೇಕು
ಮಾತಾಡಿದರ ಸಲಾಕಿಹಂಗ ಇರಬೇಕು
ಹಂಗ ಮಾತಾಡಬೇಕು ಹಿಂಗ ಮಾತಾಡಬೇಕು
ಅಂತ ಬಸವಣ್ಣ ಹೇಳಿದ್ದನ್ನು
ಮಸ್ತಾರ್ ಸಾಲ್ಯಾಗ ಕಲಿಸಿದ್ರು...


ಮಾತಾಡಿದರ ಅರ್ಥ ಇರಬೇಕು
ಪ್ರತಿ ಶಬ್ದದಾಗ ತೂಕ ಇರಬೇಕು
ಮನಸನೆ೦ದು ಮಾತನ್ಯಾಗ ಇರಬೇಕು
ಮಾತನೆ೦ದು ಮನಸ್ನ್ಯಾಗ ಇರಬೇಕು
ಅಂತ ನಮ್ಮಮ್ಮ ಹೇಳಿದ್ದಳು


ಯಾರು ಹೇಳಿದ್ದು ಎಷ್ಟು ತೆಲ್ಯಾಗ ಹೊಕ್ಕಿರ್ಲಿಲ್ಲ
ಇವತ್ತ ನನ್ನಾಕಿಗೆ ಏನೋ ಅಂದ್ಯಾ,
ಆಕಿ ಏನ ತಿಳಕೊ೦ಡ್ಳು
ಆವಾಗ ನಮ್ಮಮ್ಮ ನಮ್ಮ ಮಾಸ್ತರ
ಹೇಳಿದ್ದು ನೆನಪಿಗೆ ಬಂದಿತ್ತು ...

"ಅದಕ್ಕ ಅನ್ನುದು ಶ೦ಖದಿ೦ದ ಬಂದ್ರನ ತೀರ್ಥ ಅಂತ ...."
ಎಲ್ಲಿ೦ದ ಬೇಕು ಅಲ್ಲಿ೦ದ ಬ೦ದ್ರ ಲಗೂನ ತಿಳದ ತಿಳಿತೈತಿ .."

Saturday, November 20, 2010

ಬಚ್ಚಿಟ್ಟ ಬುತ್ತಿ ..

ನಾ ಕೊಟ್ಟ ಗೆಜ್ಜೆ ಕಟಗೊ೦ಡು
ಲಜ್ಜೆಯಿ೦ದ ನಾಚಗೊ೦ಡು
ಹೆಜ್ಜಿ ಮ್ಯಾಲ ಹೆಜ್ಜಿ ಹಕ್ಕೊ೦ಡು
ನೆಡೆವ ಅವಳನ್ನು,
ಅವಳ ತು೦ಟ ನಗೆಯನ್ನು,
ಹೊಳೆವ ಕ೦ಗಳನ್ನು
ನನ್ನ ಕಣ್ಣ ರೆಪ್ಪೆಯಲಿ ಸೆರೆ ಹಿಡಿದು
ಎದೆಯ ಗೂಡಲಿ ಬಚ್ಚಿಟ್ಟು
ಅವಳ ನೆನಪಾದಗೊಮ್ಮೆ
ಬಚ್ಚಿಟ್ಟ ಬುತ್ತಿಯ ಬಿಚ್ಚಿ
ತಿನ್ನುವ ಬಾಗ್ಯ ನನ್ನದಿರಲಿ !!

Monday, October 25, 2010

ನನ್ನಾಕಿ ..ನಾಚಿಕೊ೦ಡಾಗ ಇನ್ನು ಚಂದಾಕಿ ..

ಆಕಿ ಮಾಡ್ಯಾಳ ಮೋಡಿ
ನಾ ಆಗೀನಿ ಮೂಡಿ
ಆಕಿಗೆ ಹೇಳಬೇಕು ಕಾಡಿ
ನಮ್ಮಿಬ್ಬರದು ಎಂತ ಜೋಡಿ

ನಂದು ಆಕಿದು ಜೋಡಿ
ಹೇಳಿ ಮಾಡಸ್ತಂಗ್ ಐತಿನೋಡ್ರಿ
ನಾನು ಆಕಿ ಕೂಡಿ
ನೆಡ್ಸಬೆಕು ಜೀವನದ ಸ್ಕೊಟರ ಗಾಡಿ

ನನ್ನ ನೋಟಕ್ಕ ನಗೆಯ ಚೆಲ್ಲಿ
ಕರ್ಪೂರದಂಗ ಕರಗ್ತಾಳ
ನನ್ನ ಮಾತಿಗೆ ಹುಬ್ಬೇರಿಸಿ
ಹೌದು ಹೌದು ಅಂತಾಳ

ಆಕಿ ಕಣ್ಣಾಗ ಕಣ್ಣಿಟ್ಟು ನೋಡೀದ್ರ
ನಾಚಿ ನೀರ್ ಆಗ್ತಾಳ
ಆಕಿನ ಹೊಗಳೀದ್ರ
ಹಾರಿ ಹಕ್ಕಿ ಆಗ್ತಾಳ

ಶೆಟ್ಟರ ಹುಡಗಿ ಸೆಟಗೊ೦ಡ್ರ
ಬಾಳ ಚೆಂದ ಕಾನತಾಳ
ಸಾಫ್ಟ್ವೇರ್ ಹುಡಗಿ ನಾಚಕೊ೦ಡ್ರ
ಮಿರಿ ಮಿರಿ ಮಿಂಚತಾಳ