ಮುಂದಿನ ತಿಂಗಳು ಭಾರತಕ್ಕೆ ಹೋಗಲು ಟಿಕೆಟ್ಸ್ ಬುಕ್ ಮಾಡಿ ಬಂದು ಒಂದು ಕಪ್ ಟೀ ಹೀರತಾ ವರಾ೦ಡದಲ್ಲಿ ಕುಳಿತಿದ್ದೆ, ಅವಾಗ ಕಳೆದಬಾರಿಯ ಭಾರತದ ಪ್ರವಾಸ ನೆನಪಿಗೆ ಬ೦ತು. ಆ ಬಾರಿ ಬಹಳ ನೆನಪಿಡುವ ಘಟನೆ ನೆಡದಿದ್ದರೂ ಒ೦ದು ಘಟನೆ ನೆನಸಿ ಕೊಂಡು ತುಂಬಾ ನಗು ಬರ್ತಾ ಇತ್ತು. ಆ ದಿನಗಳಲ್ಲಿ ಇಲ್ಲಿ ಭಾರತಿಯರ ಮೇಲೆ ಹಲ್ಲೆ ನೆಡದಿದ್ದ ವರದಿಗಳು ನ್ಯೂಸ್ ಚಾನೆಲ್ಗಳಲ್ಲಿ ಸರ್ವೇ ಸಾಮಾನ್ಯವಾಗಿತ್ತು. ನಮ್ಮ ಊರಿಗೆ ಹೋದಾಗ, ಅಲ್ಲಿ ಹೊಲದ ಕಡೆ ಹೋಗಿದ್ದೆ. ಅಲ್ಲಿ ನನಗೆ ಪರಿಚಯ ಇದ್ದ ಕೆಲವು ರೈತರು ಸಿಕ್ಕು ಯೋಗಕ್ಷೇಮ ವಿಚಾರಿಸಿ ಮಾತಾಡಿಸಿದರು. ಅವರಲ್ಲಿ ಒಬ್ಬರು ಎಲ್ಲಪ್ಪ ಅಂತ. ಬಾಲ್ಯದಿಂದಲೂ ಅವರ ಜೊತೆ ಒಡನಾಟ ಜಾಸ್ತಿ.
ಅವರೊಡನೆ ನೆಡದ ನೇರ ಸಂಭಾಷಣೆಯನ್ನು ನಿಮ್ಮ ಮುಂದೆ ಇಡುತಿದ್ದೇನೆ
ಎಲ್ಲಪ್ಪ: ಏನ್ ಶೆಟ್ಟರು, ಹೆಂಗ ಅದೀರಿ ...
ನಾನು: ಆರಾಮ ಅದೀನ್ರಿ
ಎಲ್ಲಪ್ಪ: ನೀವು ಫರೆನ್ಗೆ ಹೋಗಿದ್ರೆಲ ...
ನಾನು: ಹೂನ್ರಿ ..
ಎಲ್ಲಪ್ಪ: ಅಮೆರಿಕದಾಗ ಇದ್ರೆಲss
ನಾನು: ಹೂನ್ರಿ, ಮು೦ಚೆಕ ಅಲ್ಲೇ ಇದ್ದಿನ್ರಿ , ಈಗ ಆಸ್ಟ್ರೇಲಿಯದಾಗ ಅದೀನ್ರಿ.
ಎಲ್ಲಪ್ಪ: ಒಹ್ ಹ೦ಗನ್ರಿ, ಅಲ್ಲಿನು ಉಳ್ಳಗಡ್ಡಿ ೧೫೦ ರುಪಾಯಕ್ಕ ಕೆಜಿ, ಅಕ್ಕಿ ಸಾವಿರುಪಾಯಕ್ಕ ಹತ್ತ ಕೆಜಿ ಅನ್ನ್ರಿ ಮತ್ತs ...
[ಅವರು ನಾನು ಅಮೆರಿಕಾದಾಗ ಇದ್ದಾಗ ಹೇಳಿದ್ದ ಇರುಳ್ಳಿ, ಅಕ್ಕಿ ಬೆಲೆಯನ್ನು ನೆನಪಿಟ್ಟು, ಆಸ್ಟ್ರೇಲಿಯದಲ್ಲಿ ಎಷ್ಟು ಅಂತ ಕೇಳ್ತಾ ಇದ್ದಾರೆ]
ನಾನು: ಒಂಚೂರು ಹೆಚ್ಚು ಕಮ್ಮಿ ಅಸ್ಟರೀ
ಎಲ್ಲಪ್ಪ: ವೊಟ್ಟ ನೀವು ಎಲ್ಲೇ ಹೊದ್ರುನು ತುಟ್ಟಿ ಊಟ ಮಾಡವ್ರು ಅನ್ರಿ ...
ನಾನು: ಹ೦ಗೆನಿಲ್ರಿ, ಅಲ್ಲೇ ರೇಟು ಇದ್ದಷ್ಟು ಕೊಟ್ಟ ತಿನಬೇಕಲ್ಲರಿ ...
ಎಲ್ಲಪ್ಪ: ಅದು ಖರೆ ಐತಿ ಬಿಡ್ರಿ ...
ಅಂದಂಗ ಅಲ್ಲೇ ನಮ್ಮ ಮಂದಿಗೆ ಬಾಳ ತ್ರಾಸ ಕೊಡಾಕುಂತ್ತರಂತಲ್ಲ್ರಿss ನಮಗರ ಏನ್ ಗೊತ್ತು ಮನ್ನೇ ಟಿವ್ಯಾಗ ತೋರ್ಸಿದ್ರು,
ನೀವು ಹುಶಾರಾಗಿರ್ರೆಪ ..
ನಾನು: ಹೂನ್ರಿ ಇರ್ತೀನ್ರಿ ..
ಎಲ್ಲಪ್ಪ: ಅಲ್ಲ ನನ್ನ ಕೇಳಿದ್ರ ಸುಮ್ಮನ ಬಿಟ್ಟ ಬ೦ದು, ಚೋಲೋತೆಂಗ ಕನ್ಯಾ ನೋಡಕೊಂಡು ಇಲ್ಲೇ ಇರೋದು ಬೇಸಿ ಅಂತೀನಿ .... ಏನಪ ರಗಡ ದೇಶ ಸುತ್ತೀರಿ ರಗಡ ರೊಕ್ಕ ಮಾಡೀರಿ, ಚೋಲೆತೆಂಗ ಲಗ್ನ ಆಗಿ ಇಲ್ಲೇ ನಮ್ಮ ದೇಶದಾಗ ಆರಾಮಾಗಿ ಇರಬಾಡದ್ರೆಪ್ಪss..
ನಾನು: ಹೌದ್ರಿ ಒಂಚೂರು ಗಲಾಟೆ ಐತಿ ...
ಎಲ್ಲಪ್ಪ: ಅಲ್ಲರಿ ಅನ್ನುದರ ಏನ್ ಅ೦ತಾರ ಅವ್ರು ... ಸುಮ್ಮ ಸುಮ್ಮನ ನಮ್ಮ ಮ೦ದಿ ಯಾಕ ತಡವತಾರ ಅವ್ರು ...ಒಮ್ಮೆ ಕರಡು ಕು೦ದ್ರಿಸಿ ಕೆಳಬೇಕಪ... ಹಿ೦ಗ ಹಿ೦ಗಿ೦ಗ ಹಿ೦ಗಿ೦ಗೈತಿ ಹಿ೦ಗಿ೦ಗಿಲ್ಲ ಹೊ೦ದಕೊ೦ಡು ಹೋದ್ರ ಎಲ್ಲರವು ಬಾಳೆ ಸುದ್ದ ಅಕ್ಕವು ...
ಅ೦ತ ತಿಳಿಸಿ ಹೇಳ್ರಿ ....ಇಲ್ಲ೦ದ್ರ ಐತೆಲ ಬಾರ್ಕೊಲು ... ಸೋನ್ನಿ ಮ್ಯಾಗ ತಿಲಕೊಂದ್ರ ಸೈ ಅನ್ನು ಇಲ್ಲಂದ್ರ ಬರ್ಕೊಲ ಗತಿ ಇ೦ತವಕ ...
[ನನಗೆ ಮನಸ್ಸಿನಲ್ಲಿ ನಗು ...ಆದರು ಮುಕದಲ್ಲಿ ಗ೦ಭೇರತೆ ತೋರಸ್ತ ಇದ್ದೆ ...]
ನಾನು: ಇಲ್ಲ ಕಡಿಮೆ ಆಗಕುಂತೈತ್ರಿ ಈಗ ...
ಎಲ್ಲಪ್ಪ: ಅಲ್ಲ ನಮ್ಮ ಕ್ರಿಸ್ನ ಏನ್ ಕೆಲಸ ಮಾಡವಲ್ಲರಿ ಇವ ... ಸುಮ್ಮನ ಮೂಗು ಮು೦ದ ಮಡಕೊ೦ಡು ತಾಸಿಗೊ೦ದು ಮಾತಡಕೊ೦ತ ..... ಆಗ್ಲಿಲ್ಲ ಹೋಗಲಿಲ್ಲ ....ಲಾಲು ಇಲ್ಲ ಮೋದಿನ ಪಾಡರಿ .... ನಮ್ಮ ಕ್ರಿಸ್ನ ಸಪ್ಪನ ಬ್ಯಳಿರಿ ...
ಅಸ್ಟರಲ್ಲಿ ನನ್ನ ಫೋನು ರಿ೦ಗ ರಿ೦ಗ ರಿ೦ಗಾ......ರಿ೦ಗ ರಿ೦ಗ ರಿ೦ಗಾ .......ಅ೦ತ ಹೊಡಕೊಳ್ತಾ ಇತ್ತು ...ನಾನು ಎಲ್ಲಪ್ಪರಿಗೆ ಮತ್ತ ಬೆಟ್ಟಿ ಅಕ್ಕಿನ್ರಿ ಅ೦ತ ಹೇಳಿ ಹೊರಟೆ ... ....
Tuesday, July 27, 2010
Thursday, July 22, 2010
Some Bun The ...
ಯಾವದು ಈ ಬಂಧ
ಏನು ಈ ಅನುಬಂಧ
ಹೇಗೆ ಈ ಸಂಬಂಧ
ಪ್ರಾಣಸಖಿ ಎನ್ನಲೇ
ಚಂದ್ರಮುಖಿ ಎನ್ನಲೇ
ಗಗನಸಖಿ ಎನ್ನಲೇ
ಒಂದೇ ಕೊಟ್ಟಿಯ ದನಗಳಂತೆ
ಒಂದೇ ಗೂಡಿನ ಹಕ್ಕಿಗಳಂತೆ
ಒಂದೇ ತೋಟದ ಹೂಗಳಂತೆ …
ನನ್ನ ಹಾಡಿನ ರಾಗ ನೀನು
ಆ ರಾಗದ ಸ್ವರ ನೀನು
ಆ ಸ್ವರದ ಜೀವ ನೀನು ....
ಏನು ಈ ಅನುಬಂಧ
ಹೇಗೆ ಈ ಸಂಬಂಧ
ಪ್ರಾಣಸಖಿ ಎನ್ನಲೇ
ಚಂದ್ರಮುಖಿ ಎನ್ನಲೇ
ಗಗನಸಖಿ ಎನ್ನಲೇ
ಒಂದೇ ಕೊಟ್ಟಿಯ ದನಗಳಂತೆ
ಒಂದೇ ಗೂಡಿನ ಹಕ್ಕಿಗಳಂತೆ
ಒಂದೇ ತೋಟದ ಹೂಗಳಂತೆ …
ನನ್ನ ಹಾಡಿನ ರಾಗ ನೀನು
ಆ ರಾಗದ ಸ್ವರ ನೀನು
ಆ ಸ್ವರದ ಜೀವ ನೀನು ....
Subscribe to:
Posts (Atom)