Friday, April 30, 2010

ನನ್ನವಳು..

ಚೂರು ಅ೦ದಗಾತಿ, ಚೂರು ಮಾಟಗಾತಿ, ಚೂರು ಮುಖದಲ್ಲಿ ಲಕ್ಷಣ ಇರ್ಬೇಕು, ನಗು ಎದ್ದು ಕಾನತಿದ್ರುನು ಅಲ್ಲಲಿ ಅವಾಗಿವಾಗ ಹಂಗ ಬ೦ದು ಹಿಂಗೋ ಗಾಂಭೀರ್ಯ, ಬಾಯಲ್ಲಿ ಕಾಣೋ ನಗುಗಿಂತ ಜಾಸ್ತಿ ಮುಕದಲಿ ನಗು ಇರ್ಬೇಕು, ಮುಕದಲ್ಲಿ ಕಣೋ ನಗುಗಿಂತ ಮನಸನಲ್ಲಿ ನಗು ಇರ್ಬೇಕು, ಆ ನಗುವಿನಲಿ ತುಂಟತನ, ಸಮಯಕ್ಕ ತಕ್ಕಂತೆ ಸೆನ್ಸ್ ಆಫ್ ಕಾಮಿಡಿ, ಚೂರು ಹುಸಿಗೋಪ, ಚೂರು ಮೊಂಡುತನ, ಲೈಟಾಗಿ possessiveness, ಏನೇನೋ ಹುಡಕೊವಂತ ಅತ್ತಿತ್ತ ಓಡಾಡುವ ಕಂಗಳು, ಮನಸತುಂಬ ಮುಗ್ದ ಬಾವನೆ ಆದ್ರೆ ಬೇಕಾದಷ್ಟು ಬೆರಿಕಿತನ, ನಾಜೂಕು ಮಾತು, ಸ್ವಲ್ಪ ಸಂಗೀತದಲಿ ಮಿ೦ದಿರೋವಳು, ಸ್ವಲ್ಪ ಸಾಹಿತ್ಯದ ಗಾಳಿ ಗಂಧ ಗೊತ್ತಿರೊಳು, ತಟಗು ಜಾನಪದದ ಸೊಗಡಿನ ಸಿಂಚಿನ, ಹಸಿದಾಗ ಹೊಟ್ಟೆಗೆ ಹಿಟ್ಟಿಡೊವಶ್ಟು ನಳಪಾಕತನ,
ಮೇಲಿಂದ modern ಲೂಕಿದ್ದು ಒಳಗಿಂದ ಹಳೆಯ ಸಂಸ್ಕೃತಿ ತುಂಬಿರೋವಳು, ಮಾತಿನಲ್ಲಿ ನನ್ನನ್ನು ಬಿಟ್ಟುಕೊಡದೆ ಇರೋಳು, ಅವಾಗ ಇವಾಗ ಹೊಗಳುವವಳು, ಚಾನ್ಸ್ ಸಿಕ್ಕಾಗ ಕಾಲೆಳೆವವಳು, ಚಳಿಯಲ್ಲಿ ಬಿಸಿ ಕಾಫ್ಫೀಯಂತೆ, ಬೇಸಿಗೆಯಲಿ ತಂಪು ಮಜ್ಜಿಗೆಯ೦ತೆ, ಕಸ್ಟದಲಿ ಮುಗಳ್ನಗೆ ಚೆಲ್ಲೊವವಳು, ಮನೆಯಿಂದ ಹೊರಡುವಾಗ ಒಂದು ಚಿಕ್ಕ ನಗು ಚಲ್ಲಿ ಕಳಸುವವಳು, ಮತ್ತೆ ಬಂದಾಗ broad ಸ್ಮೈಲ್ ಮಾಡಿ welcome ಮಾಡೋವವಳು.....

ಈ ಮೋಹನ ಮುರಳಿಯ ಕೊಳಲಿನ ನಾದ ಕೇಳಿ
ದೂರದ ತೀರದಿಂದ ಹಾರಿ ಬಾರೋ ಪರಿಜಾತದಂಗೆ,
ಯಾವಾಗ ಬಂದು ಪ್ರತ್ಯಕ್ಷ ಅಗ್ತಾಳೋ ಅವ್ಳು ?? ....ನನ್ನವಳು!!!

3 comments:

  1. SigaTaLa ree nimmavaLu andagarti.. matagarti... tumbaa chenaagi baritiree nivu :)

    Allalli ondistu north karnataka words use maadi...

    ReplyDelete
  2. ಒಟ್ಟನಲ್ಲಿ ನಿಮಗ ಕಾಕಟೇಲ್-ಹುಡ್ಗೀ ಬೇಕಲ್ಲನ್ರೀ.... ಹುಡುಕಿದ್ರಾತು ಬಿಡ್ರೀ....
    ಹ೦ತದ ತ೦ದು ಕಟ್ಟತೀವ್ರೀ...... ಚೆ೦ದ ಅದರೀ.... ಅದರಾ ಶಬ್ದ ಭಾಳಾ ತಿದ್ದಬೇಕ್ರೆಪ್ಪಾ.....

    ReplyDelete